Home Health Kissing Health Benefits: ಚುಂಬನ ದೇಹದಲ್ಲಿ ರೋಮಾಂಚನ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೆ ಕೂಡಾ ಒಳ್ಳೆದಂತೆ! ಲಿಸ್ಟ್‌...

Kissing Health Benefits: ಚುಂಬನ ದೇಹದಲ್ಲಿ ರೋಮಾಂಚನ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೆ ಕೂಡಾ ಒಳ್ಳೆದಂತೆ! ಲಿಸ್ಟ್‌ ನೋಡಿ ಗಾಬರಿಯಾಗಬೇಡಿ!

Kissing Health Benefits

Hindu neighbor gifts plot of land

Hindu neighbour gifts land to Muslim journalist

Kissing Health Benefits: ಚುಂಬನ ಅಂದರೆ ಒಂದು ರೀತಿಯ ರೊಮ್ಯಾಂಟಿಕ್‌ ಪ್ರಶ್ನೆ. ಕಿಸ್‌ ಹಣೆಗೆ, ಕೆನ್ನೆಗೆ ಕೊಟ್ಟಾಗ ಆಗುವ ಅನುಭವಕ್ಕಿಂತ ತುಟಿಗೆ ಕೊಟ್ಟಾಗ ಆಗುವ ಅನುಭವ ಬೇರೆನೇ ಇದೆ. ಅದಕ್ಕೊಂದು ನಿರ್ದಿಷ್ಟ ಕಾರಣವಿದೆ. ತುಟಿ ತುಂಬಾ ಮೃದು. ನರತಂತುಗಳು ಚರ್ಮದ ಕೆಳಗೆ ಇರುತ್ತದೆ. ಸಂವೇದನಾ ಶೀಲತೆ ತುಟಿಗಳಲ್ಲಿ ಬಹಳ ಬೇಗ ಆಗುವುದರಿಂದ, ಬೆಚ್ಚಗಿನ ಉಸಿರು ತಾಗಿದರೂ ಅವು ಸ್ಪಂದಿಸುವುದು ಬೇಗ. ವಿಷಯವೇನೆಂದರೆ, ತುಟಿಗಳನ್ನು ಮಿದುಳಿಗೆ ಸಂಪರ್ಕಿಸುವ ನರಗಳ ಸಂಖ್ಯೆ, ಮಿದುಳನ್ನು ದೇಹದ ಬೇರೆ ಯಾವುದೇ ಭಾಗಕ್ಕೆ ಸಂಪರ್ಕಿಸುವ ನರಗಳ ಸಂಖ್ಯೆಗಿಂತ ಹೆಚ್ಚು.

ಈ ಚುಂಬನದ ಹಿಂದೆ ಒಂದು ರೋಮಾಂಚನಕಾರಿ ಕಥೆ ಇದೆ. ಇದು ಮೊದಲು ಪ್ರಾರಂಭವಾಗಿದ್ದೇ ಚಿಂಪಾಂಜಿಗಳಿಂದ ಅಂತೆ. ಚಿಂಪಾಂಜಿಗಳು ಬಾಯಿಂದ ಬಾಯಿಗೆ ಆಹಾರ ನೀಡುವಾಗ ಲಿಪ್‌ಟು ಲಿಪ್‌ ಕಿಸ್‌ ಅನುಭವ ಆಯಿಯಂತೆ. ಹಾಗಂತ ಹೇಳುತ್ತೆ ಜೀವ ವಿಕಾಸ ಥಿಯರಿ.

ಆದರೆ ಇದು ಮಾನವನಿಗೆ ಹೇಗೆ ಬಂತು ಎಂಬುವುದು ಇನ್ನೂ ಕೂಡಾ ಸ್ಪಷ್ಟತೆ ದೊರಕಿಲ್ಲ. ಆದರೆ ಇದರ ಉಪಯೋಗವನ್ನು(Kissing Health Benefits) ಮನುಷ್ಯ ಪಡೆತಾ ಇದ್ದಾನೆ.

ಲೈಂಗಿಕತೆಯ ಒಂದು ಭಾಗ ಈ ಚುಂಬನ ಎಂಬುವುದು ಎಲ್ಲರಿಗೂ ಗೊತ್ತು. ಆದರೆ ಇಷ್ಟು ಮಾತ್ರವಲ್ಲದೇ ಈ ಚುಂಬನದಿಂದ ತೂಕ ಕಡಿಮೆ ಆಗುತ್ತದೆ ಎಂಬುವುದನ್ನು ಕೂಡಾ ವೈಟ್‌ ಮ್ಯಾನೇಜ್‌ಮೆಂಟ್‌ ಹೇಳಿದೆ. ಇದು ನಿಜ ಎಂಬುವುದು ಕೂಡಾ ಸಾಬೀತಾಗಿದೆ. ಆತಂಕ, ಖಿನ್ನತೆ ಮುಂತಾದವುಗಳು ಚುಂಬನದಿಂದ ಕಡಿಮೆ ಆಗುತ್ತದೆ, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಮುಖ್ಯವಾಗಿ ಮಾನಸಿಕ ಆರೋಗ್ಯವನ್ನು ಸಮೃದ್ಧಗೊಳಿಸುತ್ತದೆ.

ಮುಖದ ಸ್ನಾಯುಗಳಿಗೆ ಕೂಡಾ ಚುಂಬನ ಒಳ್ಳೆಯ ವ್ಯಾಯಾಮ ಕೊಡುತ್ತದೆ. ಇದರಿಂದ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಚುಂಬನದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೈಗ್ರೇನ್‌ ಕಡಿಮೆಯಾಗಲು ನಿಯಮಿತ ಚುಂಬನ ಸಹಾಯ ಮಾಡುತ್ತದೆ.

ದಂಪತಿಗಳ ಮಧ್ಯೆ ಲೈಂಗಿಕ ಸಂಬಂಧ ಚೆನ್ನಾಗಿದೆಯೋ ಇಲ್ಲವೋ ಎಂಬುವುದನ್ನು ಕೂಡಾ ಈ ಚುಂಬನದಿಂದ ತಿಳಿಯಲು ಸಾಧ್ಯವೆಂದು ವರದಿ ಹೇಳಿದೆ.

ಇದನ್ನೂ ಓದಿ: BPL Card Updates: ರೇಷನ್‌ಕಾರ್ಡ್‌ ಹೊಸ ಹೆಸರು ಸೇರ್ಪಡೆ/ತಿದ್ದುಪಡಿಗೆ ಬೇಕಾಗುವ ದಾಖಲೆಗಳ ಕಂಪ್ಲೀಟ್‌ ವಿವರ ಇಲ್ಲಿದೆ!