Home Breaking Entertainment News Kannada ಕಚ್ಚಾ ಬಾದಾಮ್ ಸಿಂಗರ್​ ಭುವನ್​ ಬದ್ಯಕರ್​ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಹಾಡು ಹಾಡುವ ಮೂಲಕ...

ಕಚ್ಚಾ ಬಾದಾಮ್ ಸಿಂಗರ್​ ಭುವನ್​ ಬದ್ಯಕರ್​ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಹಾಡು ಹಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ!!?

Hindu neighbor gifts plot of land

Hindu neighbour gifts land to Muslim journalist

ಕಚ್ಚಾ ಬಾದಾಮ್ ಹಾಡು ಕೇಳದವರೇ ಇಲ್ಲ. ಯಾಕಂದ್ರೆ ಎಲ್ಲೆಲ್ಲೂ ಈ ಹಾಡಿದ್ದೇ ಹವವಾಗಿತ್ತು. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಹೀಗೆ ಎಲ್ಲೆಲ್ಲೂ ಅದೇ ಕಚ್ಚಾ ಬಾದಾಮ್. ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಅಂತೂ ಕೇಳೋದೇ ಬೇಡ, ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಹಾಡಿ ಕುಣಿದಿದ್ದೆ. ಎಲ್ಲರನ್ನೂ ಕುಣಿದು ಕುಪ್ಪಳಿಸುವಂತೆ ಮಾಡಿದ ಭುಬನ್ ಬದ್ಯಕರ್ ಎಲ್ಲರ ಮನದಲ್ಲೂ ಅಚ್ಚಳಿಯಾಗಿ ಉಳಿದಿದೆ.

ಇತ್ತೀಚೆಗೆ ಹೊಸ ಕಾರು ಖರೀದಿಸಿ ಕಲಿಯಲು ಹೋಗಿ ಆಸ್ಪತ್ರೆ ಸೇರಿದ್ದರು. ಆದರೆ ಇದೀಗ ಮತ್ತೆ ಎಲ್ಲರನ್ನೂ ಮನರಂಜಸಲು ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ. ಹೌದು. ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಶ್ರೀಮಹದೇವ್ ಹಾಗೂ ನಟಿ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಜೂನ್ 3 ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್-ಪ್ರಮೋಷನ್​ನಿಂದಲೇ ಈ ಚಿತ್ರತಂಡ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಈಗಲೂ ಕೂಡ ಕಚ್ಚಾ ಬಾದಾಮ್​ ಸಿಂಗರ್​ ಇಟ್ಟುಕೊಂಡು ಪ್ರಚಾರ ಮಾಡಿದೆ. ಕಚ್ಚಾ ಬಾದಾಮ್ ಸಿಂಗರ್​ ಭುವನ್​ ಬದ್ಯಕರ್​ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಹಾಡು ಹಾಡಿದ್ದಾರೆ ಅಂತ ಹೇಳಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದೆ.

ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಇವರ ಪ್ರಮೋಷನ್​ ರೀತಿಯೇ ಬೇರೆಯಿದೆ. ಒಂದಲ್ಲ ಒಂದು ವಿಚಾರಕ್ಕೆ ಗಜಾನನ & ಗ್ಯಾಂಗ್​ ಸಿನಿಮಾ ಸುದ್ದಿಯಲ್ಲಿದೆ. ಇದೀಗ ಕಚ್ಚಾ ಬಾದಾಮ್​ಸಿಂಗರ್ ವಾಯ್ಸ್​ ಮಾದರಿಯಲ್ಲೇ ಹಾಡೊಂದನ್ನು ರೆಡಿಮಾಡಿದೆ. ‘ಬನ್ನಿ ಬನ್ನಿ ಥಿಯೇಟರ್​ಗೆ ಬನ್ನಿ. ನೋಡಿ ನೋಡಿ ಗಜಾನನ & ಗ್ಯಾಂಗ್​ ನೋಡಿ. ಜೂನ್​ 3ಕ್ಕೆ ನೋಡಿ . ಅಕ್ಕ, ಅಮ್ಮ, ತಂಗಿ, ಅಣ್ಣ, ತಮ್ಮ, ಅಪ್ಪ ನೋಡಿ’ ಎಂದು ಸಾಹಿತ್ಯ ಬರೆದು ಪ್ರಮೋಷನ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

https://youtu.be/AgPZIUgkUIU

ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಜೂನ್ 3ರಂದು ರಾಜ್ಯಾದ್ಯಂತ ಬರೋಬ್ಬರಿ 300ಕ್ಕೂ ಥಿಯೇಟರ್ ಗಳಲ್ಲಿ ರಿಲೀಸ್ ಆಗ್ತಿದ್ದು, ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಘೋಷಣೆ ಮಾಡಿದೆ. ‘ನಮ್ ಗಣಿ ಬಿಕಾಂ ಪಾಸ್‌” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ, ನಟ ಅಭಿಷೇಕ್‌ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯು ಎಸ್‌ ನಾಗೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.