Home Health Healthy Life: ಲೈಂಗಿಕ ಕ್ರಿಯೆಯ ನಂತರ ಈ ಕೆಲಸ ಖಂಡಿತಾ ಮಾಡ್ಬೇಡಿ!

Healthy Life: ಲೈಂಗಿಕ ಕ್ರಿಯೆಯ ನಂತರ ಈ ಕೆಲಸ ಖಂಡಿತಾ ಮಾಡ್ಬೇಡಿ!

Healthy Life

Hindu neighbor gifts plot of land

Hindu neighbour gifts land to Muslim journalist

Healthy Life: ಲೈಂಗಿಕ ಕ್ರಿಯೆ ಒಂದು ಶಾರೀರಿಕ ಕ್ರಿಯೆಯಾಗಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶರೀರದಲ್ಲಿ ಆಗುವಂತಹ ಬದಲಾವಣೆಗಳು ವರ್ಕ್ಔಟ್ ಮಾಡುವ ಸಂದರ್ಭದಲ್ಲಿ ಕೂಡ ದೊರೆಯುತ್ತದೆ. ಆದರೆ, ಲೈಂಗಿಕತೆಯ ಬಳಿಕ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಶೇಷ ಗಮನಹರಿಸಿದರೆ ಆರೋಗ್ಯಕರ (Healthy Life)ಹಾಗೂ ಖುಷಿಯ ಜೀವನ ನಡೆಸಬಹುದು.

ಲೈಂಗಿಕ ಕ್ರಿಯೆಯ ಬಳಿಕ ಪಡೆಯುವ ಭಾವಪರವಶತೆಯ ಸಂದರ್ಭ ಡಿಹೈಡ್ರೊಪಿಯಾಂಡ್ರೊಸ್ಟೊರೊನ್ (dehydroepiandrosterone) ಎಂಬ ರಸದೂತ ಬಿಡುಗಡೆಯಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ರತಿದಿನ ಸೆಕ್ಸ್ ಮಾಡುವುದರಿಂದ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಸಂಭೋಗದಿಂದ ದೇಹಕ್ಕೆ ವ್ಯಾಯಾಮ ದೊರೆಯುವುದಲ್ಲದೆ ಮೂಳೆ ಹಾಗೂ ಮಾಂಸ ಖಂಡಗಳು ಬಲಗೊಳ್ಳುತ್ತವೆ. ಅದರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡ ಬಳಿಕ ಕೆಲವು ವಿಷಯಗಳ ಬಗ್ಗೆ ತಿಳಿದಿರುವುದು ಅವಶ್ಯಕ.ಮಕ್ಕಳನ್ನು ಹೊಂದಲು ಬಯಸುವವರನ್ನು ಹೊರತುಪಡಿಸಿ, ಎಲ್ಲರೂ ಲೈಂಗಿಕತೆಯ ಬಳಿಕ ಮೂತ್ರ ವಿಸರ್ಜನೆ ಮಾಡುವ ಮೂಲಕ ಸೋಂಕುಗಳು ಆಗುವುದನ್ನು ತಡೆಯಬಹುದಾಗಿದೆ.

ತುಂಬಾ ಆಯಾಸವನ್ನುಂಟು ಮಾಡುವ ಕೆಲಸಗಳನ್ನು ಮಾಡದಿರುವುದು ಒಳ್ಳೆಯದು:
ಲೈಂಗಿಕ ಕ್ರೀಡೆಯಲ್ಲಿ ಭಾಗಿಯಾದ ಬಳಿಕ ನಿಮ್ಮ ದೇಹಕ್ಕೆ(Body) ವಿಶ್ರಾಂತಿಯ ಅವಶ್ಯಕತೆ ಉಂಟಾಗುತ್ತದೆ. ಸ್ವಲ್ಪ ದೈಹಿಕ ವಿಶ್ರಾಂತಿ(Rest) ತೆಗೆದುಕೊಳ್ಳುವುದು ಉತ್ತಮ. ಸಂಭೋಗದ ಬಳಿಕ ತಕ್ಷಣವೇ ದೈಹಿಕವಾಗಿ ಶ್ರಮದಾಯಕ ಚಟುವಟಿಕೆಗಳನ್ನು ಮಾಡುವುದು ಕೆಲವೊಮ್ಮೆ ಅನಿರೀಕ್ಷಿತ ತೊಡಕುಗಳು ಉಂಟಾಗಲು ಕಾರಣವಾಗುವ ಸಾಧ್ಯತೆಗಳಿವೆ.

ಮೂತ್ರವಿಸರ್ಜನೆ (Urinating):
ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡುವುದು ಬಹಳ ಪಾತ್ರ ವಹಿಸುತ್ತದೆ. ಲೈಂಗಿಕ ಸಂಭೋಗದಿಂದಾಗಿ ಯಾವುದಾದರು ಬ್ಯಾಕ್ಟೀರಿಯಾಗಳು (Bacteria)ನಿಮ್ಮ ಮೂತ್ರನಾಳವನ್ನು ಪ್ರವೇಶಿಸಿದಲ್ಲಿ ಮೂತ್ರ ವಿಸರ್ಜನೆಯ ಮೂಲಕ ಬ್ಯಾಕ್ಟೀರಿಯಾವನ್ನು ಹೊರಹಾಕಲು ನೆರವಾಗುತ್ತದೆ. ಲೈಂಗಿಕತೆಯ ಬಳಿಕ ಮೂತ್ರ ವಿಸರ್ಜನೆಯು ಮೂತ್ರನಾಳದ ಸೋಂಕನ್ನು (UTI) ತಡೆಯುತ್ತದೆ.

ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ :
ಸಂಭೋಗದ ಬಳಿಕ ಬಿಗಿಯಾದ ಬಟ್ಟೆಗಳನ್ನು ಧರಿಸದಿರುವುದು ಒಳ್ಳೆಯದು. ಬಿಗಿಯಾದ ಬಟ್ಟೆ ಧರಿಸುವುದರಿಂದ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗಬಹುದು.

ನಿಮಗೆ ನೋವು ಅಥವಾ ಅಸ್ವಸ್ಥತೆ ಇದ್ದರೆ ಲಘುವಾಗಿ ತೆಗೆದುಕೊಳ್ಳದಿರುವುದು ಉತ್ತಮ:
ಲೈಂಗಿಕ ಸಮಯದಲ್ಲಿ ಇಲ್ಲವೇ ಆ ಬಳಿಕ ನೋವು ಅಥವಾ ಅಸ್ವಸ್ಥತೆ ಕಂಡುಬಂದರೆ ಈ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಬಾರದು. ಈ ಕುರಿತು ಸಂಗಾತಿಯೊಂದಿಗೆ(Life Partner) ಚರ್ಚೆ ನಡೆಸಿ ಕಾರಣವನ್ನು ತಿಳಿಯಲು ಪ್ರಯತ್ನಿಸುವುದು ಉತ್ತಮ. ಅವಶ್ಯ ಎಂದೆನಿಸಿದರೆ ಸಮಸ್ಯೆಯನ್ನು ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯುವುದು ಒಳ್ಳೆಯದು.

ಪರಿಮಳಯುಕ್ತ ಉತ್ಪನ್ನಗಳನ್ನು ಬಳಸದಿರುವುದು ಒಳ್ಳೆಯದು:
ಜನನಾಂಗದ ಪ್ರದೇಶದ ಸುತ್ತ ಸೋಪ್, ಲೋಷನ್ ಇಲ್ಲವೇ ಸುಗಂಧ ದ್ರವ್ಯಗಳಂತಹ ಪರಿಮಳಯುಕ್ತ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸದಿರುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಯೋನಿಯ ನೈಸರ್ಗಿಕ pH ಸಮತೋಲನವನ್ನು ಅಸಮಾಧಾನಗೊಳಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಯೋನಿ ಕಿರಿಕಿರಿ ಅಥವಾ ಸೋಂಕು ಕಂಡುಬರುವ ಸಂಭವವಿದೆ. ಮೇಲೆ ತಿಳಿಸಿದ ವಿಚಾರಗಳನ್ನ ಗಮನಿಸಿ, ನಿಮ್ಮ ಲೈಂಗಿಕ ಜೀವನವನ್ನು ಸಂತೋಷದಿಂದ ಕಳೆಯಬಹುದು.

ಇದನ್ನೂ ಓದಿ: Healthtips: ಪುರುಷರೇ ಕಡಲೆಕಾಯಿ ಆರೋಗ್ಯ ಮಹತ್ವದ ಮಾಹಿತಿ ತಿಳಿಯಿರಿ! ಈ ಮಾಹಿತಿ ನಿಮಗೆ ಖಂಡಿತ ಹೆಲ್ಪ್ ಆಗುತ್ತೆ