Home latest ಮಹಿಳೆಯ ಖಾಸಗಿ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ವಿದ್ಯಾರ್ಥಿಗಳಿಂದ ನಿರಂತರ ಅತ್ಯಾಚಾರ |

ಮಹಿಳೆಯ ಖಾಸಗಿ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ವಿದ್ಯಾರ್ಥಿಗಳಿಂದ ನಿರಂತರ ಅತ್ಯಾಚಾರ |

Hindu neighbor gifts plot of land

Hindu neighbour gifts land to Muslim journalist

22 ವರ್ಷದ ದಲಿತ ಮಹಿಳೆಯ ಮೇಲೆ 7 ತಿಂಗಳ ಅವಧಿಯಲ್ಲಿ ಪದೇಪದೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

ಮೂವರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ 8 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ಮಹಿಳೆಯ ಖಾಸಗಿ ವಿಡಿಯೋಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಹಲವು ತಿಂಗಳಿನಿಂದ ಆಕೆಯ ಮೇಲೆ ಅತ್ಯಾಚಾರವನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಹರಿಹರನ್ ಅಲಿಯಾಸ್‌ ಸರವಣನ್ ಎಂಬ 27 ವರ್ಷದ ವ್ಯಕ್ತಿ ಮಹಿಳೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ್ದ. ನಂತರ ಅವರಿಬ್ಬರೂ ಸ್ನೇಹಿತರೂ ಆದರು. ಇದಲ್ಲದೆ, ಹರಿಹರನ್ ಮತ್ತು ಆ ಮಹಿಳೆ ದೈಹಿಕ ಸಂಬಂಧವನ್ನು ಕೂಡಾ ಹೊಂದಿದ್ದರು.

ಹರಿಹರನ್ ತನ್ನ ಸ್ನೇಹಿತರಿಗೆ ಆ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಮಾಡಿಕೊಂಡಿದ್ದ ವಿಡಿಯೋವನ್ನು ತೋರಿಸಿದ್ದ. ನಂತರ ಆ ಗೆಳೆಯರೆಲ್ಲರೂ ಸೇರಿ ಮಹಿಳೆಗೆ ಬೆದರಿಕೆ ಹಾಕಿ, 2021ರ ಆಗಸ್ಟ್ ಮತ್ತು 2022ರ ಮಾರ್ಚ್ ನಡುವೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಡಿಎಂಕೆ ಪದಾಧಿಕಾರಿ ಮತ್ತು ಮೂವರು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಇದರಿಂದ ರೋಸಿ ಹೋದ ಮಹಿಳೆ ಸಹಾಯವಾಣಿಯನ್ನು ಸಂಪರ್ಕಿಸಿ ಈ ವಿಷಯ ತಿಳಿಸಿದ್ದಾಳೆ. ಹಾಗಾಗಿ ಈ ಘಟನೆ ಬೆಳಕಿಗೆ ಬಂದಿದೆ. ತನ್ನ ಜೊತೆಗಿನ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಬಳಸಿಕೊಂಡು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ, ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಪ್ರಕರಣದ ಆರೋಪಿಗಳಾದ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ವ್ಯಕ್ತಿಗಳು ಬೇರೆ ಯಾವುದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.