Home latest ಕೋಟಿಗಟ್ಟಲೆ ಸಾಲ ಮಾಡಿದ್ದ ಸಾಮಾನ್ಯ ವರ್ಗದ ಯುವತಿಯ ಸೂಸೈಡ್ ಪ್ರಕರಣ ಭೇದಿಸಿದ ಪೊಲೀಸರು!

ಕೋಟಿಗಟ್ಟಲೆ ಸಾಲ ಮಾಡಿದ್ದ ಸಾಮಾನ್ಯ ವರ್ಗದ ಯುವತಿಯ ಸೂಸೈಡ್ ಪ್ರಕರಣ ಭೇದಿಸಿದ ಪೊಲೀಸರು!

Hindu neighbor gifts plot of land

Hindu neighbour gifts land to Muslim journalist

2021ರ ಡಿಸೆಂಬರ್ 12ರಂದುಜೊಯಿಲ್ಯಾಂಡಿಯಲ್ಲಿರುವ ಮನೆಯಲ್ಲಿ ಓರ್ವ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಯುವತಿಯ ಹೆಸರೇ ಬಿಜಿಶಾ. ನಿಗೂಢವಾಗಿ ಮೃತಪಟ್ಟಿದ್ದ ಬಿಜಿಶಾ ಎಂಬಾಕೆಯ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇರಳದ ಸಿಸಿಬಿ ತಂಡ ಕೊನೆಗೂ ಸಾವಿಗೆ ಕಾರಣ ಏನೆಂದು ಕಂಡುಹಿಡಿಯುವಲ್ಲಿ ಸಫಲವಾಗಿದೆ. ಬಿಜಿಶಾ ಸಾವು ಆತ್ಮಹತ್ಯೆಯಾಗಿದ್ದು, ಆನ್‌ಲೈನ್ ರಮ್ಮಿ ಗೇಮ್ ಆಕೆಯ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಚೆಲಾಯಿಲ್ ಮೂಲದ ಬಿಜಿಶಾ ಖಾಸಗಿ ಟೆಲಿಕಾಂ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಪೊಲೀಸ್ ತನಿಖೆಯಲ್ಲಿ ಯುಪಿಐ ಆ್ಯಪ್ ಮೂಲಕ ತನ್ನ ಎರಡು ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 1 ಕೋಟಿ ರೂ. ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು. ಆದರೆ, ಯಾವುದಕ್ಕಾಗಿ ಹಣಕಾಸು ವ್ಯವಹಾರ ನಡೆದಿತ್ತು ಎಂದು ಮಾತ್ರ ತಿಳಿದಿರಲಿಲ್ಲ.

ಆಕೆಯ ಆಪ್ತರಿಗಾಗಲಿ ಅಥವಾ ಕುಟುಂಬಕ್ಕಾಗಲಿ ಹಣದ ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ. ಇದಲ್ಲದೇ ಆಕೆಯ ಮದುವೆಗಾಗಿ ಇಟ್ಟಿದ್ದ 35 ಸವರನ್ ಚಿನ್ನವನ್ನು ಕೂಡಾ ಒತ್ತೆ ಇಟ್ಟು ಬ್ಯಾಂಕಿನಿಂದ ಸಾಲ ಪಡೆದಿದ್ದಳು. ಬಿಜಿಶಾ ಸಾವಿನ ನಂತರ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಟುಂಬವು ಸಹ ಇದೇ ಸಂದರ್ಭದಲ್ಲಿ ಹೇಳಿತ್ತು.

ಸಂಪೂರ್ಣ ವಹಿವಾಟುಗಳು UPI ಅಪ್ಲಿಕೇಶನ್‌ಗಳ ಮೂಲಕ ನಡೆದಿರುವುದಿಂದ ಯಾವುದೇ ಮಾಹಿತಿಯನ್ನು ಹಿಂಪಡೆಯಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಪೊಲೀಸರ ತನಿಖೆಯ ಪ್ರಕಾರ ಬಿಜಿಶಾ ಸಾವಿಗೆ ಆನ್‌ಲೈನ್ ರಮ್ಮಿ ಜೂಜಾಟವೇ ಮುಖ್ಯ ಕಾರಣ, ಜೊತೆಗೆ ಈ ರಮ್ಮಿ ಗೇಮ್‌ಗಾಗಿ ಬಿಜಿಶಾ ಅವರು 1.45 ಕೋಟಿ ರೂಪಾಯಿಗಳ ಹಣಕಾಸು ವ್ಯವಹಾರ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿದೆ. ರಮ್ಮಿ ಆಟದಿಂದ ಬಿಜಿಶಾಗೆ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿರುವುದು ಬೆಳಕಿಗೆ ಬಂದಿದೆ.

ಕೋವಿಡ್ ಸಮಯದಲ್ಲಿ ಆನ್‌ಲೈನ್ ಗೇಮ್ ನಲ್ಲಿಯೇ ಬಿಜಿಶಾ ಇರುತ್ತಿದ್ದಳು ಎಂಬುದು ತನಿಖಾ ತಂಡ ಪತ್ತೆಹಚ್ಚಿದೆ. ಆರಂಭದಲ್ಲಿ ಸಣ್ಣ ಪುಟ್ಟ ಗೇಮ್‌ಗಳನ್ನು ಆಡಲು ಆರಂಭಿಸಿದ ಬಿಜಿಶಾ, ನಂತರ ದೊಡ್ಡ ಮೊತ್ತವನ್ನು ವ್ಯಯಿಸಿ ಆನ್‌ಲೈನ್ ರಮ್ಮಿಯಂತಹ ಆಟಗಳಿಗೆ ಬದಲಾದಳು. ಆಕೆ ಯುಪಿಐ ಆ್ಯಪ್ ಮೂಲಕ ಆನ್‌ಲೈನ್ ಗೇಮಿಂಗ್‌ಗಾಗಿ ಹಣಕಾಸು ವಹಿವಾಟು ನಡೆಸಿದ್ದಾಳೆ. ಸತತವಾಗಿ ಹಣ ಕಳೆದುಕೊಂಡ ಬಳಿಕ ಮನೆಯವರು ತನ್ನ ಮದುವೆಗೆ ಇಟ್ಟಿದ್ದ ಚಿನ್ನವನ್ನು ಸಹ ಒತ್ತೆ ಇಟ್ಟಿದ್ದಾಳೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಸಾಲ ನೀಡುವ ಕೆಲವು ಕಂಪನಿಗಳಿಂದಲೂ ಬಿಜಿಶಾ ಹಣವನ್ನು ಸಾಲ ಪಡೆದಿದ್ದಳು. ಸಾಲವನ್ನು ಮರುಪಾವತಿಸಲು ವಿಫಲವಾದಾಗ, ಕಂಪನಿಗಳು ಅವಳ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಸಾಲ ಬಿಜಿಶಾ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತನಿಖಾ ತಂಡ ಹೇಳಿದೆ.