Home latest ನಕ್ಸಲರಿಂದ ಅಪಹರಣಗೊಂಡ ಪತಿಯನ್ನು ಹುಡುಕಲು ತನ್ನ ಪುಟ್ಟ ಕಂದಮ್ಮನೊಂದಿಗೆ ಕಾಡಿಗೆ ಹೊರಟ ಪತ್ನಿ| ಮಕ್ಕಳಿಗೋಸ್ಕರ ಪತಿಯನ್ನು...

ನಕ್ಸಲರಿಂದ ಅಪಹರಣಗೊಂಡ ಪತಿಯನ್ನು ಹುಡುಕಲು ತನ್ನ ಪುಟ್ಟ ಕಂದಮ್ಮನೊಂದಿಗೆ ಕಾಡಿಗೆ ಹೊರಟ ಪತ್ನಿ| ಮಕ್ಕಳಿಗೋಸ್ಕರ ಪತಿಯನ್ನು ಬಿಡುಗಡೆ ಮಾಡಿ ಎಂದು ಮಹಿಳೆ ಮಾಡಿದ ಭಾವನಾತ್ಮಕ ವೀಡಿಯೋ | ಪತಿಯನ್ನು ಬಿಡುಗಡೆಗೊಳಿಸಿದ ನಕ್ಸಲರು

Hindu neighbor gifts plot of land

Hindu neighbour gifts land to Muslim journalist

ತನ್ನ ಪತಿಯನ್ನು ನಕ್ಸಲರು ಅಪಹರಣ ಮಾಡಿದ್ದರಿಂದ ಪತಿಯನ್ನು ಹುಡುಕಿಕೊಂಡು ತನ್ನ ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಜೊತೆ ಕಾಡಿಗೆ ಹೊರಟಿದ್ದಾಳೆ ಪತ್ನಿ.

ಅಶೋಕ್ ಪವಾರ್ ಎಂಜಿನಿಯರ್ ಹಾಗೂ ನೌಕರ ಆನಂದ ಯಾದವ್ ರನ್ನು ಛತ್ತೀಸ್ ಗಢದಲ್ಲಿ ನಕ್ಸಲರು ಮಂಗಳವಾರ ಅಪಹರಣ ಮಾಡಿದ್ದಾರೆ. ಫೆ.11 ರಂದು ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಪವಾರ್ ಅವರನ್ನು ನಕ್ಸಲರು ಅಪಹರಿಸಿದ್ದರು

ವಿಷಯ ತಿಳಿದ ಅಶೋಕ್ ಪವಾರ್ ಅವರ ಪತ್ನಿ ಸೋನಾಲಿ ಪವಾರ್ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ನಕ್ಸಲರಿಗೆ ಭಾವನಾತ್ಮಕ ವೀಡಿಯೋ ಮಾಡಿ ಮನವಿ ಮಾಡಿದ್ದರೂ, ಅತ್ತ ಕಡೆಯಿಂದ ಯಾವುದೇ ಸಂದೇಶ ಅಥವಾ ಬಿಡುಗಡೆಯ ಮಾಹಿತಿ ದೊರಕಲಿಲ್ಲ. ಹೀಗಾಗಿ ಖುದ್ದು ತಾವೇ ಪತಿಯನ್ನು ಹುಡುಕಲು ತಮ್ಮ‌ ಹೆಣ್ಣು ಮಗುವಿನೊಂದಿಗೆ ಅಬುಜ್ಮಾದ್ ಅರಣ್ಯಕ್ಕೆ ಹೋಗಿದ್ದಾರೆ.

ಅಶೋಕ್ ಪವಾರ್ ಹಾಗೂ ಯಾದವ್ ಅವರನ್ನು ಬಿಜಾಪುರ ಜಿಲ್ಲೆಯ ಕುತ್ರುನಲ್ಲಿರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಶುಕ್ಲಾ ಬುಧವಾರ ಹೇಳಿದ್ದಾರೆ. ಅಶೋಕ್ ಪವಾರ್ ಅವರ ಪತ್ನಿ ಅರಣ್ಯದಲ್ಲೇ ಇದ್ದಾರೆ. ಆದರೆ ಸ್ಥಳೀಯ ಪತ್ರಕರ್ತರು ಮತ್ತು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಹಾಗೂ ಅವರಿಗೆ ವಿಷಯ ಮುಟ್ಟಿಸಲಾಗಿದೆ ಎಂಬ ಮಾಹಿತಿ ಇದೆ.

ಸೋನಾಲಿ ಪವಾರ್ ಗೆ ಶೀಘ್ರವೇ ಪತಿಯನ್ನು ಭೇಟಿ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋನಾಲಿ ಪವಾರ್ ಅವರು ಮಾಡಿದ ವೀಡಿಯೋ ನೋಡಿ ನಕ್ಸಲರು ಎಂಜಿನಿಯರ್ ಹಾಗೂ ಸಹಾಯಕನನ್ನು ಬಿಡುಗಡೆ ಮಾಡಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿದ್ದಾರೆ.