Home latest ಪತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ!!! ಅಷ್ಟಕ್ಕೂ ಈ ಘಟನೆಯ ಅಸಲಿ ಕಹಾನಿ ಏನು?

ಪತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ!!! ಅಷ್ಟಕ್ಕೂ ಈ ಘಟನೆಯ ಅಸಲಿ ಕಹಾನಿ ಏನು?

Hindu neighbor gifts plot of land

Hindu neighbour gifts land to Muslim journalist

ಮದುವೆ ಆಗಿ ಸಂಸಾರ ಶುರು ಆದ ಮೇಲೆ ಸಣ್ಣ ಪುಟ್ಟ ತಗಾದೆ, ಗಲಾಟೆ- ಗಲಭೆ, ಅನುಮಾನಗಳು ಕಾಮನ್. ಹಾಗಂತ ಪ್ರೀತಿ ಏನು ಕಮ್ಮಿ ಆಗಿರೊಲ್ಲ. ಆದ್ರೆ ಕೆಲವರ ಜೀವನದಲ್ಲಿ ಗಂಭೀರವಾಗಿ ಗಲಾಟೆಗಳಾಗಿ ಸಂಸಾರವು ಒಡೆದು ಹೋದ ಪ್ರಕರಣಗಳು ಇದೆ. ಕೆಲವೊಂದು ಗಲಾಟೆಗಳು ಮಾತಿನಿಂದ ಆರಂಭ ಪಡೆದು, ಕೊನೆಗೆ ಹೊಡಿದು ಬಡಿದು ಅಂತ್ಯಗೊಳ್ಳುತ್ತದೆ.ಮತ್ತೆ ಕೆಲವರನ್ನಂತು ನೋಡಿದಾಗ ಹೀಗೂ ಇರ್ತಾರಾ!! ಅನ್ನೋ ರೀತಿ ಫೈಟಿಂಗ್ ಮಾಡ್ಕೊತಾರೆ. ಇದನೆಲ್ಲಾ ಕಣ್ಣಾರೆ ಕಂಡ ಹಿರಿಯರು ತಮ್ಮ ಅನುಭವದಿಂದ ಒಂದು ಮಾತನ್ನು ಹೇಳಿದ್ದಾರೆ “ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ” ಅಂತಾ. ಆದರೆ ಇಲ್ಲೊಂದು ಕಡೆ ಆಗಿದ್ದೇ ಬೇರೆ ಗಂಡ-ಹೆಂಡಿರ ಜಗಳ ನಾಲಗೆ ಕೀಳೋ ತನಕ ಎಂಬಂತಾಗಿದೆ!! ಅಷ್ಟಕ್ಕೂ ಅಲ್ಲಿ ಏನಾಯ್ತು ಗೊತ್ತಾ? ನೀವೆನಾದರೂ ಈ ಸ್ಟೋರಿ ಕೇಳಿದ್ರೆ ಶಾಕ್ ಆಗೋದಂತು ಖಂಡಿತ. ಹಾಗಾಗಿ ಈಗಲೇ ಈ ಸ್ಟೋರಿನ ಓದಿ.

ಪತಿ ಮುನ್ನಾ ಮತ್ತು ಪತ್ನಿ ಸಲ್ಮಾ ಮಧ್ಯೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯವಿದ್ದು, ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಒಂದು ದಿನ ಜಗಳವಾಡಿಕೊಂಡ ಪತ್ನಿ ಸಲ್ಮಾ, ಸಹಿಸಲಾರದೆ ಮಕ್ಕಳೊಂದಿಗೆ ಗಂಟು ಮೂಟೆ ಕಟ್ಟಿ, ಇವನ ಸಹವಾಸ ಸಾಕಪ್ಪಾ ಎಂದು ಸೀದಾ ತವರು ಮನೆಗೆ ಬಂದು ನೆಲೆಸಿದ್ದಳು. ಸ್ವಲ್ಪ ದಿನಗಳ ನಂತರ ವಾಪಸ್ ಬಾ ಎಂದು ಕರೆಯಲು ಪತಿ ಮುನ್ನಾ ಶುಕ್ರವಾರ ಪತ್ನಿಯ ತವರು ಮನೆಗೆ ಬಂದಿದ್ದ.

ಪತಿ ತನ್ನೊಂದಿಗೆ ಬಾ ಎಂದು ಒತ್ತಾಯಿಸುತ್ತಿದ್ದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತುತ್ತಾಗಿ ಜಗಳ ಶುರುವಾಗಿದೆ. ಎಷ್ಟು ಹೇಳಿದರೂ ಪತಿ ಸುಮ್ಮನಾಗದಿದ್ದಾಗ ಕೊನೆಗೊಮ್ಮೆ ರೊಚ್ಚಿಗೆದ್ದ ಪತ್ನಿಯು ಪತಿಯ ಮೇಲೆರಗಿ ಆತನ ನಾಲಗೆಗೇ ಕಚ್ಚಿದ್ದಾಳೆ. ಅವಳು ಕಚ್ಚಿದ ತೀವ್ರತೆಯಿಂದಾಗಿ ನಾಲಗೆಯೆ ತುಂಡಾಗಿ ಕೆಳಕ್ಕೆ ಬಿದ್ದಿದೆ. ಮುನ್ನಾ ಕೂಡ ನೋವಿನಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪತಿಗೆ ಚಿಕಿತ್ಸೆ ನಡೆಯುತ್ತಿದ್ದು, ಪತ್ನಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.