Home latest Vijaya Sankalpa Yatre: ಏ ಕುಮಾರಸ್ವಾಮಿ, ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು:...

Vijaya Sankalpa Yatre: ಏ ಕುಮಾರಸ್ವಾಮಿ, ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಬಿಜೆಪಿ ಶಾಸಕ

Vijaya Sankalpa Yatre

Hindu neighbor gifts plot of land

Hindu neighbour gifts land to Muslim journalist

Vijaya Sankalpa Yatre : ‘ನಾನು 20 ವರ್ಷದಿಂದ ರಾಜಕೀಯ ‌ಮಾಡುತ್ತಿರುವೆ. ಅದು ಯಾರೋ ಕುಮಾರಸ್ವಾಮಿ(Kumarswamy) ಅಂತೆ, ಆತನಿಗೆ ಒಬ್ಬರೂ ಅಲ್ಲ 7 ಮಂದಿ ಹೆಂಡರು. ದೇವದುರ್ಗಕ್ಕೆ(Devdurga) ಬಂದಾಗ ಶಿವನಗೌಡಗೆ(Shivana Gowda) ಈ ಸಲ ವೋಟು ಹಾಕಬೇಡಿ, ಮನೆಗೆ ಕಳುಹಿಸಿ ಎಂದಿದ್ದರು. ಏ ಹುಚ್ಚ ನೀನೇ ಗೆಲ್ಲಕ್ಕೆ ಆಗುವುದಿಲ್ಲ. ಅಂದ್ರೆ ಮುಡಾಮುಚ್ಚಿಕೊಂಡು ಹೋಗ್ತಿರು. ನಿಜವಾಗಲು ನಿನಗೆ ಗಂಡಸ್ಥನ ಇದ್ರೆ, ನನ್ನ ವಿರುದ್ಧ ನಿನ್ನ ಶಕ್ತಿ ಪ್ರೂವ್ ಮಾಡು’ ಹೀಗೆ ಆರ್ಭಟಿಸಿದ್ದು ಯಾರು ಗೊತ್ತಾ? ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ! ಅದೂ ಕೂಡ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ!

ಹೌದು, ರಾಯಚೂರು(Raichur) ಜಿಲ್ಲೆ ದೇವದುರ್ಗ ತಾ. ಜಾಲಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ(BJP) ವಿಜಯ ಸಂಕಲ್ಪ ಯಾತ್ರೆಯಲ್ಲಿ(Vijaya Sankalpa Yatre) ಮಾತನಾಡಿದ ಅವರು ಜೆಡಿಎಸ್(JDS) ಹಾಗೂ ಎಚ್ಡಿಕೆ ವಿರುದ್ಧ ತೀರ್ವವಾದ ವಾಗ್ದಾಳಿ ನಡೆಸಿದ್ದಾರೆ. ರೇವಣ್ಣನ ಹೆಂಡತಿಗೆ ಟಿಕೆಟ್ ಕೊಡಲು ನಿನಗೆ ಮನಸ್ಸಿಲ್ಲ. ಒಂದು ಕಡೆ ಮಗ, ಒಂದು ಕಡೆ ಹೆಂಡತಿ, ಇನ್ನೊಂದು ಕಡೆ ಅಪ್ಪ ಇರುವ ಪಕ್ಷ ನಿಮ್ಮದು. ಒಂದು ಕಡೆ ದೇವೇಗೌಡರು ಸೋತರೂ, ಇನ್ನೊಂದು ಕಡೆ ನಿಮ್ಮ ‌ಮಗ ಸೋತರು‌. ಸೋತು ಸುಣ್ಣವಾಗಿರುವ ನೀನು ನನ್ನ ಬಗ್ಗೆ ಮಾತಾಡ್ತಿಯಾ ಎಂದು ಎಚ್‌ಡಿಕೆ ವಿರುದ್ಧ ಕೆಂಡಮಂಡಲಾರದರು.

ನಾನು ನೇರವಾಗಿ ಕುಮಾರಸ್ವಾಮಿ(HD Kumaraswamy)ಗೆ ಸವಾಲ್ ಹಾಕುವೆ. ನಿಜವಾಗಲು ನಿನಗೆ ಗಂಡಸ್ಥನ ಇದ್ರೆ, ದೇವದುರ್ಗ ವಿಧಾನಸಭಾ ಕ್ಷೇತ್ರ(Devadurga Assembly constituency)ದಲ್ಲಿ ನಿನ್ನ ಶಕ್ತಿ ಪ್ರೂವ್ ಮಾಡು. ನಾನು ಒಂದು ಲಕ್ಷ 50 ಸಾವಿರ ವೋಟು ತೆಗೆದುಕೊಳ್ಳುವೆ‌. ಇಲ್ಲದಿದ್ರೆ ನಾನು ಗೆದ್ದರೂ ರಾಜೀನಾಮೆ ನೀಡುವೆ. ಇದು ಕುಮಾರಸ್ವಾಮಿಗೆ ನನ್ನ ಚಾಲೆಂಜ್ ಎಂದು ಗುಡುಗಿದರು.

ಅಲ್ಲದೆ ಒಂದು ಮಾತು ತಿಳಿದುಕೊಳ್ಳಿ, ಈ ಚುನಾವಣೆಯಲ್ಲಿ ನಾನು ಅಷ್ಟೇ ಗೆಲ್ಲುವುದಿಲ್ಲ, ನನ್ನ ಜೊತೆಗೆ ನಾಲ್ಕು ಸ್ಥಾನ ಗೆಲ್ಲಿಸುವೆ. ಯಾವ ಕುಮಾರಸ್ವಾಮಿಗೂ ಅಂಜುವುದಿಲ್ಲ, ಯಾವ ರಾಹುಲ್ ಗಾಂಧಿಗೂ(Rahul gandhi) ಅಂಜಲ್ಲ‌. ಜನರ ಆರ್ಶಿವಾದ ಇರುವರೆಗೂ ಯಾರು ನನಗೆ ಏನು ಮಾಡಲು ಸಾಧ್ಯವಿಲ್ಲ‌. ನಾನು ಮುಂಡರಗಿ ಶಿವರಾಯನ ಮಗ‌. ನಾನು ಹಣಮಂತರಾಯನ ಮಗನಲ್ಲ.ನಾನು ಪ್ರಾಮಾಣಿಕನಾಗಿ ದುಡಿಯುವೆ ಎಂದು ಶಾಸಕ ಶಿವನಗೌಡ ನಾಯಕ(Shivanagowda nayak) ಎಂದರು

ಇನ್ನು ಯಾತ್ರೆ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish shettar)ಅವರು, ಇತ್ತೀಚೆಗೆ ಪ್ರಧಾನಿ ಮೋದಿ(Narendra Modi) ಮೇಲೆ ಜನರ ಅಭಿಮಾನ ಹೆಚ್ಚಾಗಿದೆ.ನಮ್ಮ ಪ್ರಧಾನಿ ‌ಮೋದಿ ಕೇವಲ ನಮ್ಮ ದೇಶದ ಪ್ರಧಾನಿ ಅಷ್ಟೇ ಅಲ್ಲ. ಇಡೀ ಜಗತ್ತೇ ಇವತ್ತು ಮೋದಿ ಅವರನ್ನ ಕೊಂಡಾಡುತ್ತಿದೆ. ಇಡೀ ಜಗತ್ತಿನ ಜನಪ್ರಿಯ ವ್ಯಕ್ತಿ ನಮ್ಮ ಮೋದಿಯಾಗಿದ್ದಾರೆ. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಆರ್ಥಿಕತೆ ಹಾಳಾಗಿ ಹೋಗಿದೆ. ಮೋದಿ ನಾಯಕತ್ವದ ಬಗ್ಗೆ ಪಾಕಿಸ್ತಾನದ ಪ್ರಜೆಗಳು ಮಾತಾಡುವಂತಾಗಿದೆ. ಬದಲಾವಣೆ ಅತ್ತ ರಾಜ್ಯ ರಾಷ್ಟ್ರಗಳು ಮುಖಮಾಡಿವೆ ಎಂದರು.