Home Karnataka State Politics Updates Sullia : ಸುಳ್ಯ ವಿಧಾನಸಭಾ ಕ್ಷೇತ್ರ : ಪಕ್ಷೇತರ ಅಭ್ಯರ್ಥಿ ನಂದ ಕುಮಾರ್ ಅವರಿಗೆ ತೆರೆದಿದೆ...

Sullia : ಸುಳ್ಯ ವಿಧಾನಸಭಾ ಕ್ಷೇತ್ರ : ಪಕ್ಷೇತರ ಅಭ್ಯರ್ಥಿ ನಂದ ಕುಮಾರ್ ಅವರಿಗೆ ತೆರೆದಿದೆ ಅವಕಾಶ

Vidhanasabha Election

Hindu neighbor gifts plot of land

Hindu neighbour gifts land to Muslim journalist

Vidhanasabha Election : ಮಂಗಳೂರು : ವಿಧಾನಸಭಾ ಚುನಾವಣೆಯ(Vidhanasabha Election) ಕಾವು ಏರತೊಡಗಿದೆ.ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣಪ್ಪ ಅವರನ್ನು ಈಗಾಗಲೇ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ಇದರಿಂದ ಅಸಮಾಧಾನಗೊಂಡಿರುವ ನಂದ ಕುಮಾರ್ ಬೆಂಬಲಿಗರು ಸಭೆ ಸೇರಿ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಅಖಾಡ ಸಿದ್ದಗೊಳಿಸಿದ್ದಾರೆ.ನಂದಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಅವರಿಗಿಂತ ಹೆಚ್ಚು ನಂದಕುಮಾರ್ ಬೆಂಬಲಿಗ ಕಾರ್ಯಕರ್ತರಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುವ ವಿಚಾರ.

ಏತನ್ಮಧ್ಯೆ ಬಿಜೆಪಿಯಿಂದ ಎಸ್.ಅಂಗಾರ ಅವರನ್ನು ಮತ್ತೆ ಕಣಕ್ಕಿಳಿಸುವುದು ಬಹುತೇಕ ಪಕ್ಕಾ ಆಗಿದೆ.ಆದರೆ ಅಂಗಾರ ಅವರಿಗೆ ಮತ್ತೆ ಅವಕಾಶ ನೀಡುವುದು ಸ್ವತಃ ಬಿಜೆಪಿ ಪಕ್ಷದ ನಾಯಕರಿಗೆ,ಕಾರ್ಯಕರ್ತರಿಗೆ ಸುತಾರಂ ಸಮಾಧಾನ ಇಲ್ಲ.ಎಸ್.ಅಂಗಾರ ಅವರ ವಿರುದ್ದವೂ ಬಿಜೆಪಿಯಲ್ಲಿ ಅಸಮಾಧಾನಿತರ ಸಂಖ್ಯೆಯೂ ದೊಡ್ಡದಿದೆ.

ಎಸ್.ಅಂಗಾರ ಅವರ ವಿರುದ್ಧ ಅಸಮಾಧಾನ ಹೊಂದಿರುವ ಬಿಜೆಪಿಯ ಮತದಾರರು ಕಾಂಗ್ರೆಸ್‌ ಬೆಂಬಲಿಸಲಾರರು.ಎಸ್‌.ಅಂಗಾರ ಅವರ ವಿರುದ್ಧದ ಮುನಿಸು ಪಕ್ಷೇತರ ಅಭ್ಯರ್ಥಿಗೆ ಮತಗಳ ರೂಪದಲ್ಲಿ ಬಂದರೆ ನಂದ ಕುಮಾರ್ ಗೆಲುವು ಸುಲಭವಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಈ ಎಲ್ಲಾ ಲೆಕ್ಕಾಚಾರಗಳನ್ನು ಗಮನಿಸಿದಾಗ ಪಕ್ಷೇತರ ಅಭ್ಯರ್ಥಿ ನಂದ ಕುಮಾರ್ ಅವರನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಲಿದೆ.ಈ ಬಾರಿಯ ಕಾಂಗ್ರೆಸ್,ಬಿಜೆಪಿಯ ಮುನಿಸು ಹೊಸ ಇತಿಹಾಸ ಸೃಷ್ಟಿಸುತ್ತಾ ಕಾದುನೋಡಬೇಕಿದೆ.