Home latest Valentine Day : ಮನೆ ಟೆರೇಸ್ ನಲ್ಲಿ ಲವ್ವರ್ಸ್ ಗುಪ್ತ್ ಗುಪ್ತ್ ಮೀಟಿಂಗ್, ಅಮ್ಮನ ಕೈಗೆ...

Valentine Day : ಮನೆ ಟೆರೇಸ್ ನಲ್ಲಿ ಲವ್ವರ್ಸ್ ಗುಪ್ತ್ ಗುಪ್ತ್ ಮೀಟಿಂಗ್, ಅಮ್ಮನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ಳು ಮಗಳು, ಮುಂದೆ?

Hindu neighbor gifts plot of land

Hindu neighbour gifts land to Muslim journalist

ವ್ಯಾಲೆಂಟೈನ್ಸ್ ಡೇ ಅಂದರೆ ಸಾಕು ಪ್ರೇಮಿಗಳ ಪಾಲಿಗೆ ಅತ್ಯಂತ ವಿಶೇಷ ದಿನ ಎಂದರೂ ತಪ್ಪಾಗಲಾರದು. ಅದರಲ್ಲಿಯೂ ಲವ್ ಬರ್ಡ್ಸ್ ಗಳು ಈ ದಿನವನ್ನು ಭಿನ್ನವಾಗಿ ಆಚರಿಸಿ ತಮ್ಮ ಇಷ್ಟ ಪಾತ್ರರಿಗೆ ಖುಷಿ ಮೂಡಿಸಲು ನಾನಾ ರೀತಿಯ ಸರ್ಕಸ್ ಮಾಡೋದು ಕಾಮನ್. ಹೀಗೆ ಪ್ರೀತಿಸುವವರು ಕ್ಲಬ್ ಪಾರ್ಕ್ ಎಂದು ಅಡ್ಡಾಡಿದರೆ ಮತ್ತೆ ಕೆಲವರು ಜಾಲಿ ರೈಡ್ ಮಾಡುತ್ತಾರೆ.

 

ಲವ್ ಬರ್ಡ್ಸ್ ಗಳಿಗೆ ದೊಡ್ಡ ಟಾಸ್ಕ್ ಏನಪ್ಪಾ ಅಂದರೆ, ಪೋಷಕರ ಬಳಿ ಕ್ಲಾಸ್ ಎಂದೆಲ್ಲ ಏನೇನೋ ಸಬೂಬು ಹೇಳಿ ಮನೆಯಿಂದ ಎಸ್ಕೇಪ್ ಆಗಿ ಲವ್ವರ್ ನ ಮೀಟ್ ಮಾಡಬೇಕಾಗುತ್ತದೆ. ಒಂದು ವೇಳೆ, ಪೋಷಕರಿಂದ ಲವ್ ಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಪರವಾಗಿಲ್ಲ. ಆದರೆ, ಹೆಚ್ಚಿನ ಸಂದರ್ಭದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಮನೆಯಲ್ಲಿ ತಿಳಿಯದೆ ಇದ್ದಾಗ ಪೋಷಕರ ಕಣ್ಣುತಪ್ಪಿಸಿ ಮನೆಯಿಂದ ಹೊರ ಹೋಗೋದೇ ದೊಡ್ಡ ಸಂಕಷ್ಟ. ಹೀಗೆ, ಕದ್ದು ಮುಚ್ಚಿ ಪ್ರೇಯಸಿ ಯೊಬ್ಬಳು ತನ್ನ ಲವ್ವರ್ ಅನ್ನು ತನ್ನ ಮನೆಯ ಟೆರೇಸ್ ಅಲ್ಲಿ ಭೇಟಿಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಉತ್ತರಭಾರತದಲ್ಲಿ ವರದಿಯಾಗಿದೆ.

 

ತನ್ನ ಮನೆ ಮಂದಿಗೆ ತಿಳಿಯದಂತೆ ಮನೆಯ ಟೆರೇಸ್‌ನಲ್ಲೇ ಪ್ರೇಮಿಯನ್ನು ಭೇಟಿ ಮಾಡಿದ ಹುಡುಗಿ ತನ್ನ ತಾಯಿಯ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಮುಂದೆನಾಗಿರ ಬಹುದು ಅನ್ನೋ ಕುತೂಹಲ ನಿಮಗೂ ಮೂಡಿರುತ್ತೆ!! ಹಾಗಿದ್ರೆ, ಕಥೆಯ ಮುಂದಿನ ರೋಚಕ ಕಹಾನಿ ನಾವು ಹೇಳ್ತೀವಿ ಕೇಳಿ.

 

ಮನೆಯಲ್ಲಿ ಪ್ರೀತಿಯ ಬಗ್ಗೆ ಗೊತ್ತಿಲ್ಲದೆ ಕದ್ದು ಮುಚ್ಚಿ ಲವ್ವಿ ಡವ್ವಿ ಮಾಡಿ ಮನೆಯವರ ಕಣ್ಣು ತಪ್ಪಿಸಿ ಓಡಾಡೋದೆಂದರೆ, ಅದರ ಪಾಡು ಹೇಳತೀರದು. ಹೀಗೆ ಪ್ರೇಮಿಯನ್ನು ಭೇಟಿಯಾಗಲು ಹೊರ ಹೋಗಲೂ ಆಗದೇ ಇದ್ದ ಹಿನ್ನೆಲೆ ಯುವತಿಯೊಬ್ಬಳು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾಗಿದ್ದಾಳೆ. ಈ ವೇಳೆ, ಹುಡುಗಿಯ ಅಮ್ಮ ಟೆರೇಸ್ ಗೆ ಎಂಟ್ರಿ ಕೊಟ್ಟಿದ್ದು, ಹೀಗಾಗಿ ಯುವತಿ ಹಾಗೂ ಆಕೆಯ ಬಾಯ್ ಫ್ರೆಂಡ್ ರೆಡ್ ಹ್ಯಾಂಡ್ ಆಗಿ ತಾಯಿಯ(Mother) ಕೈಯಲ್ಲಿ ತಗಲಾಕಿಕೊಂಡಿದ್ದಾಳೆ. ಹೀಗೆ ಸಿಕ್ಕಿಕೊಂಡ ಮೇಲೆ ಮುಂದೇನಾಗಿರಬಹುದು ಎಂದು ನಿಮಗೆ ಖಂಡಿತ ಅಂದಾಜಾಗಿರುತ್ತೆ .

 

ತಾಯಿಯು ತನ್ನ ಚಪ್ಪಲಿ (Slippers) ಗಳಿಂದ ಇಬ್ಬರಿಗೂ ಚಪ್ಪಲಿ ಸೇವೆ ಮಾಡಿದ್ದಾರೆ. ಸದ್ಯ, ಈ ವೀಡಿಯೋವನ್ನು ಬಳಕೆದಾರರೊಬ್ಬರು ಇಡೀ ಘಟನೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹೀಗಾಗಿ, ವೀಡಿಯೋ ವೈರಲ್ ಆದ ಹಿನ್ನೆಲೆ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವೀಡಿಯೊವನ್ನು ಅವರ ನೆರೆಹೊರೆಯವರು ರೆಕಾರ್ಡ್ ಮಾಡಿದ್ದು, ಇದರಲ್ಲಿ ಟೆರೇಸ್‌ಗೆ ಆಗಮಿಸುವ ತಾಯಿ ಮೂಲೆ ಮೂಲೆಯಲ್ಲಿ ಹುಡುಕಿ ಬಾಯ್‌ಫ್ರೆಂಡ್ ಅನ್ನು ಹುಡುಕಾಡಿ, ಆ ಬಳಿಕ ಕಾಲಿನಿಂದ ಚಪ್ಪಲಿಯನ್ನು ತೆಗೆದು ಆತನಿಗೆ ಚಪ್ಪಲಿ ಸೇವೆ ಮಾಡುತ್ತಾಳೆ. ಹಾಗೋ ಹೀಗೋ ಏನೋ ಮಾಡಿ ಅಲ್ಲಿಂದ ಹುಡುಗ ಕಾಲ್ಕಿತ್ತಿದ್ದಾನೆ. ಆನಂತರ ತಾಯಿ ಮಗಳಿಗೆ ಚಪ್ಪಲಿ ಸೇವೆ ಮಾಡಿದ್ದಾರೆ.

‘ಆಂಟಿ, ಮಗಳ ವ್ಯಾಲೆಂಟೈನ್ಸ್ ಡೇ ಪ್ಲಾನ್‌ನ್ನು ಹಾಳು ಮಾಡಿದರು’ ಎಂಬ ಶೀರ್ಷಿಕೆಯ ಮೂಲಕ ವೀಡಿಯೊವನ್ನು ಫೆಬ್ರವರಿ 14 ರಂದು ವೀಡಿಯೋ ಶೇರ್ ಮಾಡಲಾಗಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋವನ್ನು 1 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿ ಲೈಕ್ ನೀಡಿದ್ದಾರೆ. ಈ ವೀಡಿಯೊ ನೋಡಿ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಈ ತಾಯಿ ಶೀಘ್ರವೇ ತನ್ನ ಮಗಳಿಗೆ (Daughter) ಮದುವೆ ಮಾಡಿಬಿಡುತ್ತಾರೆ ಎಂದರೆ ಮತ್ತೆ ಕೆಲವರು, ಸಿಂಗಲ್‌ ಆಗಿರುವವರು ಇದನ್ನು ನೋಡಿ ಸಂತೋಷ ಪಡಿ ಎಂದಿದ್ದಾರೆ.