Home latest Electrocuted: ಆಟವಾಡುತ್ತಿದ್ದಾಗ ಫ್ಯಾನ್‌ನಿಂದ ವಿದ್ಯುತ್‌ ಪ್ರವಹಿಸಿ ಒಂದೇ ಕುಟುಂಬದ ನಾಲ್ಕು ಮಕ್ಕಳ ಸಾವು!!!

Electrocuted: ಆಟವಾಡುತ್ತಿದ್ದಾಗ ಫ್ಯಾನ್‌ನಿಂದ ವಿದ್ಯುತ್‌ ಪ್ರವಹಿಸಿ ಒಂದೇ ಕುಟುಂಬದ ನಾಲ್ಕು ಮಕ್ಕಳ ಸಾವು!!!

Image Credit: TOI

Hindu neighbor gifts plot of land

Hindu neighbour gifts land to Muslim journalist

ಫ್ಯಾನ್‌ನಿಂದ ವಿದ್ಯುತ್‌ ಪ್ರವಹಿಸಿ ನಾಲ್ಕು ಮಕ್ಕಳು ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆಯೊಂದು ವರದಿಯಾಗಿದೆ. 9 ವರ್ಷದೊಳಗಿನ ನಾಲ್ವರು ಮಕ್ಕಳು ಒಂದೇ ಕುಟುಂಬದವರು ಎಂದು ವರದಿಯಾಗಿದೆ. ಈ ಘಟನೆ ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ ಎಂದು ವರದಿ ತಿಳಿಸಿದೆ.

ಮೃತರಲ್ಲಿ ಎರಡು ಗಂಡು, ಎರಡು ಹೆಣ್ಣುಮಕ್ಕಳು ಸೇರಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಉನ್ನಾವೋದ ಲಾಲಮಂಖೇಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡೆದಾಗ ನಾಲ್ಕು ಮಕ್ಕಳು ಮಾತ್ರ ಮನೆಯಲ್ಲಿದ್ದು, ಪೋಷಕರು ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದರು.

ಫ್ಯಾನ್‌ ಬಳಿ ಆಟವಾಡುತ್ತಿದ್ದ ಮಕ್ಕಳಲ್ಲಿ ಒಬ್ಬ ಆಕಸ್ಮಿಕವಾಗಿ ಅದನ್ನು ಸ್ಪರ್ಶಿಸಿದಾಗ ವಿದ್ಯುತ್‌ ಪ್ರವಾಹ ಉಂಟಾಗಿದೆ. ಸಹಾಯಕ್ಕಾಗಿ ಕೂಗಿದಾಗ, ಉಳಿದ ಮಕ್ಕಳು ಅಲ್ಲಿಗೆ ಬಂದಿದ್ದು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಕೂಡಲೇ ಒಬ್ಬರ ಹಿಂದೆ ಒಬ್ಬರು ಫ್ಯಾನ್‌ಗೆ ಸಿಲುಕಿ ನಾಲ್ವರು ಸ್ಥಳದಲ್ಲೇ ಮೃತ ಹೊಂದಿದ್ದಾರೆ.

ಅನಂತರ ನೆರೆಹೊರೆಯವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ಹೇಳಲಾಗಿದೆ. ಮೃತರಲ್ಲಿ ಮಯಾಂಕ್(9) ಹಿಮಾಂಶಿ (8), ಹಿಮಾಂಕ್ (6) ಮತ್ತು ಮಾನ್ಶಿ (5) ಎಂದು ಗುರುತಿಸಲಾಗಿದೆ.

ಎಲ್ಲಾ ಮಕ್ಕಳನ್ನು ಕಳೆದುಕೊಂಡ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಕೂಡಲೇ ಬಂದಿದ್ದಾರೆ. ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.