Home latest ಕೆನರಾಬ್ಯಾಂಕ್‌ ಎಟಿಎಂ ಕಳ್ಳ ಪತ್ತೆ! ತಾಯಿ ಅನಾರೋಗ್ಯಕ್ಕೆ ಹಣ ಬೇಕೆಂದ, ಆದರೆ ಈತನ ಗುರು ಯಾರು...

ಕೆನರಾಬ್ಯಾಂಕ್‌ ಎಟಿಎಂ ಕಳ್ಳ ಪತ್ತೆ! ತಾಯಿ ಅನಾರೋಗ್ಯಕ್ಕೆ ಹಣ ಬೇಕೆಂದ, ಆದರೆ ಈತನ ಗುರು ಯಾರು ಗೊತ್ತೇ? ಪೊಲೀಸರೇ ಶಾಕ್‌!!!

Canara bank ATM robbery
Image credit: Naidunia.com

Hindu neighbor gifts plot of land

Hindu neighbour gifts land to Muslim journalist

Canara bank ATM robbery : ಉತ್ತರ ಪ್ರದೇಶದ ನವಾಬ್‍ ಗಂಜ್‍ನಲ್ಲಿ ಕೆನರಾ ಬ್ಯಾಂಕ್ ಎಟಿಎಂ (Canara bank ATM robbery)ಕತ್ತರಿಸಿ ಹಣ ಲೂಟಿ ಮಾಡಲು ಮುಂದಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮುಂಜಾನೆ 3 ಗಂಟೆ ಸುಮಾರಿಗೆ ಎಟಿಎಂ ಬಳಿ ತಲುಪಿದ ಆರೋಪಿ ಶುಭಂ ಎಟಿಎಂ ಯಂತ್ರವನ್ನು ತೆರೆಯಲು ಪ್ರಯತ್ನಿಸಿದ ಸಂದರ್ಭ ಬೆಂಗಳೂರಿನ ಕೆನರಾ ಬ್ಯಾಂಕಿನ ನಿಯಂತ್ರಣ ಕೊಠಡಿಯಿಂದ ಕಾನ್ಪುರ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಪೋಲಿಸರು (Police)ನವಾಬ್‍ ಗಂಜ್ ತಕ್ಷಣ ಸ್ಥಳಕ್ಕೆ ತಲುಪಿ ಆರೋಪಿ ಶುಭಂರನ್ನು ಬಂಧಿಸಿದ್ದಾರೆ.

ಅಷ್ಟಕ್ಕೂ ಆರೋಪಿ ಕಳ್ಳತನ ಮಾಡಿದ್ಯಾಕೆ ಎಂದು ಪೋಲಿಸರು ವಿಚಾರಣೆಯ ಸಮಯದಲ್ಲಿ, ತನ್ನ ತಾಯಿ ಕ್ಯಾನ್ಸರ್ ನಿಂದ(cancer )ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯವಿದ್ದು, ಹೀಗಾಗಿ, ಎಟಿಎಂ ನಿಂದ ಕಳ್ಳತನ( Atm Money Theft)ಮಾಡಲು ಮುಂದಾಗಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ, ತನ್ನನ್ನು ಬಂಧಿಸಿದಕ್ಕಾಗಿ ಯಾವುದೇ ವಿಷಾದವಿಲ್ಲ ಎಂದು ಆರೋಪಿ ಹೇಳಿಕೊಂಡಿದ್ದಾನೆ.

ಪೋಲಿಸರು ವಿಚಾರಣೆ ನಡೆಸಿದ ಸಂದರ್ಭ ಎಟಿಎಂ ಬಿಚ್ಚುವುದನ್ನು ಹೇಗೆ ತಿಳಿದುಕೊಂಡಿದ್ದಾಗಿ ಪ್ರಶ್ನೆ ಮಾಡಿದ್ದು, ಆತ ಉತ್ತರ ಕೇಳಿ ಪೊಲೀಸರೆ ಶಾಕ್ ಆಗಿದ್ದಾರೆ.
ಯೂಟ್ಯೂಬ್‍ನಲ್ಲಿ ಬರುವ ಟ್ಯುಟೋರಿಯಲ್‍ಗಳನ್ನು ನೋಡಿ ಎಟಿಎಂ ಬಿಚ್ಚುವುದನ್ನು ಕಲಿತಿರುವುದಾಗಿ ಹೇಳಿದ್ದು, ಆದರೆ ತಾನು ಎಟಿಎಂ ಮೂಲಕ ಹಣ ಎಗರಿಸಲು ಪ್ರಯತ್ನ ಪಟ್ಟಿದ್ದಕ್ಕೆ ಯಾವುದೇ ರೀತಿಯ ಬೇಸರವಾಗಲೀ ಅಥವಾ ವಿಷಾದವಾಗಲಿ ಇಲ್ಲ.ಆದರೆ, ತನ್ನ ತಾಯಿಯ ಚಿಕಿತ್ಸೆಗೆ ಹಣ ಹೊಂದಿಸುವುದಕ್ಕೆ ಆಗಲಿಲ್ಲ ಎಂಬ ನೋವಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: Crime News:ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಲಿವುಡ್‌ ನಿರ್ದೇಶಕ ಅರೆಸ್ಟ್‌! ನಟಿಸಲು ಚಾನ್ಸ್‌ ಕೊಡುತ್ತೇನೆಂದು ದುರ್ಬಳಕೆ!