Home latest Shocking News: ದೇವಸ್ಥಾನದಲ್ಲಿ ನಮಾಜ್ ಮಾಡಿದ ತಾಯಿ, ಮಗಳು- ಮುಂದಾದದ್ದೇ ವಿಚಿತ್ರ

Shocking News: ದೇವಸ್ಥಾನದಲ್ಲಿ ನಮಾಜ್ ಮಾಡಿದ ತಾಯಿ, ಮಗಳು- ಮುಂದಾದದ್ದೇ ವಿಚಿತ್ರ

Uttar Pradesh

Hindu neighbor gifts plot of land

Hindu neighbour gifts land to Muslim journalist

Uttar Pradesh : ಹಿಂದೂ ಧರ್ಮವನ್ನು (Hindu) ನಂಬಿಕೊಂಡು ಅದರ ಆಚರಣೆಗಳನ್ನು ನಡೆಸಿಕೊಂಡು ಬರುವವರು ಅದೆಷ್ಟೋ ಮಂದಿ ಇದ್ದಾರೆ. ಹೀಗಿದ್ದರೂ ಕೂಡಧಾರ್ಮಿಕನಂಬಿಕೆಗಳಿಗೆಅಡಚಣೆ ಮಾಡುವ ಅನೇಕ ಘಟನೆಗಳು ವರದಿಯಾಗುತ್ತಲೆ ಇರುತ್ತವೆ. ಇದೀಗ, ಉತ್ತರ ಪ್ರದೇಶದ (Uttar Pradesh)ಬರೇಲಿಯಲ್ಲಿ ಶಿವ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆ ಮತ್ತು ಆಕೆಯ ಮಗಳು ನಮಾಜ್ ಮಾಡಿದ ಘಟನೆ ವರದಿಯಾಗಿದೆ.

ಕೇಸರಪುರ ಗ್ರಾಮದ ಮುಖ್ಯಸ್ಥನ ಪತಿ ಪ್ರೇಮ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಧರ್ಮಗುರುಗಳ ಸಲಹೆಯ ಮೇರೆಗೆ ಮಹಿಳೆ ಮತ್ತು ಅವರ ಮಗಳು ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಆ ಪ್ರದೇಶದ ಸರ್ಕಲ್ ಆಫೀಸರ್ (ಸಿಒ) ಗೌರವ್ ಸಿಂಗ್ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರೇಮ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಮೇಲೆ, ಐಪಿಸಿ ಸೆಕ್ಷನ್ 295 ಎ (ಒಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕೃತ್ಯ) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ ಆರೋಪದ ಮೇರೆಗೆ ಪೊಲೀಸರು ನಜೀರಾ (38) ಆಕೆಯ ಮಗಳು ಸಬೀನಾ (19) ಮತ್ತು ಧರ್ಮಗುರು ಚಮನ್ ಶಾ ಮಿಯಾನ್ ಬಂಧಿಸಿದ್ದಾರೆ.

ಇದನ್ನೂ ಓದಿ: Saving Scheme: ಗೃಹಿಣಿಯರೇ ಕೂತಲ್ಲೇ ನಿಮ್ಮನ್ನು ಲಕ್ಷಾದಿಪತಿಯಾಗಿಸುತ್ತೆ ಈ ಹೊಸ ಸ್ಕೀಮ್ !! ಅರ್ಜಿ ಹಾಕಲು ಮುಗಿಬಿದ್ದ ನಾರಿಯರು