Home latest Rape on Dog: ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ; ಎಲ್ಲಾ ಮುಗಿದ ಮೇಲೆ...

Rape on Dog: ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ; ಎಲ್ಲಾ ಮುಗಿದ ಮೇಲೆ 3ನೇ ಮಹಡಿಯಿಂದ ಎಸೆದ…!

Rape on Pregnant dog

Hindu neighbor gifts plot of land

Hindu neighbour gifts land to Muslim journalist

Rape on Pregnant dog: ಇದೊಂದು ಮಾನವ ಜನ್ಮವೇ ತಲೆತಗ್ಗಿಸುವಂತಹ ಘಟನೆ. ಹೌದು, 28 ವರ್ಷದ ವ್ಯಕ್ತಿಯೋರ್ವ ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ ಮಾಡಿ(Rape on Pregnant dog) ಅನಂತರ ನಿರ್ದಯವಾಗಿ ತನ್ನ ಮನೆಯ ಮೂರನೇ ಮಹಡಿಯ ಬಾಲ್ಕನಿಯಿಂದ ಶ್ವಾನವನ್ನು ಬೀದಿಗೆ ಎಸೆದು ಬಿಟ್ಟಿದ್ದು, ನೀಚ ಕೃತ್ಯವನ್ನು ಎಸಗಿದ್ದಾನೆ ಎಂದು ಹೇಳಬಹುದು.

ಈ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದ್ದು, ಆರೋಪಿಯ ಈ ಕೃತ್ಯ ಕಂಡು ನೆರೆಹೊರೆಯವರು ಪ್ರಶ್ನೆ ಮಾಡಿದಾಗ, ಭಯದಿಂದ ಎಸೆದೆ ಎಂದು ವ್ಯಕ್ತಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ.

ಈ ಘಟನೆ ಕುರಿತು ನೋಯ್ಡಾ ಮೂಲಕ ಪ್ರಾಣಿ ಹಕ್ಕುಗಳ ಕಾರ್ಯಕರ್ತ, ವಕೀಲ ವಿಶಾಲ್‌ ಗೌತಮ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ದೃಶ್ಯಗಳನ್ನು ಹಂಚಿಕೊಂಡಿದ್ದು, ಗರ್ಭಿಣಿ ನಾಯಿಗೆ ಗಾಯಗಳಾಗಿದು, ಆರೋಪಿಯ ಕೃತ್ಯದಿಂದ ಗಾಬರಿಗೊಂಡಿದ್ದ ಶ್ವಾನವನ್ನು ಸ್ಥಳೀಯರು ಆರೈಕೆ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಆರೋಪಿಯು ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ ಮಾಡುವಾಗ ನೆರೆಹೊರೆಯವರು ಇದನ್ನು ಕಂಡಿದ್ದಾರೆ. ಇದನ್ನು ಕೂಡಲೇ ಅರಿತ ಪಾಪಿ ಕಾಮುಕ, ತನ್ನ ಮೂರನೇ ಮಹಡಿಯಿಂದ ಶ್ವಾನವನ್ನು ಎಸೆದು ಬಿಟ್ಟಿದ್ದಾನೆ. ಎಫ್‌ಐಆರ್‌ ದಾಖಲಿಸಿದ ನಂತರ, ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಖಾಸಗಿ ಕಂಪನಿಯ ಉದ್ಯೋಗಿಯಾಗಿರು ಆರೋಪಿ, ಭಾರತೀಯ ದಂಡ ಸಂಹಿತೆ ಸೆಕ್ಷನ್‌ 377 (ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿ ವಿರುದ್ಧ ದೈಹಿಕ ಸಂಭೋಗ) ಅಡಿಯಲ್ಲಿ ಕೇಸು ದಾಖಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಸಹ ಅನ್ವಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : Bigg Boss Kannada Season 10: ದೊಡ್ಮನೆಗೆ ಬಿಗ್‌ಬಾಸ್‌ ಮನೆಗೆ ರೀ ಎಂಟ್ರಿ; ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ?