Home latest ಟ್ಯೂಷನ್ ಗೆಂದು ಮನೆಗೆ ಬಂದ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಪ್ರಾಧ್ಯಾಪಕ !!!

ಟ್ಯೂಷನ್ ಗೆಂದು ಮನೆಗೆ ಬಂದ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಪ್ರಾಧ್ಯಾಪಕ !!!

Hindu neighbor gifts plot of land

Hindu neighbour gifts land to Muslim journalist

ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಪೋಷಕರು ಕಷ್ಟಪಟ್ಟು ದುಡ್ಡು ಹೊಂದಿಸಿ, ಕಾಲೇಜು ಟ್ಯೂಷನ್ ಅಂತ ಕಳಿಸಿದರೆ ಅಲ್ಲಿನ ಶಿಕ್ಷಕ ಈ ರೀತಿಯ ನೀಚ ಕೆಲಸ ಮಾಡುವುದು ಸರಿಯೇ…ಅಂತಾ ನಾವು ನಮಗೇನೇ ಪ್ರಶ್ನೆ ಮಾಡಬೇಕಾಗುತ್ತದೆ.

ಕಲಿತು ಸಮಾಜಕ್ಕೆ ಮಾದರಿಯಾಗೋ ರೀತಿಯಲ್ಲಿ ಕೆಲಸ ಗಿಟ್ಟಿಸಿ ಬಾಳಬೇಕಾದ ಯುವತಿಯ ಬಾಳಲ್ಲಿ ಲೆಕ್ಚರರೋರ್ವ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕನೋರ್ವ, ಇಂಗ್ಲೀಷ್ ಪಾಠಕ್ಕೆ ಹೆಚ್ಚಿನ ಟ್ಯೂಷನ್ ಕೊಡುತ್ತೇನೆಂದು ವಿದ್ಯಾರ್ಥಿನಿಯನ್ನು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಮಾಡಿದ ಘಟನೆಯೊಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಈತನ ಲೈಂಗಿಕ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಈಗ ಮೂರು ತಿಂಗಳ ಗರ್ಭಿಣಿ ಆಗಿದ್ದಾಳೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಕಾಲೇಜು ಮುಗಿದ ಮೇಲೆ ಬಿ.ಕಾಂ ಅಂತಿಮ ವರ್ಷದ 22 ವರ್ಷದ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಕಳೆದೊಂದು ವರ್ಷದಿಂದ ಟ್ಯೂಷನ್‌ ಹೇಳಿಕೊಡುತ್ತಿದ್ದ ಹಾಗೆನೇ,
ಒಂದೂವರೆ ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ಏಳೆಂಟು ಬಾರಿ ಲೈಂಗಿಕ ದೌರ್ಜನ್ಯ, ಆಕೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಾಗ ಬೆದರಿಕೆ ಕೂಡಾ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಮೂರು ತಿಂಗಳ ಗರ್ಭಿಣಿ ವಿದ್ಯಾರ್ಥಿನಿಯನ್ನು ಹಾವೇರಿ ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.