Home International Flight : ವಿಮಾನದಲ್ಲಿ ಮಹಿಳೆಯೋರ್ವಳ ತೆರೆದ ಎದೆಯ ಪ್ರದರ್ಶನ : ಸಿಗರೇಟು ಸೇದಬೇಕೆಂದು ಈ ರೀತಿ...

Flight : ವಿಮಾನದಲ್ಲಿ ಮಹಿಳೆಯೋರ್ವಳ ತೆರೆದ ಎದೆಯ ಪ್ರದರ್ಶನ : ಸಿಗರೇಟು ಸೇದಬೇಕೆಂದು ಈ ರೀತಿ ಮಾಡುವುದೇ?

Image Source : Mirror

Hindu neighbor gifts plot of land

Hindu neighbour gifts land to Muslim journalist

ವಿಮಾನದಲ್ಲಿ ಕೆಲವರಿಗೆ ಕೆಲವೊಂದು ತರಹದ ಅನುಭವಗಳು ಉಂಟಾಗುತ್ತದೆ. ಹಾಗೆನೇ ಇಲ್ಲೊಂದು ವಿಮಾನದಲ್ಲಿ ಮಹಿಳಾ ಪ್ರಯಾಣಿಕರೋರ್ವಳು ತನ್ನ ಬಟ್ಟೆ ವಿವಸ್ತ್ರಗೊಳಿಸಿ, ಸಿಗರೇಟು ಸೇದಲು ಪ್ರಯತ್ನ ಪಟ್ಟಿದ್ದು ಮಾತ್ರವಲ್ಲದೇ ಕಾಕ್‌ಪಿಟ್‌ ಒಳಗೇನೇ ನುಗ್ಗಲು ಪ್ರಯತ್ನ ಪಟ್ಟ ಘಟನೆಯೊಂದು ನಡೆದಿದ್ದು, ಉಳಿದ ಪ್ರಯಾಣಿಕರು ನಿಜಕ್ಕೂ ಭಯಗೊಳಿಸುವಂತ ವಾತಾವರಣ ಸೃಷ್ಟಿ ಉಂಟಾಗಿತ್ತು.

49 ವರ್ಷದ ಅಂಝೆಲಿಕಾ ಮಾಸ್ಕ್ವಿಟಿನಾ ಈ ರೀತಿಯ ಭಯದ ವಾತಾವರಣ ಸೃಷ್ಟಿ ಮಾಡಿದ್ದು ಎಂದು ವರದಿಯಾಗಿದೆ. ಈ ಘಟನೆ ರಷ್ಯಾದ ಏರೋಫ್ಲಾಟ್‌ ವಿಮಾನದಲ್ಲಿ ನಡೆದಿದೆ. ಈ ರೀತಿಯಾಗಿ ವಿಚಿತ್ರವಾಗಿ ವರ್ತಿಸುತ್ತಿರುವಾಗ ಆ ಮಹಿಳೆ ಪುರುಷ ಫ್ಲೈಟ್‌ ಅಟೆಂಡೆಂಟ್‌ ಅವರನ್ನು ಕಚ್ಚಿದ್ದಾರೆ ಎಂದು ಕೂಡಾ ವರದಿಯಾಗಿದೆ.

ವಿಮಾನವು 33,000ಅಡಿ ಎತ್ತರದಲ್ಲಿ ಹಾರುವಾಗ ಈ ನಾಟಕೀಯ ಘಟನೆ ನಡೆದಿದೆ. ಮಹಿಳೆಯು ತನ್ನನ್ನು ತಾನು ಶೌಚಾಲಯದಲ್ಲಿ ಬಂಧಿ ಮಾಡಿಕೊಂಡು ಸಿಗರೇಟು ಹಚ್ಚಲು ಪ್ರಾರಂಭ ಮಾಡಿದಾಗ ಈ ಘಟನೆ ನಡೆದಿದೆ.
ಸ್ಟಾವ್ರೊಪೋಲ್‌ನಿಂದ ಮಾಸ್ಕೋಗೆ ಪ್ರಯಾಣಿಸುತ್ತಿರುವ ವಿಮಾನದಲ್ಲಿ ಈಕೆ ತನ್ನ ಎದೆಯನ್ನು ವಿಮಾನದಲ್ಲಿದ್ದ ಮಕ್ಕಳು ಹಾಗೂ ಅಲ್ಲಿ ನೆರೆದಿದ್ದವರ ಮುಂದೆ ತೋರಿಸಿ ಅಸಹ್ಯ ವರ್ತನೆ ಮೆರೆದಿದ್ದಾರೆ.

ಈ ರೀತಿಯ ಅಸಹ್ಯ ವರ್ತನೆಯನ್ನು ನೋಡಿದ ವಿಮಾನದ ಕ್ರೂ ಮೆಂಬರ್ಸ್‌ ಆಕೆಗೆ ವಾರ್ನಿಂಗ್‌ ಮಾಡಿ ಕ್ರಿಮಿನಲ್ ಆರೋಪ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ರೀತಿಯ ಅಸಭ್ಯ ವರ್ತನೆಗಳನ್ನು ಮಾಡುವವರ ವರದಿ ದಿನೇ ದಿನೇ ಪ್ರಕಟವಾಗುತ್ತಲೇ ಇರುತ್ತದೆ. ಆದರೂ ಕೆಲವೊಮ್ಮೆ ಕೆಲವು ಕಡೆ ಈ ರೀತಿಯ ಸಮಸ್ಯೆಗಳನ್ನು ಸೃಷ್ಟಿ ಮಾಡುವವರು ಇರುತ್ತಾರೆ. ತನಗೆ ಸಿಗರೇಟು ಸೇದಲು ಅವಕಾಶ ನೀಡಬೇಕು ಹಾಗೆನೇ ಕಾಕ್‌ಪಿಟ್‌ಗೆ ಹೋಗಬೇಕೆಂದು ತನ್ನ ಬಟ್ಟೆ ಬಿಚ್ಚಿ ಮಕ್ಕಳು ಗಂಡಸರ ಮಧ್ಯೆ ಹಠ ಮಾಡಿ ಎಲ್ಲರಿಗೂ ಆತಂಕ ಸೃಷ್ಟಿಸಿದ ಈ ಮಹಿಳೆಗೆ ಏನೆನ್ನಬೇಕು?