Home latest ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು!|ಸ್ಥಳೀಯರಿಂದ ಧರ್ಮದೇಟು ತಿಂದು,ಪೋಲಿಸರ ಕೈವಶ

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು!|ಸ್ಥಳೀಯರಿಂದ ಧರ್ಮದೇಟು ತಿಂದು,ಪೋಲಿಸರ ಕೈವಶ

Hindu neighbor gifts plot of land

Hindu neighbour gifts land to Muslim journalist

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ‌ ನಡೆದಿದೆ.

ಮನೆಯಲ್ಲಿ ಮಹಿಳೆ ಒಂಟಿಯಾಗಿ ಇರುವುದನ್ನು ಗಮನಿಸಿ ವಕೀಲ ರಾಜಾರಾಂ ಮನೆಗೆ ನುಗ್ಗಿದ್ದಾರೆ.ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮೂವರು‌ ಮನೆಗಳ್ಳತನಕ್ಕೆ ಯತ್ನಿಸಿದವರಾಗಿದ್ದಾರೆ.

ಮಹಿಳೆಯ ಕಿರುಚಾಟ ಕೇಳಿ ಬಂದ ಅಕ್ಕಪಕ್ಕದ ಮನೆಯವರು ಮೂವರನ್ನು ಹಿಡಿದು ಧರ್ಮದೇಟು ನೀಡಿದ್ದೂ ಅಲ್ಲದೇ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.ಚಿಂತಾಮಣಿ ‌ನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.