Home latest ದ.ಕ:ಉಳ್ಳಾಲ ಶಾಸಕರಿಗೂ ಕಾದಿದೆಯಾ ಸಂಕಷ್ಟ!? ಶಂಕಿತ ಉಗ್ರನ ತಂದೆಯೊಂದಿಗಿದ್ದ ಫೋಟೋ ವೈರಲ್-ಎನ್.ಐ.ಎ ತನಿಖೆಗೆ ವಿ.ಹಿಂ.ಪ ಮುಖಂಡ...

ದ.ಕ:ಉಳ್ಳಾಲ ಶಾಸಕರಿಗೂ ಕಾದಿದೆಯಾ ಸಂಕಷ್ಟ!? ಶಂಕಿತ ಉಗ್ರನ ತಂದೆಯೊಂದಿಗಿದ್ದ ಫೋಟೋ ವೈರಲ್-ಎನ್.ಐ.ಎ ತನಿಖೆಗೆ ವಿ.ಹಿಂ.ಪ ಮುಖಂಡ ಅತ್ತಾವರ ಒತ್ತಾಯ!??

Hindu neighbor gifts plot of land

Hindu neighbour gifts land to Muslim journalist

ಮಂಗಳೂರು:ಜಿಲ್ಲೆಯಲ್ಲಿ ನಡೆದ ಹಿಂದೂ ಯುವಕರ ಹತ್ಯೆಗಳಿಗೆ ಪ್ರತ್ಯುತ್ತರ ಮುಸ್ಲಿಂ ಯುವಕರ ಹತ್ಯೆ, ಸುರತ್ಕಲ್ ನಲ್ಲಿ ನುಗ್ಗಿ ಹೊಡೆಸಿದ್ದೇವೆ, ಮುಂದೆ ನಮ್ಮ ಒಂದು ತಲೆಗೆ ನಿಮ್ಮ ಹತ್ತು ತಲೆ ಹೀಗೆ ರಾಜಾರೋಷವಾಗಿ ಉಳ್ಳಾಲದಲ್ಲಿ ನಡೆದ ಹಿಂದೂ ಶೌರ್ಯಯಾತ್ರೆಯಲ್ಲಿ ಮಾತನಾಡಿದ್ದ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಅವರ ವಿರುದ್ಧ ರಾಜಕೀಯ ನಾಯಕರ ಸಹಿತ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ವಿಹಿಂಪ ನ ಇನ್ನೊರ್ವ ಮುಖಂಡ ಉಳ್ಳಾಲ ಶಾಸಕರಿಗೆ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.

ಮೊನ್ನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣ್ ಪಂಪ್ ವೆಲ್ ವಿರುದ್ಧ ಕಿಡಿಕಾರಿದ್ದ ಉಳ್ಳಾಲ ಶಾಸಕರಾದ ಯು.ಟಿ ಖಾದರ್ ಅವರಿಗೆ ಭಜರಂಗದಳ ಜಿಲ್ಲಾ ಸಹ ಸಂಯೋಜಕ್ ಪುನೀತ್ ಅತ್ತಾವರ ಅವರು ತಿರುಗೇಟು ನೀಡಿದ್ದು, ಖಾದರ್ ಅವರನ್ನು ಕೂಡಾ ಎನ್ಐಎ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.

ಇತ್ತೀಚಿಗೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ, ಉಡುಪಿ ಮೂಲದ ತಾಜುದ್ದೀನ್ ಶೇಕ್ ನ ತಂದೆಯೊಂದಿಗೆ ಯುಟಿ ಖಾದರ್ ಈ ಮೊದಲು ತೆಗೆಸಿಕೊಂಡ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಶಾಸಕರಿಗೂ ಅವರಿಗೂ ನಿಕಟ ಸಂಪರ್ಕವಿತ್ತು, ನಿಷೇಧಿತ ಪಿ.ಎಫ್.ಐ ಜಿಲ್ಲೆಯ ಮುಖಂಡರನ್ನು ಎನ್.ಐ.ಎ ತನಿಖೆ ನಡೆಸಿದಂತೆ ಖಾದರ್ ಅವರನ್ನೂ ತನಿಖೆಗೆ ಒಳಪಡಿಸಿ ಎಂದು ಪುನೀತ್ ಅತ್ತಾವರ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅತ್ತಾವರ ಪರವಾಗಿ ಹಿಂದೂ ಕಾರ್ಯಕರ್ತರು ದನಿಗೂಡಿಸಿದ್ದು, ಪ್ರಭಾವಿ ಶಾಸಕ ಖಾದರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.