Home Karnataka State Politics Updates ರಾಜ್ಯದ ರಾಜ್ಯಪಾಲರಾಗಿ ಸೂಪರ್ ಸ್ಟಾರ್ ರಜನಿಕಾಂತ್!?? ಬಿಜೆಪಿ ವರಿಷ್ಠರ ಚಿಂತನೆ-ಹುದ್ದೆ ಫಿಕ್ಸ್!?

ರಾಜ್ಯದ ರಾಜ್ಯಪಾಲರಾಗಿ ಸೂಪರ್ ಸ್ಟಾರ್ ರಜನಿಕಾಂತ್!?? ಬಿಜೆಪಿ ವರಿಷ್ಠರ ಚಿಂತನೆ-ಹುದ್ದೆ ಫಿಕ್ಸ್!?

Hindu neighbor gifts plot of land

Hindu neighbour gifts land to Muslim journalist

ಚೆನ್ನೈ: ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಲು ಇಚ್ಛಿಸದ ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿಸಿ, ಆ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿಸುವ ಬಗ್ಗೆ ಚಿಂತನೆಯೊಂದು ನಡೆಸಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.

ಕೆಂಪುಕೋಟೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್, ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಹಲವರನ್ನು ಭೇಟಿ ಮಾಡಿದ್ದರು. ಹಲವು ಬಾರಿ ರಾಜಕೀಯ ಪ್ರವೇಶಿಸಲು ಮುಂದಾಗಿದ್ದು, ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿ ಹಿಂದೆ ಸರಿಯುತ್ತಿದ್ದರು.

ಸದ್ಯ ಬಿಜೆಪಿ ವರಿಷ್ಠರು ರಾಜ್ಯಪಾಲ ಹುದ್ದೆ ನೀಡುವ ಯೋಚನೆ ನಡೆಸಿದ್ದು, ಈ ಚಿಂತನೆಗೆ ರಜನಿಕಾಂತ್ ಒಮ್ಮತ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿಯು ದಟ್ಟವಾಗಿ ಹಬ್ಬಿದೆ. ಅದಲ್ಲದೆ ತಮಿಳುನಾಡು ಮಾತ್ರವಲ್ಲದೆ ರಜನಿಕಾಂತ್ ಅಭಿಮಾನಿಗಳು ಕರ್ನಾಟಕದಲ್ಲೂ ಇದ್ದು, ಎರಡೂ ರಾಜ್ಯಗಳಲ್ಲಿ ಹೆಚ್ಚು ಹಿಡಿತ ಸಾಧಿಸಬಹುದು ಎನ್ನುವ ಆಲೋಚನೆ ವರಿಷ್ಠರದ್ದಾಗಿದೆ ಎಂದು ಕೆಲ ಆಪ್ತ ಮೂಲಗಳು ತಿಳಿಸಿವೆ.