Home latest Bizarre Case: ವಯಸ್ಸಿಗೆ ಬಂದ ಮಗಳನ್ನು ಸದಾ ಹಿಂಬಾಲಿಸುತ್ತಿದ್ದ ತಾಯಿ – ಕೊನೆಗೆ ತಾಯಿಗೆ ಕಾದಿತ್ತು...

Bizarre Case: ವಯಸ್ಸಿಗೆ ಬಂದ ಮಗಳನ್ನು ಸದಾ ಹಿಂಬಾಲಿಸುತ್ತಿದ್ದ ತಾಯಿ – ಕೊನೆಗೆ ತಾಯಿಗೆ ಕಾದಿತ್ತು ಬಿಗ್ ಶಾಕ್ !!

Hindu neighbor gifts plot of land

Hindu neighbour gifts land to Muslim journalist

Bizarre Case: ದಕ್ಷಿಣ ಕೊರಿಯಾದ (South Korea) ಮಹಿಳೆಯೊಬ್ಬಳು(Women)ತನ್ನ ಮಗಳನ್ನು ಹಿಂಬಾಲಿಸಿದ (Stalking) ಮತ್ತು ಕಿರುಕುಳ ನೀಡಿದ ಆರೋಪದ ಆಧಾರದಲ್ಲಿ ಆರು ತಿಂಗಳ ಜೈಲು ಶಿಕ್ಷೆ (Sentenced to six Months in Jail) ಮತ್ತು ಎರಡು ವರ್ಷಗಳ ಆಂಟಿ ಸ್ಟಾಕಿಂಗ್ (Anti Stalking) ಶಿಕ್ಷೆ ವಿಧಿಸಿರುವ ಘಟನೆ ವರದಿಯಾಗಿದೆ.

 

ಡಿಸೆಂಬರ್ 2021ರಿಂದ ಮೇ 2022ರವರೆಗೆ ಆರೋಪಿ ತಾಯಿ 50 ವರ್ಷದ ಮಹಿಳೆ ತನ್ನ ಮಗಳಿಗೆ ಸಂದೇಶ ಮತ್ತು ಕರೆ ಮಾಡುವ ಮೂಲಕ ಎಲ್ಲಿದ್ದೀಯಾ, ಏನು ಮಾಡುತ್ತಿದ್ದೀಯಾ, ಎಂದು ಪ್ರಶ್ನಿಸುತ್ತಿದ್ದಳು. ಇದರ ಜೊತೆಗೆ ಬೈಬಲ್ ಓದುವಂತೆ ಕಾಟ ಕೊಡುತ್ತಿದ್ದಳು. ಆಕೆ ಯಾವಾಗಲೂ ತನ್ನ ಮಗಳು ಎಲ್ಲಿದ್ದಾಳೆಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಳು ಎನ್ನಲಾಗಿದೆ. ಸಂದೇಶ ಮತ್ತು ಕರೆಗೆ ಸರಿಯಾದ ಸಮಯಕ್ಕೆ ಉತ್ತರಿಸದೆ ಇದ್ದರೆ ಕೋಪದಲ್ಲಿ ತನ್ನ ಮಗಳ ಲೈಂಗಿಕ ನಡೆಯ ಕುರಿತು ಅವಹೇಳನಕಾರಿ ಕಾಮೆಂಟ್ ಮಾಡಿ ಹಂಗಿಸುತ್ತಿದ್ದಳು ಎಂದು ಆರೋಪ ಮಾಡಲಾಗಿದೆ.

 

ಮಹಿಳೆ ತನ್ನ ಮಗಳನ್ನು ಹಲವು ಬಾರಿ ಅವಳಿಗೆ ತಿಳಿಯದ ರೀತಿಯಲ್ಲಿ ಹಿಂಬಾಲಿಸಿದ್ದಾಳೆ ಎನ್ನಲಾಗಿದೆ. ಆರೋಪಿ ತನ್ನ ಮಗಳ ಮನೆಗೆ ಹೇಳದೆ ಕೇಳದೇ 8ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾಳೆ. ಇದು ಸಾಲದೆಂಬಂತೆ ಅನುಮಾನವೆಂಬ ಪೆಡಂಭೂತ ಮೈಗಂಟಿಕೊಂಡಂತೆ ತಾಯಿ ಮಗಳ ಮನೆಯೊಳಗೆ ಇಣುಕಿ ನೋಡುತ್ತಿದ್ದಳು ಎನ್ನಲಾಗಿದೆ. ಜೂನ್‌ನಲ್ಲಿ ಪೊಲೀಸರು ಈ ಕುರಿತು ಎಚ್ಚರಿಕೆ ನೀಡಿದರೂ ಕೂಡ ಮಹಿಳೆ ಮಾತ್ರ ಇದೆ ರೀತಿಯ ಕೃತ್ಯ ಎಸಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಆಕೆಗೆ ನ್ಯಾಯಾಲಯವು ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

 

ಈ ಪ್ರಕರಣವು ಡಿಸೆಂಬರ್ 2021 ಮತ್ತು ಮೇ 2022 ರ ನಡುವೆ ಸಂಭವಿಸಿದ್ದು, ನ್ಯಾಯಾಲಯದ (Court) ದಾಖಲೆಗಳ ಅನುಸಾರ ತಾಯಿ ತನ್ನ ವಯಸ್ಕ ಮಗಳಿಗೆ ಒಟ್ಟು 306 ಮೊಬೈಲ್ ಸಂದೇಶಗಳ ಜೊತೆಗೆ 111 ಬಾರಿ ಫೋನ್ ಕರೆಗಳನ್ನು ಮಾಡಿ ಕಿರುಕುಳ ನೀಡಿದ್ದಾಳೆ ಎನ್ನಲಾಗಿದೆ. ದಕ್ಷಿಣ ಕೊರಿಯಾದ ಕಾನೂನಿನ ಪ್ರಕಾರ, ಹಿಂಬಾಲಿಸುವ ಅಪರಾಧಿ ವ್ಯಕ್ತಿಗೆ 30 ಮಿಲಿಯನ್ ವೋನ್ (ಅಂದಾಜು ರೂ 18,78,008) ವರೆಗೆ ದಂಡ ಇಲ್ಲವೇ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪರಾಧಿಯು ಆಯುಧವನ್ನು ಒಳಗೊಂಡಿದ್ದು, ಯಾರನ್ನಾದರೂ ಉದ್ದೇಶಪೂರ್ವಕವಾಗಿ ಫಾಲೋ ಮಾಡಿದರೆ ದಂಡದ ಪ್ರಮಾಣ 50 ಮಿಲಿಯನ್ ವೊನ್ಗೆ ಹೆಚ್ಚಾಗುತ್ತದೆ.(ಅಂದಾಜು ರೂ 31,25,083) ಐದು ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ವಿಧಿಸಲಾಗುತ್ತದೆ.