Home latest ವಯಸ್ಸಾದ ತಂದೆ-ತಾಯಿಯನ್ನು ಏಳು ದಿನಗಳ ಕಾಲ ಭುಜದ ಮೇಲೆ ಹೊತ್ತು ಸಾಗಿದ ಮಗ!!|ಶ್ರವಣ ಕುಮಾರನ ಕತೆಗಿಂತಲೂ...

ವಯಸ್ಸಾದ ತಂದೆ-ತಾಯಿಯನ್ನು ಏಳು ದಿನಗಳ ಕಾಲ ಭುಜದ ಮೇಲೆ ಹೊತ್ತು ಸಾಗಿದ ಮಗ!!|ಶ್ರವಣ ಕುಮಾರನ ಕತೆಗಿಂತಲೂ ವಿಭಿನ್ನವಾಗಿದೆ ಈತನ ಕತೆ

Hindu neighbor gifts plot of land

Hindu neighbour gifts land to Muslim journalist

ವಯಸ್ಸಾದ ತಂದೆ-ತಾಯಿಯನ್ನು ಆಶ್ರಮಕೋ ಅಥವ ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಮಕ್ಕಳು ತಮ್ಮ ಕೆಲಸದಲ್ಲಿ ಮಗ್ನರಾಗುವವರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ತನ್ನ ತಂದೆ-ತಾಯಿಯನ್ನು ಭುಜದ ಮೇಲೆ ಹೊತ್ತು ಸಾಗಿದ ದೃಶ್ಯ ಕಣ್ಣಲ್ಲಿ ನೀರು ಬರುವಂತಿದೆ.

ನೀವೆಲ್ಲರೂ ಶ್ರವಣ ಕುಮಾರನ ಕತೆ ಕೇಳಿರುತ್ತಿರಿ. ಆತ ತನ್ನ ವಯಸ್ಸಾದ ಕುರುಡು ತಂದೆ ತಾಯಿಯರನ್ನು ಭುಜದ ಮೇಲೆ ಹೊತ್ತು ಸಾಗಿದ್ದ.ಇದೀಗ ಅಂತಹುದೇ ಒಂದು ಘಟನೆ ನಿಜವಾಗಿಯೂ ನಡೆದಿದ್ದು, ಈತ ಶ್ರವಣ ಕುಮಾರನ ಎರಡನೇ ಜನ್ಮ ಎಂಬಂತಿದೆ ಈ ಚಿತ್ರಣ.

ಮ್ಯಾನ್ಮಾರ್ ನ ಒಬ್ಬ ವ್ಯಕ್ತಿಯು ತನ್ನ ವಯಸ್ಸಾದ ಹೆತ್ತವರನ್ನು ಏಳು ದಿನಗಳ ಕಾಲ ತನ್ನ ಭುಜದ ಮೇಲೆ ಡಬಲ್ ಬಾಸ್ಕೆಟ್ನಲ್ಲಿ ಹೊತ್ತು ಬಾಂಗ್ಲಾದೇಶಕ್ಕೆ ತಲುಪಿದ ಘಟನೆ ನಡೆದಿದೆ.

ಆರ್ ಪಿಜಿ ಗ್ರೂಪ್ ಸಮೂಹದ ಪ್ರಸ್ತುತ ಅಧ್ಯಕ್ಷ ಹರ್ಷವರ್ಧನ್ ಗೋಯೆಂಕಾ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ವೈರಲ್ ಆಗಿದೆ.

ಈ ಫೋಟೋದಲ್ಲಿ, ಆಧುನಿಕ ದಿನದ ಶ್ರವಣ ಕುಮಾರ್ 7 ದಿನಗಳ ಕಾಲ ವೃದ್ಧ ತಾಯಿ ಮತ್ತು ತಂದೆಯನ್ನು ಬುಟ್ಟಿಯಲ್ಲಿ ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಅವರ ಪೋಷಕರು ಚಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಹೊತ್ತು ಬಾಂಗ್ಲಾದೇಶಕ್ಕೆ ತೆರಳಿದ ಘಟನೆ ನಡೆದಿದೆ.