Home latest ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಗೆ ಲೈಂಗಿಕ ಕಿರುಕುಳ | ದೂರು ನೀಡಿದರೂ ಕ್ಯಾರೇ ಮಾಡದ ಕಂಡಕ್ಟರ್|

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಗೆ ಲೈಂಗಿಕ ಕಿರುಕುಳ | ದೂರು ನೀಡಿದರೂ ಕ್ಯಾರೇ ಮಾಡದ ಕಂಡಕ್ಟರ್|

Hindu neighbor gifts plot of land

Hindu neighbour gifts land to Muslim journalist

ಬಸ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಕಾಮುಕರಿಗೇನು ಕಮ್ಮಿ ಇಲ್ಲ. ಮಹಿಳೆಯರ ಅಂಗಾಂಗ ಸ್ಪರ್ಶಿಸಿ ಅದರಲ್ಲಿಯೇ ಖುಷಿ ಕಾಣುವ ವಿಕೃತಕಾಮಿಗಳು ಅದೆಷ್ಟೋ ಮಂದಿ. ಎಷ್ಟೇ ತೊಂದರೆ, ಮುಜುಗರವಾದರೂ ಹೆಚ್ಚಿನ ಮಹಿಳೆಯರು ನಮಗೇಕೆ ಸಹವಾಸ ಎಂದು ಮೌನವಹಿಸುವುದೇ ಹೆಚ್ಚು. ಆದರೆ ಕೇರಳದ ಕೋಯಿಕ್ಕೋಡಿನ ಮಹಿಳೆಯೊಬ್ಬರು ಈ ತೊಂದರೆಗಳನ್ನು ಸಹಿಸದೆ ಅದನ್ನು ತಮ್ಮ ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು ಇದೀಗ ಆರೋಪಿ ಜೊತೆಗೆ ಕಂಡಕ್ಟರ್ ಗೂ ಗ್ರಹಚಾರ ಬಂದಿದೆ.

ವಿಷಯವೇನೆಂದರೆ, ‘ ಕೋಯಿಕ್ಕೋಡ್ ಗೆ ತೆರಳುತ್ತಿದ್ದ ಕೇರಳದ ಕೆಎಸ್ಆರ್ ಟಿಸಿ ಬಸ್ ನಲ್ಲಿ ಶನಿವಾರ ರಾತ್ರಿ ಸಂಚರಿಸುತ್ತಿದ್ದ ಸಮಯದಲ್ಲಿ ಶಿಕ್ಷಕಿಯೊಬ್ಬರಿಗೆ ಸಹ ಪ್ರಯಾಣಿಕ ಕಿರುಕುಳ ಕೊಟ್ಟಿದ್ದಾನೆ. ಶಿಕ್ಷಕಿ ಆ ಕೂಡಲೇ ಅದನ್ನು ಪ್ರತಿಭಟಿಸಿದ್ದಾಳೆ ಕೂಡಾ. ಆದರೂ ಸಹ ಪ್ರಯಾಣಿಕ ತನ್ನ ಕಿರುಕುಳ ಚಾಳಿಯನ್ನು ಮುಂದುವರಿಸಿದ್ದಾನೆ. ಕಡೆಗೆ ಶಿಕ್ಷಕಿ ಕಂಡಕ್ಟರ್ ಗಮನಕ್ಕೆ ತರುತ್ತಾರೆ. ಆದರೆ ಕಂಡಕ್ಟರ್ ಇದನ್ನು ಕೇಳಿಯೂ ಕಡೆಗಣಿಸುತ್ತಾನೆ. ಇದರಿಂದ ಕೋಪಗೊಂಡ ಶಿಕ್ಷಕಿ ಸಂಪೂರ್ಣ ಘಟನೆಯನ್ನು ವೀಡಿಯೋ ಮಾಡಿಕೊಂಡು, ನಡೆದುದನ್ನೆಲ್ಲಾ ಫೇಸ್ಬುಕ್ ನಲ್ಲಿ ಹಾಕಿದ್ದಾರೆ. ಜೊತೆಗೆ ಸಾರಿಗೆ ಸಚಿವರಿಗೂ‌ ಟ್ಯಾಗ್ ಮಾಡಿದ್ದಾರೆ. ವೀಡಿಯೋ ಮಾಡುತ್ತಿದ್ದಂತೆ ಕಾಮುಕ ಕ್ಷಮೆಯನ್ನೂ ಕೇಳಿದ್ದಾನೆ. ಅದನ್ನೂ ಅವರು ಬರೆದಿದ್ದಾರೆ.

ನಂತರ ಈ ಫೇಸ್ಬುಕ್ ವೀಡಿಯೋ ಸಾರಿಗೆ ಸಚಿವ ಆಂಟನಿ ರಾಜು ಅವರ ಗಮನಕ್ಕೆ ಬರುತ್ತದೆ. ಕೂಡಲೇ ಅವರು ತನಿಖೆಗೆ ಆದೇಶ ನೀಡುತ್ತಾರೆ. ಈ ಘಟನೆಯಲ್ಲಿ ಕಂಡಕ್ಟರ್ ತಪ್ಪು ಅಥವಾ ಬೇಜವಾಬ್ದಾರಿ ಕಂಡು ಬಂದರೂ ಆತನ ವಿರುದ್ಧವೂ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.