Home Education ‘ದ್ವಿತೀಯ ಪಿಯುಸಿ ಪರೀಕ್ಷೆ’ಯ ‘ಪ್ರಶ್ನೆಪತ್ರಿಕೆ’ಗಳ ‘ಮಾದರಿ ಉತ್ತರ’ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಮೇ.20 ಕೊನೆಯ ದಿನ

‘ದ್ವಿತೀಯ ಪಿಯುಸಿ ಪರೀಕ್ಷೆ’ಯ ‘ಪ್ರಶ್ನೆಪತ್ರಿಕೆ’ಗಳ ‘ಮಾದರಿ ಉತ್ತರ’ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಮೇ.20 ಕೊನೆಯ ದಿನ

Hindu neighbor gifts plot of land

Hindu neighbour gifts land to Muslim journalist

ಏಪ್ರಿಲ್ 22 ರಿಂದ ಮೇ.18ರವರೆಗೆ ನಡೆದಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರವನ್ನು ಪಿಯು ಬೋರ್ಡ್ ಪ್ರಕಟಿಸಿದೆ. ಈ ಮಾದರಿ ಉತ್ತರಗಳಿಗೆ ಮೇ.20ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ದಿನಾಂಕ 18-05-2022ರಂದು ನಿಗದಿ ಪಡಿಸಿದ್ದ ವೇಳಾಪಟ್ಟಿಯಂತೆ ಮುಕ್ತಾಯವಾಗಿರುತ್ತದೆ ಎಂದು ತಿಳಿಸಿದೆ.

ಮೌಲ್ಯಮಾಪನ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲು ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ ಮಾದರಿ ಉತ್ತರಗಳನ್ನು ಸಿದ್ಧಪಡಿಸಿ, ದಿನಾಂಕ 18-05 2022ರ ಇಂದು ಇಲಾಖಾ ವೆಬ್ ಸೈಟ್ pue.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯನ್ನು ಬರೆದಂತ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಮಾದರಿ ಉತ್ತರಗಳನ್ನು ವೀಕ್ಷಿಸಬಹುದಾಗಿದೆ. ಮಾದರಿ ಉತ್ತರಗಳಿಗೆ ಆಕ್ಷೇಪಣೆಗಳಿದ್ದರೇ, ದಿನಾಂಕ 20-05-2022ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸುವಂತೆ ತಿಳಿಸಿದೆ.