Home latest ಆಲಿಯಾ ಭಟ್ ಜತೆ ಮಲಗುವುದೆಂದರೆ ದೊಡ್ಡ ಹೋರಾಟ ಎಂದ ರಣಬೀರ್ | ಹಾಗಾದ್ರೆ ಜಿಮ್ ಗೆ...

ಆಲಿಯಾ ಭಟ್ ಜತೆ ಮಲಗುವುದೆಂದರೆ ದೊಡ್ಡ ಹೋರಾಟ ಎಂದ ರಣಬೀರ್ | ಹಾಗಾದ್ರೆ ಜಿಮ್ ಗೆ ಹೋಗೋದು ಬೇಕಿಲ್ಲ ಅಂತ ರೇಗಿಸಿದ ಅಭಿಮಾನಿ

Hindu neighbor gifts plot of land

Hindu neighbour gifts land to Muslim journalist

ಪತ್ನಿ ಆಲಿಯಾ ಭಟ್​ ಜೊತೆ ಮಲಗುವುದೆಂದರೆ ಒಂದು ಹೋರಾಟ ಎಂದು ರಣಬೀರ್​ ಕಪೂರ್​ ಹೇಳಿರುವ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದ್ಯಾವ ಥರ ಹೋರಾಟ ಎಂಬ ಬಗ್ಗೆ ಓದುಗರಿಗೆ ಅನುಮಾನ ಮತ್ತು ಊಹೆ ಮೂಡಿದೆ.

“ಓಹೋ…ಹಾಗಾ.., ಬೆಡ್ ರೂಮಿನಲ್ಲಿ ಅಷ್ಟು ಫೈಟ್ ಮಾಡ್ಬೇಕಾ, ಆಕೆ ಸುಲಭಕ್ಕೆ ತೃಪ್ತಿ ಆಗಲ್ವಾ ?” ಅಂತ ಓದುಗರು ಇದಕ್ಕೆ ಅಲ್ಲಿಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಓರ್ವ ಪೋಲಿ ಅಭಿಮಾನಿಯಂತೂ, ” ಇನ್ನೇನು ಬಾಸ್, ಫಿಟ್ ನೆಸ್ ಗಾಗಿ ಬೆಳಿಗ್ಗೆ ಜಿಮ್ ಮಾಡೋ ಕೆಲಸ ಉಳಿಯಿತು. ಅಲ್ಲೇ ಸಾಕಷ್ಟು ಬೆವರು ಬೀಳುತ್ತಲ್ಲ ‘ ಅಂದಿದ್ದಾನೆ.

ರಣಬೀರ್ ಬಾಲಿವುಡ್​ ಬಬಲ್​ಗೆ ನೀಡಿದ ಸಂದರ್ಶನದಲ್ಲಿ ಇಬ್ಬರ ನಡುವಿನ ಸಹಿಸಿಕೊಳ್ಳುವಿಕೆ ಬಗ್ಗೆ ಆಂಕರ್​ ಕೇಳಿದ ಪ್ರಶ್ನೆಗೆ ಉತ್ತಿರಿಸಿದ ರಣಬೀರ್​, ನಿದ್ದೆಯಲ್ಲಿ ಆಲಿಯಾರ ವರ್ತನೆಗಳ ಬಗ್ಗೆ ಮಾತನಾಡಿದ್ದಾರೆ. ನಿಜಕ್ಕೂ ಆಕೆಯ ಜತೆ ಮಲಗೋದು ಯಾಕೆ ಹೋರಾಟ ಅನ್ನುವುದಕ್ಕೆ ರಣಬೀರ್ ಕಾರಣ ನೀಡಿದ್ದಾರೆ. ಅದು ಓದುಗರ ಊಹೆಗಿಂತ ವಿಭಿನ್ನ ಹೋರಾಟ.

ಬೆಡ್​ ಮೇಲೆ ಮಲಗಿರುವಾಗ ಆಲಿಯಾ ಒದ್ದಾಡುವುದು ಜಾಸ್ತಿ ಮತ್ತು ಇಡೀ ಜಾಗವನ್ನೇ ಅತಿಕ್ರಮಿಸಿಕೊಂಡು ಬಿಡುತ್ತಾರೆ. ಆಕೆ ಬೆಡ್ಡಿನಲ್ಲಿ ಚದುರಿ ಹೋಗಿರುತ್ತಾರೆ. ಕೊನೆಗೆ ಉಳಿಯವುದು ಒಂದು ಚೂರು ಜಾಗ. ಆಕೆಯ ತಲೆ ಎಲ್ಲೋ ಇದ್ದರೆ, ಅವಳ ಕಾಲುಗಳು ಇನ್ನೆಲ್ಲೋ ಇರುತ್ತವೆ. ಒಂದು ಸುಳಿ ತಿರುಗಿದ ನಂತರದ ಅಸ್ತವ್ಯಸ್ತತೆ. ಅಂತಿಮವಾಗಿ ನಾನು ಹಾಸಿಗೆಯ ಯಾವುದೋ ಮೂಲೆಯಲ್ಲಿರುತ್ತೇನೆ. ನಿಜವಾಗಿಯೂ ಆಲಿಯಾರೊಂದಿಗೆ ಮಲಗುವುದು ಹೋರಾಟವೇ ಸರಿ ಎಂದು ರಣಬೀರ್​ ಹೇಳಿದ್ದಾರೆ.

ಇದೇ ಪ್ರಶ್ನೆಗೆ ಉತ್ತರಿಸಿದ ಆಲಿಯಾ, ರಣಬೀರ್​ ಅವರಲ್ಲಿ ನಾನು ಒಂದನ್ನು ತುಂಬಾ ಇಷ್ಟಪಡುತ್ತೇನೆ. ಅದು ಅವನು ತುಂಬಾ ಮೌನಿ. ಅವನೊಬ್ಬ ಒಳ್ಳೆಯ ಕೇಳುಗ. ಆದರೆ, ಆತನ ಅತಿಯಾದ ಮೌನವೇ ನನಗೆ ಕಿರಿಕಿರಿ. ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆ ಅವನು ಪ್ರತಿಕ್ರಿಯಿಸಬೇಕೆಂದು ಬಯಸುತ್ತೇನೆ. ಆದರೆ, ಆತ ಪ್ರತಿಕ್ರಿಯಿಸುವುದೇ ಇಲ್ಲ. ಏಕೆಂದರೆ ಅವನು ಜೆನ್‌ ಯೋಗಿಯಂತೆ. (ಶಾಂತಿಯುತ ಮತ್ತು ಶಾಂತ)ನಂತೆ ಎಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಆಲಿಯಾ ಮತ್ತು ರಣಬೀರ್​ ಕಪೂರ್​ ಅವರ ಬ್ರಹ್ಮಾಸ್ತ್ರ ಸಿನಿಮಾ ಬಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಸೂಪರ್ ಹೀರೋ ನಾಟಕವಾಗಿದ್ದು, ಬೆಂಕಿಯೊಂದಿಗೆ ವಿಶೇಷ ಬಂಧವನ್ನು ಹಂಚಿಕೊಳ್ಳುವ ಸರಳ ವ್ಯಕ್ತಿಯ ಸುತ್ತ ಸುತ್ತುತ್ತದೆ. ಇದರಲ್ಲಿ ಆಲಿಯಾ ಭಟ್, ರಣಬೀರ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ನಾಗಾರ್ಜುನ, ಮೌನಿ ರಾಯ್ ಮತ್ತು ಅಮಿತಾಬ್ ಬಚ್ಚನ್ ಇದ್ದಾರೆ. ಇದನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 9 ರಂದು ಥಿಯೇಟರ್‌ಗಳಲ್ಲಿ ಬ್ರಹ್ಮಾಸ್ತ್ರ ತೆರೆಕಂಡಿತ್ತು.