Home latest Rajasthan: ಗ್ಯಾಂಗ್ ರೇಪ್ ಆದ್ರೂ ತಪ್ಪಿಸಿಕೊಂಡು ಓಡಿದ ಹುಡುಗಿ -ಬೆತ್ತಲಾಗೇ ಊರಿಗೆ ಬಂದು ಸಹಾಯ ಬೇಡಿದ್ರೆ...

Rajasthan: ಗ್ಯಾಂಗ್ ರೇಪ್ ಆದ್ರೂ ತಪ್ಪಿಸಿಕೊಂಡು ಓಡಿದ ಹುಡುಗಿ -ಬೆತ್ತಲಾಗೇ ಊರಿಗೆ ಬಂದು ಸಹಾಯ ಬೇಡಿದ್ರೆ ಊರ ಜನ ಮತ್ತೆ ಮಾಡಿದ್ದೇನು ಗೊತ್ತಾ?

Bellary

Hindu neighbor gifts plot of land

Hindu neighbour gifts land to Muslim journalist

Rajasthan: ದೇಶದಲ್ಲಿ ದಿನದಿಂದ ದಿನಕ್ಕೆ ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕೂಡ ಅತ್ಯಾಚಾರ ಪ್ರಕರಣಗಳು. ಜನರಂತೂ ಮಾನವೀಯತೆ ಮರೆತು ಸ್ವಾರ್ಥತೆಯಿಂದ, ಸಂಕುಚಿತ ಮನಸ್ಥಿತಿಗಳಿಂದ ಬದುಕುವುದು ಇನ್ನೂ ಕೆಟ್ಟದ್ದಿನಿಸುತ್ತದೆ. ಸದ್ಯ ಅಂತಹುದೇ ಘಟನೆಯೊಂದು ರಾಜಸ್ಥಾನದಲ್ಲಿ(Rajastan) ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೆ ರಾಜಸ್ಥಾನದಲ್ಲಿ ಗಂಡನೊಬ್ಬ ಹೆಂಡತಿಯನ್ನು ಬೆತ್ತಲೆ ಮೆರವಣಿಗೆ ಮಾಡಿದ ಅಮಾನುಷ ಪ್ರಕರಣವು ಮಾಸುವ ಮುನ್ನವೆ ಇದೇ ರಾಜಸ್ಥಾನದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಗ್ಯಾಂಗ್ ರೇಪ್‌ಗೆ (Gang Rape) ಒಳಗಾಗಿದ್ದ ಮಹಿಳೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೋಗಿದ್ದು, ಬಳಿಕ ಊರ ಜನರ ಸಹಾಯಕ ಕೇಳಿದ್ರೆ ಯಾರೊಬ್ಬರೂ ಸಹಾಯಕ್ಕೆ ಧಾವಿಸದಂತಹ ಮನಕಲುಕುವ ಘಟನೆ ರಾಜಸ್ಥಾನದ (Rajasthan) ಭಿಲ್ವಾರದಲ್ಲಿ (Bhilwara) ಶನಿವಾರ ನಡೆದಿದೆ.

ಹೌದು, ತನ್ನ ಮೇಲೆ ಅತ್ಯಾಚಾರ ಆಗಿದ್ದರೂ ಸಂತ್ರಸ್ತ ಮಹಿಳೆ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಹೋಗಿದ್ದರಿಂದ ಆಕೆ ಬೆತ್ತಲಾಗಿ ಬೀದಿಗಳಲ್ಲಿ ಜನರಲ್ಲಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆಗ ಜನರು ಆಕೆಯನ್ನು ಹುಚ್ಚಿ ಎಂದುಕೊಂಡು ಸಹಾಯ ಮಾಡಲು ನಿರಾಕರಿಸಿದ್ದಾರೆ. ಹಲವು ಗಂಟೆಗಳ ವರೆಗೆ ಮಹಿಳೆ ಸಹಾಯಕ್ಕಾಗಿ ಜನರಲ್ಲಿ ಬೇಡಿಕೊಂಡಿದ್ದಾಳೆ. ಕೊನೆಗೆ ಕೆಲ ಗ್ರಾಮಸ್ಥರು ಆಕೆಯ ದೇಹವನ್ನು ಮುಚ್ಚಲು ಬಟ್ಟೆಗಳನ್ನು ನೀಡಿದ್ದಾರೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮಹಿಳೆ ಆರೋಪಿಗಳಲ್ಲಿ ಒಬ್ಬನ ಪರಿಚಯವಿರುವುದಾಗಿ ತಿಳಿಸಿದ್ದಾಳೆ.

ಸಂತ್ರಸ್ತೆ ಹೇಳಿದ್ದೇನು?
ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ತನ್ನನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೊದಲಿಗೆ ದೈಹಿಕ ಹಿಂಸೆ ನೀಡಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆರೋಪಿಗಳಾದ ಛೋಟು (42) ಹಾಗೂ ಗಿರ್ಧಾರಿಯನ್ನು (30) ಬಂಧಿಸಿದ್ದಾರೆ.

ಇದನ್ನೂ ಓದಿ: Shilpa Shetty: ‘ವಯಸ್ಸಾದೋರು, ಯುವಕರು.. ಯಾರೊಂದಿಗೆ ನಿಮಗೆ ಸುಖ ಜಾಸ್ತಿ’? ಎಂದ ನೆಟ್ಟಿ- ಏನಂದ್ರು ಗೊತ್ತಾ ಶಿಲ್ಪಾ ಶೆಟ್ಟಿ ?!