Home latest ಪ್ರಾಧ್ಯಪಕಿಯೊಬ್ಬರ “ಬಿಕಿನಿ ಫೋಟೋ”ಗೆ ಮಾರು ಹೋದ ವಿದ್ಯಾರ್ಥಿ | ತಂದೆಯಿಂದ ದೂರು, ಪ್ರಾಧ್ಯಾಪಕಿಯಿಂದ 99 ಕೋಟಿ...

ಪ್ರಾಧ್ಯಪಕಿಯೊಬ್ಬರ “ಬಿಕಿನಿ ಫೋಟೋ”ಗೆ ಮಾರು ಹೋದ ವಿದ್ಯಾರ್ಥಿ | ತಂದೆಯಿಂದ ದೂರು, ಪ್ರಾಧ್ಯಾಪಕಿಯಿಂದ 99 ಕೋಟಿ ಪರಿಹಾರ ಕೇಳಿದ ಕಾಲೇಜು!!!

Hindu neighbor gifts plot of land

Hindu neighbour gifts land to Muslim journalist

ವಿದ್ಯಾರ್ಥಿಗಳಿಗೆ ತಮ್ಮ ಟೀಚರ್ಸ್ ಎಂದರೆ ದೇವರ ಹಾಗೆ. ಅಂದರೆ ಭಯ ಭಕ್ತಿ ಇರುತ್ತೆ. ಟೀಚರ್ಸ್ ಕೂಡಾ ಹಾಗೇನೇ ಇರುತ್ತಾರೆ. ಎಷ್ಟು ಡೀಸೆಂಟ್ ಡ್ರೆಸ್ ಕೋಡ್ ಹಾಗೂ ಲುಕ್ ನಲ್ಲಿ ಇರುತ್ತಾರೆ. ಆದರೆ ಇಲ್ಲೊಂದು ಕಡೆ ಕಾಲೇಜಿನಲ್ಲಿ ಓರ್ವ ವಿಶ್ವವಿದ್ಯಾನಿಲಯದ ಶಿಕ್ಷಕಿಯೊಬ್ಬರ ಬಿಕಿನಿ ಫೋಟೋ ವಿದ್ಯಾರ್ಥಿಗೆ ದೊರೆತಿದ್ದು ದೊಡ್ಡ ಅವಾಂತರಕ್ಕೆ ಕಾರಣವಾಗಿದೆ.

ಹೌದು, ಕೋಲ್ಕತ್ತಾದ ಸೇಂಟ್‍ಕ್ಸೇವಿಯರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಬಿಕಿನಿ ಫೋಟೋವನ್ನು ಹಾಕಿದ್ದರು. ಇದನ್ನು ನೋಡುತ್ತಿದ್ದ ಆಕೆಯ ವಿದ್ಯಾರ್ಥಿಯನ್ನು ಕಂಡ ತಂದೆಗೆ ಗಾಬರಿಯಾಗಿದೆ. ಆತ ಶಿಕ್ಷಕಿಯ ಬಿಕಿನಿ ಫೋಟೋ ನೋಡಿ, ಓದುವುದರಲ್ಲಿ ಹಿಂದೆ ಬಿದ್ದಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಶಿಕ್ಷಕಿಯನ್ನು ಅಮಾನತು ಮಾಡಬೇಕೆಂದು ವಿವಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಇದನ್ನು ಗಂಭೀರವಾಗಿ ಮನಗಂಡ ವಿವಿಯ ಆಡಳಿತ ಮಂಡಳಿಯು ಪ್ರಾಧ್ಯಾಪಕಿಯ ರಾಜೀನಾಮೆಗೆ ಒತ್ತಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕಿ ಬಲವಂತವಾಗಿ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲದೇ ವಿವಿಯ ಆಡಳಿತ ಮಂಡಳಿಯು ತಮ್ಮ ಕಾಲೇಜಿನ ಖ್ಯಾತಿಗೆ ಹಾನಿ ಆಗಿದೆ ಎಂಬ ಕಾರಣ ನೀಡಿ, 99 ಕೋಟಿ ರೂ.ವನ್ನು ಪಾವತಿಸುವಂತೆ ಪ್ರಾಧ್ಯಾಪಕಿಗೆ ಕೇಳಿದೆ.

ಅಂದ ಹಾಗೆ ವಿದ್ಯಾರ್ಥಿಯ ತಂದೆ ನೀಡಿದ ದೂರಿನಲ್ಲಿ ಏನಿದೆ? “ಇತ್ತೀಚಿಗೆ ನನ್ನ ಮಗ ಪ್ರಾಧ್ಯಾಪಕಿಯ ಕೆಲವು ಫೋಟೋಗಳನ್ನು ನೋಡುತ್ತಿರುವುದನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ. ಅಷ್ಟೇ ಅಲ್ಲದೇ ಆ ಫೋಟೋದಲ್ಲಿ ಪ್ರಾಧ್ಯಾಪಕಿಯು ಅಶ್ಲೀಲ ರೀತಿಯಲ್ಲಿ ಪೋಸ್‍ನ್ನು ನೀಡಿದ್ದಾರೆ. ಜೊತೆಗೆ ಈ ಫೋಟೋವನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿಯೇ ಫೋಟೋವನ್ನು ಹಾಕಿಕೊಂಡಿದ್ದಾಳೆ. ಶಿಕ್ಷಕಿಯೊಬ್ಬಳು ಬಿಕಿನಿ ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಅಪ್‍ಲೋಡ್ ಮಾಡುತ್ತಿರುವುದನ್ನು ನೋಡುವುದು ಪೋಷಕರಾಗಿ ನನಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಏಕೆಂದರೆ ನನ್ನ ಮಗನನ್ನು ಈ ರೀತಿಯ ಅಸಭ್ಯತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಈ ರೀತಿಯ ಫೋಟೋವನ್ನು ಹಾಕುವುದರಿಂದ ವಿದ್ಯಾರ್ಥಿಗಳ ದಾರಿ ತಪ್ಪಿಸಿದಂತಾಗುತ್ತದೆ” ಎಂದು ಪತ್ರದಲ್ಲಿ ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.

ಇದಕ್ಕೆ ಉತ್ತರವಾಗಿ ಪ್ರಾಧ್ಯಾಪಕಿ ಕೂಡಾ ದೂರನ್ನು ಪೊಲೀಸರಿಗೆ ನೀಡಿದ್ದಾರೆ. ” ನನ್ನ ಇನ್‍ಸ್ಟಾಗ್ರಾಂ ಖಾತೆಯು ಸಾರ್ವಜನಿಕವಾಗಿದ್ದಲ್ಲ, ಖಾಸಗಿ. ಅಷ್ಟು ಮಾತ್ರವಲ್ಲದೇ, ಬಿಕಿನಿ ಧರಿಸಿದ ಫೋಟೋವನ್ನು ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲೇ ತೆಗೆದುಕೊಂಡಿದ್ದೆ. ವಿದ್ಯಾರ್ಥಿಯ ತಂದೆ ಈ ರೀತಿ ಹೇಳಿರುವುದು ಆಕ್ಷೇಪಾರ್ಹವಾಗಿದೆ. ಇದರಿಂದಾಗಿ ನನ್ನ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.