Home latest ಚೊಚ್ಚಲ ಹೆರಿಗೆಗೆಂದು ತವರು ಮನೆಗೆ ಹೋಗುತ್ತಿದ್ದಾಗ, ಆ್ಯಕ್ಸಿಡೆಂಟ್ | ರಸ್ತೆಯಲ್ಲಿಯೇ ಮುದ್ದಾದ ಮಗುವಿಗೆ ಜನ್ಮಕೊಟ್ಟು ಪ್ರಾಣ...

ಚೊಚ್ಚಲ ಹೆರಿಗೆಗೆಂದು ತವರು ಮನೆಗೆ ಹೋಗುತ್ತಿದ್ದಾಗ, ಆ್ಯಕ್ಸಿಡೆಂಟ್ | ರಸ್ತೆಯಲ್ಲಿಯೇ ಮುದ್ದಾದ ಮಗುವಿಗೆ ಜನ್ಮಕೊಟ್ಟು ಪ್ರಾಣ ಬಿಟ್ಟ ತಾಯಿ!

Hindu neighbor gifts plot of land

Hindu neighbour gifts land to Muslim journalist

ತನ್ನ ಚೊಚ್ಚಲ ಹೆರಿಗೆಗೋಸ್ಕರ ಗಂಡನ ಮನೆಯಿಂದ ತವರು ಮನೆಗೆಂದು ಹೋಗುತ್ತಿದ್ದ ಗರ್ಭಿಣಿಗೆ ಟ್ರ‌ಕ್ ಒಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಪ್ರಾಣ ಬಿಡುವುದಕ್ಕೂ ಮೊದಲು ಮಹಿಳೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಫಿರೋಜಾಬಾದ್‌ನ ನರಖಿ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ತಾರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಆಗ್ರಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ರಾಮು ತಮ್ಮ ಗರ್ಭಿಣಿ ಪತ್ನಿ ಕಾಮಿನಿ ಜೊತೆ ಅತ್ತೆ ಮನೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಬಳಿ ಬರುತ್ತಿದ್ದಂತೆ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಮಿನಿ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ರಕ್ ಆಕೆಗೆ ಹಿಂದಿನಿಂದ ಗುದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಾಮಿನಿ ಸಾಯುವುದಕ್ಕೂ ಮುಂಚಿತವಾಗಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಘಟನೆ ನಡೆದ ಸ್ಥಳಕ್ಕಾಗಮಿಸಿದ ಪೊಲೀಸರು ಕಾಮಿನಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಹೆಂಡತಿ ಸಾವಿನಿಂದ ಗಂಡನ ಆಕ್ರಂದನ ಮುಗಿಲು ಮುಟ್ಟಿದೆ.