Home latest Pre Wedding Photo Shoot: ಪೋಲೀಸ್ ಠಾಣೆಯಲ್ಲೇ ನಡೆಯಿತು ಜೋಡಿಗಳ ಪ್ರೀ ವೆಡ್ಠಿಂಗ್ ಶೂಟ್...

Pre Wedding Photo Shoot: ಪೋಲೀಸ್ ಠಾಣೆಯಲ್ಲೇ ನಡೆಯಿತು ಜೋಡಿಗಳ ಪ್ರೀ ವೆಡ್ಠಿಂಗ್ ಶೂಟ್ !! ವಿಡಿಯೋ ವೈರಲ್ ಆಗ್ತಿದ್ದಂತೆ ಆದದ್ದೇನು ?

Hindu neighbor gifts plot of land

Hindu neighbour gifts land to Muslim journalist

Pre wedding photo shoot : ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಡಿಫರೆಂಟ್ ಆಗಿರಬೇಕು ನಿಜ. ಹಾಗಂತ ಇವರಿಬ್ಬರು ಪೊಲೀಸ್ ಠಾಣೆಯನ್ನೇ ಆಯ್ಕೆ ಮಾಡೋದ! ಹೌದು, ಆಧುನಿಕತೆಗೆ ಮಾರು ಹೋಗಿರುವ ಈ ಜೋಡಿಗಳು ಪ್ರಿ-ವೆಡ್ಡಿಂಗ್ ಫೋಟೋಶೂಟ್ ಸ್ಪೆಷಲ್ ಆಗಿರಬೇಕು ಎಂದು ಫೋಟೋ ಶೂಟ್ ನ್ನು (Pre wedding photo shoot ) ಪೊಲೀಸ್ ಠಾಣೆಯಲ್ಲಿ ಮಾಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭಾವನಾ ಎಂಬುವವರು ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಕೆಲಸ ಮಾಡುತ್ತಿದ್ದು, ಕೆಲಸದ ಬಿಡುವಿನಲ್ಲಿ ಅವರು ಕೆಲಸ ಮಾಡುತ್ತಿರುವ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಫೋಟೋಶೂಟ್ ಮಾಡಿದ್ದು, ಭಾರಿ ಟ್ರೋಲ್ ಕಾರಣವಾಗಿದ್ದಾರೆ.

ಆದರೆ ಈ ಪ್ರೀ-ವೆಡ್ಡಿಂಗ್ ಶೂಟಿಂಗ್ ಸ್ಥಳಕ್ಕಾಗಿ ಅವರು ಪಂಜಗುಟ್ಟ ಠಾಣೆಯನ್ನು ಆಯ್ಕೆ ಮಾಡಿದ್ದು ಈಗ ವಿವಾದವನ್ನು ಹುಟ್ಟುಹಾಕಿದೆ. ಇಬ್ಬರೂ ಫೋಟೋ ಗ್ರಾಫರ್ ಗೆ ಕರೆ ಮಾಡಿ, ಸರ್ಕಾರಿ ವಾಹನಗಳ ಜೊತೆ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಕ್ಷಕರು ಈ ಇಬ್ಬರ ಬಗ್ಗೆ ಕಿಡಿಕಾರಿದ್ದಾರೆ.

ಕಾಮೆಂಟ್ ನಲ್ಲಿ, ಪಂಜಗುಟ್ಟ ಪೊಲೀಸ್ ಠಾಣೆ ಯಲ್ಲಿ ಸಮವಸ್ತ್ರದಲ್ಲಿ. ಸರ್ಕಾರಿ ವಾಹನದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಇಬ್ಬರೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜನರು ದೂರುತ್ತಿದ್ದಾರೆ. ಮತ್ತು ಸಮಾಜದಲ್ಲಿ ಸಮಾನತೆ, ನ್ಯಾಯ ಕಾಪಾಡುವ ಇವರು ಹೀಗೆ ಮಾಡುವುದು ಎಷ್ಟು ಸರಿ ಎಂದಿದ್ದಾರೆ. ಅದಲ್ಲದೆ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವರನ್ನು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವರು ಇವರ ಪರ ಮಾತನಾಡಿದ್ದಾರೆ. ಆದರೆ ಈಗಾಗಲೇ ದಂಪತಿಗಳು ಆಗಸ್ಟ್ 27 ರಂದು ವಿವಾಹವಾಗಿದ್ದು, ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.