Home latest Savings Tips : ರೈತರೇ ನೀವು ಈ ಯೋಜನೆಗೆ ನೋಂದಾಯಿಸಿದರೆ ನಿಮಗೆ ಸಿಗುತ್ತೆ ತಿಂಗಳಿಗೆ ರೂ3000/-

Savings Tips : ರೈತರೇ ನೀವು ಈ ಯೋಜನೆಗೆ ನೋಂದಾಯಿಸಿದರೆ ನಿಮಗೆ ಸಿಗುತ್ತೆ ತಿಂಗಳಿಗೆ ರೂ3000/-

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಮನ್ ಧನ್ ಯೋಜನೆಯನ್ನು ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ರೂಪಿಸಲಾಗಿದೆ. ರೈತರಿಗೆ ಉಪಯುಕ್ತವಾದ ಯೋಜನೆಯೆಂದೇ ಹೇಳಬಹುದು. ಅಷ್ಟು ಮಾತ್ರವಲ್ಲದೇ, ರೈತರು ಈ ಯೋಜನೆಗೆ ನೊಂದಣಿ ಮಾಡಿಕೊಂಡರೆ, 60 ವರ್ಷವಾದ ಬಳಿಕ ತಿಂಗಳಿಗೆ ಸರ್ಕಾರದಿಂದ 3,000ರೂ. ಪಿಂಚಣಿ ಪಡೆಯಲು ಆರ್ಹರಾಗುತ್ತಾರೆ. ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಅನೇಕ, ಪಿಂಚಣಿ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದೆ. ಅವುಗಳಲ್ಲಿ ಪಿಎಂ ಕಿಸಾನ್ ಮನ್ ಧನ್ ಯೋಜನೆ ಕೂಡ ಒಂದು.

ಈ ಯೋಜನೆಗೆ ರೈತ ತನಗೆ 60 ವರ್ಷ ಆಗುವವರೆಗೆ ಕಂತುಗಳನ್ನು ಕಟ್ಟಬೇಕು. ರೈತನಿಗೆ 60 ವರ್ಷವಾದ ಬಳಿಕ ಈ ಯೋಜನೆ ಅದರಷ್ಟಕ್ಕೆ ನಿಲ್ಲುತ್ತೆ. ನಂತರ ಈ ಯೋಜನೆಯಲ್ಲಿ ನೋಂದಣಿಯಾಗಿರುವ ರೈತನಿಗೆ ಸರ್ಕಾರ ಪ್ರತಿ ತಿಂಗಳು 3000ರೂ. ಪಿಂಚಣಿ ನೀಡುತ್ತದೆ.

ಈ ಯೋಜನೆಯ ಇನ್ನೊಂದು ಆಸಕ್ತಿಕಾರ ಸಂಗತಿಯೆಂದ್ರೆ ದುಡಿಮೆಯ ಹಣ ನೀಡಬೇಕಾಗಿಲ್ಲ. ಬದಲಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಸರ್ಕಾರ ರೈತನಿಗೆ ನೀಡುವ 6 ಸಾವಿರ ರೂ.ನಲ್ಲೇ ಈ ಮೊತ್ತವನ್ನು ಕಡಿತಗೊಳಿ ಉಳಿದ ಹಣವನ್ನು ನಿಮಗೆ ನೀಡಲಾಗುತ್ತದೆ.

18-40 ವರ್ಷ ವಯಸ್ಸಿನ ರೈತರು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ತಮ್ಮ ವಯಸ್ಸಿಗೆ ಅನುಗುಣವಾಗಿ ಅವರು ಸರ್ಕಾರದ ಖಾತೆಯಲ್ಲಿ ಪ್ರತಿ ತಿಂಗಳು 55ರೂ.ನಿಂದ 200ರೂ. ತನಕ ಠೇವಣಿಯಿಡಬಹುದಾಗಿದೆ.

ನೋಂದಣಿ ಮಾಡುವ ಬಗೆ ಹೇಗೆ ?

ನಿಮ್ಮ ಹೆಸರು ಸೇರ್ಪಡೆಗೊಳಿಸಲು ಮೊದಲು ನೀವು
ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ (PM Kisan Mandhan Yojana) ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ (PM KISAN) ನೋಂದಣಿಯಾಗಬೇಕು. ನಂತರ ನೀವು ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಜಿಯೊಂದನ್ನು ಭರ್ತಿ ಮಾಡಬೇಕು. ಅರ್ಜಿ ಭರ್ತಿ ಮಾಡಿದ ತಕ್ಷಣ ನಿಮ್ಮ ಕಂತುಗಳು (Installments) ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಈ ಯೋಜನೆಗೆ ಕಡಿತವಾಗಲು
ಪ್ರಾರಂಭವಾಗುತ್ತವೆ.

ಬೇಕಾಗುವ ದಾಖಲೆ : ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಣಿ (Register) ಮಾಡಬೇಕು. ಆಧಾರ್ ಕಾರ್ಡ್ ಪ್ರತಿ (Aadhaar card copy), 2 ಫೋಟೋಗಳು (Photos) ಹಾಗೂ ಬ್ಯಾಂಕ್ ಪಾಸ್ ಪುಸ್ತಕ (Bank passbook) ನೋಂದಣಿಗೆ ಅಗತ್ಯವಾದ ದಾಖಲೆಯಾಗಿದೆ. ಅರ್ಜಿ ಹಾಗೂ ಎಲ್ಲ ಮಾಹಿತಿಗಳನ್ನು ಸಲ್ಲಿಕೆ ಮಾಡಿದ ಬಳಿಕ ರೈತರ ವಿಶಿಷ್ಟ ಪಿಂಚಣಿ ಸಂಖ್ಯೆ (Farmer’s Unique pension number) ಪಿಂಚಣಿ ಕಾರ್ಡ್ (Pension card) ಮಾಡಲಾಗುತ್ತದೆ

2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಜಾರಿ ಮಾಡಲಾಯಿತು. ಈ ಯೋಜನೆ ಕೃಷಿ ಭೂಮಿ ಹೊಂದಿರೋ ದೇಶದ ಎಲ್ಲ ಭೂ ಹಿಡುವಳಿ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡೋ ಗುರಿ ಹೊಂದಿದೆ. ಈ ಯೋಜನೆ ಮುಖಾಂತರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳು ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ.