Home Entertainment ‘ಮಿಡಲ್ ಫಿಂಗರ್’ ತೋರಿಸಿದ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ | ನಿನಗೆ ಹಸಿವಾಗಿರಬೇಕು, ಅದು ಬೇಕಾ...

‘ಮಿಡಲ್ ಫಿಂಗರ್’ ತೋರಿಸಿದ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ | ನಿನಗೆ ಹಸಿವಾಗಿರಬೇಕು, ಅದು ಬೇಕಾ ಎಂದ ನಟ!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಟಿ ಕಂಗನಾ ರಣಾವತ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ‘ಲಾಕಪ್ ಶೋ’ ಕಾಂಟ್ರವರ್ಸಿಯಿಂದ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಈ ಶೋ ನಲ್ಲಿ ಒಬ್ಬರಿಗಿಂತ ಒಬ್ಬರು ಕಾಂಟ್ರವರ್ಸಿ ಮಾತುಗಳನ್ನು ಆಡಿದ್ದಾರೆ.

ಇಲ್ಲಿ ನಡೆಯುವುದು ಅಂತಿಂತ ಜಗಳವಲ್ಲ ದೊಡ್ಡ ಯುದ್ಧವೇ, ಮಾತಿಗೆ ಮಾತು ಬೆಳೆದರೆ ಇಡೀ ವಂಶವನ್ನು ಎಳೆದು ಮಾನ ಮರ್ಯಾದೆ ತೆಗೆಯುತ್ತಾರೆ. ಈಗಲೂ ಕೂಡ ಸಣ್ಣ ವಿಚಾರಕ್ಕೆ ದೊಡ್ಡ ಜಗಳವಾಗಿದೆ.

ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಮತ್ತು ಅಂಜಲಿ ಅರೋರಾ ಇಬ್ಬರು ಹೆಚ್ಚಾಗಿ ತಮ್ಮ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಶೋನಲ್ಲಿ ಏನೇ ಆದರೂ ಯಾವುದೇ ಟೆನ್ಶನ್ ಇಲ್ಲದೇ ಪ್ರತಿ ದಿನ ಸುಂದರವಾಗಿ ಮೇಕಪ್ ಮಾಡಿಕೊಂಡು ಚೆಂದ ಡ್ರೆಸ್ ಧರಿಸಿ ಕ್ಯಾಮೆರಾ ಮುಂದೆ ಓಡಾಡುತ್ತಿರುತ್ತಾರೆ.

ಆದರೆ ನಿನ್ನೆ ನಡೆದ ಪ್ರಸಾರವಾದ ಎಪಿಸೋಡ್‌ನಲ್ಲಿ ಯಾರೋ ಪೂನಂ ಮತ್ತು ಅಂಜಲಿ ಅವರ ಹೇರ್ ಡ್ರೈಯರ್‌ನ ಬಚ್ಚಿಟ್ಟು ತಮಾಷೆ ಮಾಡಿದ್ದಾರೆ. ಆರಂಭದಲ್ಲಿ ತಾಳ್ಮೆಯಿಂದ ಪ್ರತಿಯೊಬ್ಬರನ್ನು ಕೇಳಿದ್ದಾರೆ ಯಾರೂ ಉತ್ತರ ಕೊಡದ ಕಾರಣ ಇಡಿ ಮನೆಯವರನ್ನು ಬೈಯಲು ಶುರು ಮಾಡಿದ್ದಾರೆ.

ಹೇರ್ ಡ್ರೈಯರ್ ಹುಡುಕಿ ಸುಸ್ತಾದ ಪೂನಂಗೆ ನಂತರ ಸಿಟ್ಟು ಬಂದು ಮನೆ ಮಂದಿಗೆಲ್ಲಾ ಕೆಟ್ಟ ಮಾತಿನಿಂದ ಬೈಯುತ್ತಾಳೆ. ನಂತರ ಆಲಿ ಎಂಬ ಸ್ಪರ್ಧಿ ಮೇಲೆ ಅನುಮಾನದಿಂದ ನೇರವಾಗಿ ನನ್ನ ಡ್ರೈಯರ್ ಎಲ್ಲಿ ಎಂದು ಕೇಳುತ್ತಾರೆ. ‘ನಾನು ತೆಗೆದುಕೊಂಡಿಲ್ಲ, ಇವತ್ತು ನೋಡಿಲ್ಲ’ ಎಂದು ಆಲಿ ಹೇಳುತ್ತಾನೆ. ಕೋಪಗೊಂಡ ಪೂನಂ ‘ಈ ಮನೆಯಲ್ಲಿರುವವರು ಎಲ್ಲರೂ ಕಳ್ಳರು’ ಎನ್ನುತ್ತಾರೆ. ಆಗ ಅಲಿ, ಯಾರೋ ಒಬ್ಬರು ಮಾಡಿರುವ ತಪ್ಪಿಗೆ ಎಲ್ಲರಿಗೂ ಈ ರೀತಿ ಹೇಳುವುದು ಸರಿಯಲ್ಲ ಎಂದು ತಾಳ್ಮೆಯಿಂದ ಉತ್ತರ ನೀಡುತ್ತಾನೆ. ಆದರೆ ಪೂನಂ ಪಾಂಡೆ ಮಿಡಲ್ ಫಿಂಗರ್ ತೋರಿಸಿ ಹೊರ ನಡೆಯುತ್ತಾಳೆ. ಅಲ್ಲಿತನಕ ಸಮಾಧಾನದಿಂದ ಇದ್ದ ಆಲಿ, ಕೂಡಲೇ ‘ನನಗೆ ನೀನು ಮಿಡಲ್ ಫಿಂಗರ್ ತೋರಿಸಬೇಡ. ನಿನಗೆ ಹಸಿವಾಗುತ್ತಿರಬೇಕು ನಿನಗೆ ಅದು ಬೇಕು. ಹಾಗಾಗಿ, ಮಿಡಲ್ ಫಿಂಗರ್‌ ನನಗೆ ತೋರಿಸುತ್ತಿರುವುದು. ಈ ರೀತಿ ನನ್ನನ್ನು ನಿಂದಿಸಬೇಡ. ಯಾರು ಮಾಡಿದ್ದಾರೆ ಅವರಿಗೆ ತೋರಿಸು. ಎಲ್ಲರೂ ಕಳ್ಳರು ಎಂದು ಹೇಳಿ ನನಗೆ ಬಂದು ಫಿಂಗರ್ ತೋರಿಸಬೇಡ’ ಎಂದು ಹೇಳುತ್ತಾರೆ.