Home latest ಪೊಲೀಸ್ ಠಾಣೆಯನ್ನೇ ಬೆಡ್ ರೂಂ ಮಾಡಿದ ಪೊಲೀಸಪ್ಪ | ಕಾಮದಾಟ ಆಡುವಾಗ ರೆಡ್ ಹ್ಯಾಂಡ್ ಆಗಿ...

ಪೊಲೀಸ್ ಠಾಣೆಯನ್ನೇ ಬೆಡ್ ರೂಂ ಮಾಡಿದ ಪೊಲೀಸಪ್ಪ | ಕಾಮದಾಟ ಆಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕ ಎಎಸ್ ಐ!!!ಮುಂದೆ ಆದದ್ದೇನು?

Hindu neighbor gifts plot of land

Hindu neighbour gifts land to Muslim journalist

ಕುಡಿತ ಒಂದು ರೀತಿ ವ್ಯಸನ ಅಂತಾದರೆ ಇದು ಹೊಟ್ಟೆಯೊಳಗೆ ಹೋದ ನಂತರ ಆಗುವ ಪರಿಪಾಠ ಇದೆಯಲ್ಲ…ಜನ ನಗಾಡುವಂತೆ ಮಾಡುತ್ತೆ. ಹಾಗೇನೇ ಮರ್ಯಾದೇ ಹೋಗುವಂತೆನೂ ಮಾಡುತ್ತೆ. ಸಾರ್ವಜನಿಕರು ಮಾಡಿದರೆ ಅದೊಂಥರಾ ಮರ್ಯಾದೆ ಪ್ರಶ್ನೆ, ಆದರೆ ಪೊಲೀಸರೇ ಕುಡಿದು ಮಾಡಬಾರದ್ದನ್ನು ಮಾಡಿದರೆ ಏನಾಗಬಹುದು? ಹೇಳಿ…ಅಂಥದ್ದೇ ಒಂದು ಘಟನೆ ಇಲ್ಲಿದೆ ನೋಡಿ.

ಕಂಠಪೂರ್ತಿ ಕುಡಿದು ಮಹಿಳೆಯೊಂದಿಗೆ ಪೊಲೀಸ್ ಠಾಣೆಯಲ್ಲಿ ಚಕ್ಕಂದ ಆಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಹಿರಿಯ ಅಸಿಸ್ಟೆಂಟ್ ಸಬ್‍ಇನ್ಸ್‍ಪೆಕ್ಟರ್ (ಎಎಸ್‍ಐ) ಪೋಸ್ಟ್ ನಲ್ಲಿರುವವನೇ ಈ ಕೆಲಸ ಮಾಡಿದವನು. ಈಗ ಆತನನ್ನು ಅಮಾನತುಗೊಳಿಸಲಾಗಿದೆ.

ಹೌದು, ಈ ಪೊಲೀಸಪ್ಪ ಠಾಣೆಯನ್ನೇ ತನ್ನ ಬೆಡ್ ರೂಮ್ ಮಾಡಿಕೊಂಡಿದ್ದಾನೆ. ಎಎಸ್‍ಐ ಅಪ್ಪಾರಾವ್ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ, ದಿಢೀರ್ ಹಿರಿಯ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಅಪ್ಪಾರಾವ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡಿದ್ದಾರೆ. ಇದನ್ನು ಮೊದಲು ಕಂಡು ಶಾಕ್ ಆದ ಅಧಿಕಾರಿಗಳು, ನಂತರ ಕೋಪಗೊಂಡು, ಮಹಿಳೆಗೆ ಛೀಮಾರಿ ಹಾಕಿ ಪೊಲೀಸ್ ಠಾಣೆಯಿಂದ ಹೊರ ಕಳುಹಿಸಿದ್ದಾರೆ. ಇದೇ ಸಮಯದಲ್ಲಿ ತನ್ನದು ತಪ್ಪಾಯಿತು ಎಂದು ಈ ಎಎಸ್ ಐ ಹಿರಿಯ ಅಧಿಕಾರಿಗಳ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ್ದಾನೆ.

ರವಿಕಾಮಥಮ್ ಪೊಲೀಸ್ ಠಾಣೆಯ ಎಎಸ್‍ಐ ಅಪ್ಪಾರಾವ್ ನನ್ನು ನೈಟ್ ಡ್ಯೂಟಿ ಮಾಡಲು ಸೂಚಿಸಲಾಗಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಅಪ್ಪಾರಾವ್ ಕಂಠಪೂರ್ತಿ ಕುಡಿದು ರಾತ್ರಿ 10.30 ಕ್ಕೆ ಠಾಣೆಗೆ ಬಂದಿದ್ದಾನೆ. ಜೊತೆಗೆ ಮಹಿಳೆಯೋರ್ವಳನ್ನು ಕರೆದುಕೊಂಡು ಬಂದಿದ್ದಾನೆ. ನಂತರ ಠಾಣೆಯಲ್ಲೇ ಅಸಭ್ಯ ವರ್ತನೆ ಮಾಡಲು ಶುರು ಮಾಡಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಉಳಿದ ಪೇದೆಯವರಿಗೆ ಆವಾಜ್ ಹಾಕಿದ್ದಾನೆ.’ ನಾನು ಎಎಸ್‍ಐ ನೀನು ಹೇಳಿದ್ದನ್ನು ಮಾಡುವುದು ನನ್ನ ಕೆಲಸವಲ್ಲ’ ಎಂದು ಧಮಕಿ ಬೇರೆ ಹಾಕಿದ್ದಾರೆ.

ಬಳಿಕ ಈ ಬಗ್ಗೆ ಪೊಲೀಸ್ ಪೇದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ ಅಧಿಕಾರಿಗಳಿಗೆ ಅಪ್ಪಾರಾವ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅಪ್ಪಾರಾವ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.