

Fact Check: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಹೆಚ್ಚು ಆಕ್ಟೀವ್ ಆಗಿದ್ದು, ಸಂದೇಶ, ಮಾಹಿತಿ ಹಂಚಿಕೊಳ್ಳಲು ಸುಲಭದ ಮಾರ್ಗವಾಗಿದೆ. ಹೀಗೆ ಸಂದೇಶ ರವಾನೆ ಆಗುವಾಗ ಎಷ್ಟೋ ಬಾರಿ ಸುಳ್ಳು ಸುದ್ದಿಗಳೇ ಹೆಚ್ಚು ಸದ್ದು ಮಾಡುವುದು ಸುಳ್ಳಲ್ಲ. ಇತ್ತೀಚಿನ ದಿನಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಗಳು (Fake News) ಅತ್ಯಂತ ವೇಗವಾಗಿ ಪಸರುತ್ತಿದ್ದು, ವಂಚಕರು ಉಳಿದವರನ್ನು ವಂಚನೆಯ ಜಾಲದೊಳಗೆ ಬೀಳಿಸಲು ನಾನಾ ಕಸರತ್ತು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದೇ ರೀತಿ, (SSC)ಸ್ಟಾಫ್ ಸೆಲೆಕ್ಷನ್ ಕಮಿಷನ್ ನಕಲಿ ಖಾತೆಯ ಜೊತೆಗೆ ನಕಲಿ ಲಿಂಕ್ ಗಳನ್ನೂ ಟ್ವಿಟರ್ (Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಇದನ್ನು ನಂಬಿ ಎಷ್ಟೋ ಅಭ್ಯರ್ಥಿ ಗಳು ಮೋಸ ಹೋದರು ಅಚ್ಚರಿಯಿಲ್ಲ. SSC ಯಾವುದೇ ಅಧಿಕೃತ ಟ್ವಿಟ್ಟರ್ ಅಕೌಂಟ್ ಹೊಂದಿಲ್ಲ. ಹೀಗಾಗಿ, ಅಭ್ಯರ್ಥಿಗಳೇ ಅರ್ಜಿ ಹಾಕುವ ಮುನ್ನ ಎಚ್ಚರ ವಹಿಸುವುದು ಅವಶ್ಯಕ.
ಇತ್ತೀಚೆಗೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗವು ಪರೀಕ್ಷಾ ಅಧಿಸೂಚನೆಗಳನ್ನು ಬಿಡುಗಡೆ ಮಾಡಿರುವ ಕುರಿತು ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿತ್ತು. ಆದರೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB)ದ ಸತ್ಯ ತಪಾಸಣೆ ಘಟಕವಾದ PIB ಫ್ಯಾಕ್ಟ್ ಚೆಕ್, ಇಂತಹ ಯಾವುದೇ ಅಧಿಕೃತ ಅಕೌಂಟ್ ಇಲ್ಲ ಎಂದು ಸ್ಪಷ್ಟಪಡಿಸಿ (Fact Check)ಉದ್ಯೋಗ ಆಕಾಂಕ್ಷಿಗಳು ಮೋಸ ಹೋಗದಂತೆ ಎಚ್ಚರಿಕೆ ನೀಡಿದೆ.
ಈ ನಕಲಿ ಟ್ವಿಟ್ಟರ್ ಖಾತೆಯಲ್ಲಿ ಪರೀಕ್ಷಾ ಅಧಿಸೂಚನೆಗಳನ್ನು ತೆರೆಯಲು ಕೆಲವು ಲಿಂಕ್‌ಗಳನ್ನು ನೀಡಲಾಗಿದ್ದು, ಇದೀಗ ಪಿಐಬಿ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ಈ ಟ್ವಿಟ್ಟರ್ ಖಾತೆ ಜೊತೆಗೆ. ಅದರ ಲಿಂಕ್‌ಗಳು ಸಹ ನಕಲಿ ಎಂಬುದು ಬಹಿರಂಗವಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಜನರು ಈ ನಕಲಿ ಟ್ವಿಟರ್ ಖಾತೆಯನ್ನು ಅನುಸರಿಸಬಾರದು ಎಂದು ಮನವಿ ಮಾಡಿದ್ದು, ಪರೀಕ್ಷಾ ಅಧಿಸೂಚನೆಗಳ ಅಧಿಕೃತ ಮಾಹಿತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಉದ್ಯೋಗ ಆಕಾಂಕ್ಷಿಗಳಿಗೆ ಸೂಚಿಸಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission) ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಗೆ ಅಭ್ಯರ್ಥಿಗಳನ್ನ ಪರೀಕ್ಷೆ ಗಳು ಅಥವಾ ಸಂದರ್ಶನಗಳನ್ನು ನಡೆಸಲಾಗುತ್ತದೆ. ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in. ಇದಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಎಸ್‌ಎಸ್‌ಸಿ ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಒಂದು ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುತ್ತದೆ.
“ಒಂದು ಟ್ವಿಟ್ಟರ್ ಖಾತೆ @ssc_official__ ಸಿಬ್ಬಂದಿ ಆಯ್ಕೆ ಆಯೋಗದ (SSC) ಅಧಿಕೃತ Twitter ಹ್ಯಾಂಡಲ್ ಎಂದು ಹೇಳಿಕೊಂಡಿದ್ದು, ಈ ಖಾತೆ ನಕಲಿಯಾಗಿದ್ದು, SSC ಯಾವುದೇ ಅಧಿಕೃತ ಟ್ವಿಟ್ಟರ್ ಖಾತೆ ಹೊಂದಿಲ್ಲ. ಅಧಿಕೃತ ಮಾಹಿತಿಗಾಗಿ ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ (ssc.nic.in) ಭೇಟಿ ನೀಡಿ.. “ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ.













