Home latest Tax reduction: ಭಾರತೀಯರೇ ನಿಮಗೊಂದು ಗುಡ್ ನ್ಯೂಸ್! ಪೆಟ್ರೋಲ್, ಡೀಸೆಲ್ ಸೇರಿ ಹಲವು ವಸ್ತುಗಳ ಬೆಲೆ...

Tax reduction: ಭಾರತೀಯರೇ ನಿಮಗೊಂದು ಗುಡ್ ನ್ಯೂಸ್! ಪೆಟ್ರೋಲ್, ಡೀಸೆಲ್ ಸೇರಿ ಹಲವು ವಸ್ತುಗಳ ಬೆಲೆ ಇಳಿಕೆಗೆ ಮುಂದಾಗಿದೆ ಕೇಂದ್ರ!!

petro diesel

Hindu neighbor gifts plot of land

Hindu neighbour gifts land to Muslim journalist

ಭಾರತೀಯರೇ ನಿಮಗೊಂದು ಸಿಹಿ ಸುದ್ದಿ. ವಸ್ತುಗಳ ದರ ಗಗನಕ್ಕೇರಿ ನಿಮ್ಮ ಕೈ ಸುಡುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ನಿಮಗೆಲ್ಲ ಸಂತಸದ ಸುದ್ದಿ ನೀಡಲು ಮುಂದಾಗಿದೆ. ಇಂಧನ, ಎಣ್ಣೆ, ಜೋಳ ಇತ್ಯಾದಿ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಇದರಿಂದ ಅವುಗಳ ಬೆಲೆಯಲ್ಲಿ ಇಳಿಕೆ ಕಾಣುವ ನಿರೀಕ್ಷೆ ಇದೆ.

ಹೌದು, ಹಣದುಬ್ಬರ (Inflation) ಮಿತಿಮೀರಿ ಏರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರೊಂದಿಗೆ ವಾಹನ ಸವಾರರಿಗೆ ಖುಷಿಯ ಸುದ್ದಿ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol and Diesel Prices) ಇಳಿಕೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಎಣ್ಣೆ ಹಾಗೂ ಇತರ ವಸ್ತುಗಳ ಬೆಲೆಯಲ್ಲೂ ತುಸು ಇಳಿಕೆಯಾಗಬಹುದು.

ಒಟ್ಟಿನಲ್ಲಿ ಇಂಧನದ ಮೇಲಿನ ತೆರಿಗೆಯನ್ನು ಸರ್ಕಾರ ಕಡಿಮೆ ಮಾಡಲು ನಿರ್ಧರಿಸಿದೆ. ಹಾಗೆಯೇ, ಜೋಳ ಇತ್ಯಾದಿ ಆಹಾರವಸ್ತುಗಳ ಮೇಲಿನ ತೆರಿಗೆಯನ್ನೂ ಸರ್ಕಾರ ತಗ್ಗಿಸಲು ಯೋಜಿಸಿದೆ. ಹಣದುಬ್ಬರ ಕಡಿಮೆ ಮಾಡಲು ಆರ್​ಬಿಐ ಕೆಲ ಕ್ರಮಗಳನ್ನು ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಹೆಜ್ಜೆ ಇಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ.
ಇದೇ ವೇಳೆ, ದೇಶೀಯವಾಗಿ ಉತ್ಪಾದನೆಯಾಗುವ ಕಚ್ಛಾ ತೈಲ, ವೈಮಾನಿಕ ಟರ್ಬೈನ್ ಇಂಧನ (ATF- Aviation Turbine Fuel) ಮತ್ತು ಡೀಸೆಲ್ ರಫ್ತು ಮೇಲಿನ ವಿಂಡ್​ಫಾಲ್ ಪ್ರಾಫಿಟ್ ತೆರಿಗೆಯನ್ನು (Windfall Profit Tax) ಕಡಿಮೆಗೊಳಿಸಿದೆ.

ಅಂತಾರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ತೈಲದ ಮೇಲಿನ ತೆರಿಗೆಯನ್ನು ಪ್ರತೀ ಟನ್​ಗೆ 5,050 ರೂನಿಂದ 4,350 ರೂಗೆ ಇಳಿಸಲಾಗಿದೆ. ಇನ್ನು, ಏವಿಯೇಶನ್ ಟರ್ಬೈನ್ ಫುಯಲ್ ಮೇಲೆ ವಿಧಿಸಲಾಗುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತೀ ಲೀಟರ್​ಗೆ 6 ರೂನಿಂದ 1 ರೂಗೆ ಇಳಿಕೆ ಮಾಡಲಾಗಿದೆ. ಹಾಗೆಯೇ, ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತೀ ಲೀಟರ್​ಗೆ 7.5 ರೂನಿಂದ 3 ರೂಪಾಯಿಗೆ ತಗ್ಗಿಸಲಾಗಿದೆ!

ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಶೇ. 5.72ರಷ್ಟು ಇದ್ದ ಹಣದುಬ್ಬರ ಜನವರಿಯಲ್ಲಿ ಶೇ 6.52ಕ್ಕೆ ಹೆಚ್ಚಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತದೆ. ಪೆಟ್ರೋಲ್, ಡೀಸೆಲ್, ಎಣ್ಣೆ, ಬೇಳೆ ಕಾಳು ಇತ್ಯಾದಿ ಅಗತ್ಯವಸ್ತುಗಳ ಬೆಲೆ ನಿಯಂತ್ರಣದಲ್ಲಿದ್ದರೆ ಹಣದುಬ್ಬರವೂ ಬಹುತೇಕ ನಿಯಂತ್ರಣದಲ್ಲಿರುತ್ತದೆ. ಮನಿಕಂಟ್ರೋಲ್​ನಲ್ಲಿ ಬಂದಿರುವ ವರದಿ ಪ್ರಕಾರ ಜೋಳ ಇತ್ಯಾದಿ ವಸ್ತುಗಳಿಗೆ ಶೇ. 60ರಷ್ಟು ಸುಂಕವನ್ನು ಹಾಕಲಾಗುತ್ತಿದೆ. ಇದನ್ನು ಸರ್ಕಾರ ಕಡಿತಗೊಳಿಸಲು ಮುಂದಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಸಂಸ್ಕರಿತ ಕಚ್ಛಾ ತೈಲದ ಮಾರಾಟ ಮೂಲಕ ಸಿಕ್ಕ ಲಾಭಕ್ಕೆ ತೆರಿಗೆ ವಿಧಿಸುವ ಕ್ರಮವನ್ನು ಸರ್ಕಾರ ಕಳೆದ ವರ್ಷದಿಂದ ಜಾರಿಗೆ ತಂದಿತ್ತು. ಇಲ್ಲಿ ವಿಂಡ್​ಫಾಲ್ ಪ್ರಾಫಿಟ್ ಟ್ಯಾಕ್ಸ್ ಎಂದು ಈ ತೆರಿಗೆಯ ಹೆಸರು. ಅಂದರೆ ಅನಿರೀಕ್ಷಿತವಾಗಿ ಸಿಗುವ ಲಾಭಕ್ಕೆ ಹಾಕಲಾಗುವ ತೆರಿಗೆ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಎಂದೂ ಇದನ್ನು ಕರೆಯುವುದುಂಟು. ಈ ಮೇಲಿನ ಕ್ರಮದಿಂದ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳ ಮೇಲಿರುವ ಒತ್ತಡ ತುಸು ತಗ್ಗುವ ನಿರೀಕ್ಷೆ ಇದೆ. ಇದೂ ಕೂಡ ಬೆಲೆ ಇಳಿಕೆಗೆ ಸಹಾಯವಾಗಬಹುದು.