Home Interesting ಕೇವಲ ಒಂದು ‘ಪಾನಿಪುರಿ’ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ|ಈಕೆಯ ಎಡವಟ್ಟಿನಿಂದ ಪತಿ ಪೊಲೀಸ್ ಕೈ ವಶ

ಕೇವಲ ಒಂದು ‘ಪಾನಿಪುರಿ’ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ|ಈಕೆಯ ಎಡವಟ್ಟಿನಿಂದ ಪತಿ ಪೊಲೀಸ್ ಕೈ ವಶ

Hindu neighbor gifts plot of land

Hindu neighbour gifts land to Muslim journalist

ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತು ಜೀವವೇ ಸರಿ. ಹೀಗಿದ್ದಾಗ ನಾವು ಇಷ್ಟ ಪಟ್ಟಿದ್ದನ್ನು ಯಾರಾದರೂ ತಂದು ಕೊಟ್ರೆ ಒಂಚೂರು ಆಚೆ-ಈಚೆ ನೋಡದೆ ಸಿಕ್ಕಿದ್ದೇ ಪಂಚಾಮೃತ ಅಂದುಕೊಂಡು ಸೇವಿಸುತ್ತೇವೆ. ಆದ್ರೆ ಇಲ್ಲೊಂದು ಕಡೆ ‘ಪಾನಿಪುರಿ’ಯಿಂದ ಜೀವಕ್ಕೆ ಆಪತ್ತು ತಂದೊಡ್ಡಿದ್ದಾಳೆ ಈಕೆ. ಅದೇಗೆ ಗೊತ್ತೇ?

ಕಾರಣ ಇಷ್ಟೇ..ಪತಿ ತನ್ನನ್ನು ಕೇಳದೆ ಪಾನಿಪುರಿ ತಂದ ಎಂದು ಕೋಪಗೊಂಡ ಪತ್ನಿ ಆತನೊಂದಿಗೆ ಸಿಕ್ಕಾಪಟೆ ಜಗಳ ಆಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತೀಕ್ಷಾ ಸರ್ವದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು,ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ಆಕೆಯ ಎಡವಟ್ಟಿನಿಂದ ಪತಿ ಗಹಿನಿನಾಥ್ ಸರ್ವದೆ ಪೊಲೀಸರ ಕೈವಶವಾಗಿದ್ದಾನೆ.

ಗಹಿನಿನಾಥ್ ಅವರ ಹುಟ್ಟೂರು ಸೋಲಾಪುರ. 2019ರಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ. ಗಹಿನಿನಾಥ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಗಹಿನಿನಾಥ್ ಮತ್ತು ಪ್ರತೀಕ್ಷಾ ಇಬ್ಬರೂ ಮದುವೆಯಾದ ನಂತರ ಪದೇಪದೆ ಜಗಳವಾಡುತ್ತಿದ್ದರು. ಇತ್ತೀಚೆಗಷ್ಟೇ ಇವರಿಬ್ಬರೂ ಅಂಬೇಗಾಂವ್ ಏರಿಯಾದಲ್ಲಿ ವಾಸಿಸಲು ಶುರು ಮಾಡಿದ್ದರು. ಗಹಿನಿನಾಥ್ ಆಫೀಸಿ ನಿಂದ ಮನೆಗೆ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು. ಅದನ್ನು ನೋಡಿ ಖುಷಿಯಿಂದ ತಿನ್ನುವುದನ್ನು ಬಿಟ್ಟು ಪ್ರತೀಕ್ಷಾ, ನನ್ನನ್ನು ಕೇಳದೆ ಪಾನಿಪುರಿ ಯಾಕೆ ತಂದಿರಿ ಎಂದು ಪ್ರಶ್ನಿಸಿದ್ದಳು. ಜಗಳವನ್ನೂ ಪ್ರಾರಂಭಿಸಿದ್ದಲ್ಲದೆ ಪಾನಿಪುರಿಯನ್ನು ತಿನ್ನಲೂ ಇಲ್ಲ.

ಅಲ್ಲದೆ,ಮರುದಿನ ಬೆಳಗ್ಗೆ ಗಂಡ ಕೆಲಸಕ್ಕೆ ಹೋಗುವಾಗ ತಿಂಡಿಯನ್ನೂ ಮಾಡಿಕೊಡಲಿಲ್ಲ. ಆಕೆ ಅದಾಗಲೇ ವಿಷಯುಕ್ತ ಮಾತ್ರೆ ಸೇವಿಸಿದ್ದಳು. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇಷ್ಟಾದ ಮೇಲೆ ಪ್ರತೀಕ್ಷಾಳ ತಂದೆ ಪ್ರಕಾಶ್ ಪಿಸೆ ಗಹಿನಿನಾಥ್ ವಿರುದ್ಧ ದೂರು ನೀಡಿದ್ದಾರೆ. ಪಾನಿಪುರಿ ಕಾರಣಕ್ಕೆ ಜಗಳ ಶುರು ಮಾಡಿದ್ದರು. ಇಬ್ಬರ ನಡುವಿನ ವಾಗ್ವಾದ ತೀವ್ರರೂಪಕ್ಕೆ ಏರಿ, ಕೊನೆಗೆ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಪೊಲೀ ಸ್ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.ಅಂತೂ ಪಾನಿಪುರಿ ಒಬ್ಬರ ಜೀವನೇ ತೆಗೆಯಿತು..