Home latest ಒಂದೇ ಒಂದು ಬಾಟಲಿ ಮದ್ಯಕ್ಕೆ 90 ಸಾವಿರ ರೂ. ಕೊಟ್ಟ ವ್ಯಕ್ತಿ!!! ಯಾಕಂದ್ರೆ….

ಒಂದೇ ಒಂದು ಬಾಟಲಿ ಮದ್ಯಕ್ಕೆ 90 ಸಾವಿರ ರೂ. ಕೊಟ್ಟ ವ್ಯಕ್ತಿ!!! ಯಾಕಂದ್ರೆ….

Hindu neighbor gifts plot of land

Hindu neighbour gifts land to Muslim journalist

ಬ್ಯಾಂಕ್ ನವರು ಬ್ಯಾಂಕ್ ಡಿಟೇಲ್ಸ್, ಒಟಿಪಿ ಬಗ್ಗೆ ಮಾಹಿತಿ ನೀಡಬೇಡಿ ಎಂದು ಎಷ್ಟೇ ಹೇಳಿದರೂ ಯಾರೂ ಯಾವುದಕ್ಕೂ ಕಿವಿಗೊಡುವುದಿಲ್ಲ. ಅದಕ್ಕೆ ಉದಾಹರಣೆಯಾಗಿದೆ ಇಲ್ಲೊಂದು ನಡೆದ ವಂಚನೆಯ ಘಟನೆ.

ಆನ್‌ಲೈನ್ ಮೂಲಕ ಮದ್ಯ ಖರೀದಿಸಲು ಮುಂದಾಗಿದ್ದ ಬೆಂಗಳೂರಿನ ನಿವಾಸಿಯೊಬ್ಬರು ಬರೋಬ್ಬರಿ 89,545 ರೂಪಾಯಿ ಕಳೆದುಕೊಂಡಿದ್ದಾರೆ. ಜೆ.ಪಿ.ನಗರದ 4ನೇ ಹಂತದ ನಿವಾಸಿ ಶ್ರೀರಾಮ್ ಅವರಿಗೆ ವಂಚನೆಗೊಳಗಾದ ವ್ಯಕ್ತಿ. ಇವರು ಆನ್ ಲೈನ್ ಮೂಲಕ ಮದ್ಯ ಖರೀದಿಸಲು ಮದ್ಯದ ಅಂಗಡಿಯ ವೆಬ್ ಸೈಟ್/ ಫೋನ್ ನಂಬರ್ ಗಾಗಿ ಹುಡುಕಾಟ ನಡೆಸಿದ್ದರು.

ಈ ವೇಳೆ ಇಂಟರ್ ನೆಟ್ ನಲ್ಲಿ ದೊರೆತ ನಂಬರ್ ಒಂದಕ್ಕೆ ಕರೆ ಮಾಡಿ ಆರ್ಡರ್ ಖಚಿತಪಡಿಸಿದ್ದರು. ಆ ಕಡೆಯಿಂದ ಮದ್ಯ ಡೆಲಿವರಿ ಮಾಡುವುದಾಗಿ ಹೇಳಿದ್ದ ವ್ಯಕ್ತಿಗಳು, ಶ್ರೀರಾಮ್ ಅವರಿಂದ ಒಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾರೆ. ಹಂತ ಹಂತವಾಗಿ 89,545 ರೂ. ವಂಚಕರ ಪಾಲಾಗಿದೆ. ಈ ಕುರಿತು ಶ್ರೀರಾಮ್ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.