Home latest NIA Raid: ದಕ್ಷಿಣ ಕನ್ನಡದ 5 ಕಡೆ ಸೇರಿ ರಾಜ್ಯಗಳ 14 ಕಡೆ NIA ಮಿಂಚಿನ...

NIA Raid: ದಕ್ಷಿಣ ಕನ್ನಡದ 5 ಕಡೆ ಸೇರಿ ರಾಜ್ಯಗಳ 14 ಕಡೆ NIA ಮಿಂಚಿನ ದಾಳಿ !

Image Credit Source: India Today

Hindu neighbor gifts plot of land

Hindu neighbour gifts land to Muslim journalist

NIA Raid: ಕೋಮು ಭಾವನೆಗಳನ್ನು ಹುಟ್ಟುಹಾಕುವ ಮೂಲಕ ಶಾಂತಿ ಕದಡುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ದೂರಿನ ಹಿನ್ನೆಲೆಯಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ವಿರುದ್ಧ ಎನ್‌ಐಎ ಇಂದು ಐದು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರದ 14 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿದ್ದು, ಹಲವಾರು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯ ಆಗಿದೆ.ಬಂಟ್ವಾಳದ 2 ಮನೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಇತರ ಐದು ಕಡೆಗಳಲ್ಲಿ ಈ ದಾಳಿ ನಡೆದಿದೆ.
ಬಂಟ್ವಾಳದ ಇಬ್ರಾಹಿಂ ಮತ್ತು ವಲಚ್ಚಿಲ್ ನಿವಾಸಿಯಾದ ಮುಸ್ತಾಕ್ ಎಂಬವರ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದ್ದು ಪೊಲೀಸರು ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ದಕ್ಷಿಣ ಕನ್ನಡದ ಹಲವು ಮನೆಗಳು, ಕೇರಳದ ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳು, ಮಹಾರಾಷ್ಟ್ರದ ನಾಸಿಕ್, ಕೊಲ್ಹಾಪುರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಬಿಹಾರದ ಕತಿಹಾರ್‌ನಲ್ಲಿ NIA ಈ ಸಂಘಟಿತ ದಾಳಿ ನಡೆಸಿದೆ. ಸಶಸ್ತ್ರ ಕೇಡರ್ ಅನ್ನು ರಚಿಸಲು PFI ಮತ್ತು ಅದರ ಉನ್ನತ ನಾಯಕತ್ವದ ಪ್ರಯತ್ನಗಳನ್ನು ತಡೆಯಲು NIA ಈ ದಾಳಿ ನಡೆಸಿದೆ.