Home latest ಹೂಸು ಬಿಡುವ ಹಸು ಸಾಕಿದರೆ ಎಚ್ಚರ | ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ಸರ್ಕಾರ...

ಹೂಸು ಬಿಡುವ ಹಸು ಸಾಕಿದರೆ ಎಚ್ಚರ | ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ಸರ್ಕಾರ !

Hindu neighbor gifts plot of land

Hindu neighbour gifts land to Muslim journalist

ಹೈನುಗಾರಿಕೆ ಮಾಡುವ ರೈತರೇ ಒಮ್ಮೆ ಹಸುಗಳನ್ನು ಕಟ್ಟಿ ಹಾಕಿದ ಕೊಟ್ಟಿಗೆ ಕಡೆ ಸುಳಿದು ಬನ್ನಿ. ನಿಮ್ಮ ಸಾಕಿದ ಹಸುಗಳು ತೇಗು ಹಾಕತ್ತಾ, ಹೂಸು ಬಿಡುತ್ತಾ ಎಂದು ಚೆಕ್ ಮಾಡ್ಕೊಳ್ಳಿ. ಅವು ತೇಗಿದರೆ ಮತ್ತು ಹೂಸು ಬಿಟ್ಟರೆ ಇನ್ಮುಂದೆ ಸರ್ಕಾರ ತೆರಿಗೆ ಹಾಕಲಿದೆ.

ಹೌದು ತಮಾಷೆ ಹಾಗೆ ಕಂಡರೂ, ಇದು ನಿಜ. ವಿಶ್ವದಲ್ಲೇ ಮೊದಲ ಬಾರಿಗೆ ನ್ಯೂಜಿಲೆಂಡ್‌ ಸರ್ಕಾರ ಹಸುಗಳು ತೇಗಿದರೆ ಹಾಗೂ ಹೂಸು ಬಿಟ್ಟರೆ ಅವುಗಳನ್ನು ಸಾಕಿದ ರೈತರ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ. ಕೃಷಿ ಉದ್ಯಮದಿಂದ ಏರುತ್ತಿರುವ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಸರ್ಕಾರ ಹೊಸ ಹವಾಮಾನ ಬದಲಾವಣೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಯಾಗಿದೆ.

ಮಿತಿಮೀರಿದ ಹೈನುಗಾರಿಕೆ ನಿಯಂತ್ರಿಸಿ ಇಂಗಾಲಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದೆ. ತೆರಿಗೆಯಿಂದ ಸಂಗ್ರಹವಾದ ಹಣವನ್ನು ಹವಾಮಾನ ಸ್ನೇಹಿ ತಂತ್ರಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಸಂಶೋಧನೆ, ಹೊಸ ತಂತ್ರಜ್ಞಾನಗಳು ಮತ್ತು ಸಬ್ಸಿಡಿಗಳಿಗೆ ಧನಸಹಾಯ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ನ್ಯೂಜಿಲೆಂಡ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೈನೋದ್ಯಮ ನಡೆಯುತ್ತಿದೆ. ದನದ ಮೂತ್ರದಲ್ಲಿ ನೈಟ್ರಸ್ ಆಕ್ಸೈಡ್ ಇದ್ದರೆ ಹಸುವಿನ ಹೂಸಿನಲ್ಲಿ ಮೀಥೇನ್ ಅನಿಲ ಇದೆ. ಇದರಿಂದಾಗಿ ಹಸಿರು ಮನೆ ( Green House effect ) ಹೆಚ್ಚಾಗುತ್ತದೆ ಎನ್ನುವುದು ನ್ಯೂಜಿಲೆಂಡ್‌ ಸರ್ಕಾರದ ವಾದ.

ನ್ಯೂಜಿಲೆಂಡ್‌ ಆರ್ಥಿಕತೆಗೆ ಹೈನುಗಾರಿಗೆ ಕೊಡುಗೆ ದೊಡ್ಡದು. ಕೇವಲ 50 ಲಕ್ಷ ಜನಸಂಖ್ಯೆ ಇರುವ ದೇಶದಲ್ಲಿ 1 ಕೋಟಿ ಡೈರಿ ಹಸುಗಳಿದ್ದರೆ 2.6 ಕೋಟಿ ಕುರಿಗಳಿವೆ.

2050 ರ ವೇಳೆಗೆ ಕೃಷಿ ಪ್ರಾಣಿಗಳಿಂದ ಮೀಥೇನ್ ಹೊರಸೂಸುವಿಕೆಯ ಪ್ರಮಾಣವನ್ನು ಶೇ.47% ಕ್ಕೆ ತಗ್ಗಿಸಲು ಸರ್ಕಾರ ಈ ಹಿಂದೆ ವಾಗ್ದಾನ ಮಾಡಿತ್ತು. ಸರ್ಕಾರಗಳು ಪ್ರಸ್ತಾಪಿಸಿದ ತೆರಿಗೆ ಅಡಿಯಲ್ಲಿ, ರೈತರು 2025 ರಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ದರವನ್ನು ಸರ್ಕಾರ ಇನ್ನೂ ನಿಗದಿ ಮಾಡಿಲ್ಲ. ಸರಕಾರದ ಈ ಹೂಸು ಕಂಟ್ರೋಲ್ ಪ್ಲಾನ್ ಸಕ್ಸಸ್ ಆಗತ್ತಾ ಗೊತ್ತಿಲ್ಲ.