Home latest Rama Mandir: ರಾಮ ಭಕ್ತರಿಗೆ ಗುಡ್ ನ್ಯೂಸ್: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನ ನಿಗದಿ:...

Rama Mandir: ರಾಮ ಭಕ್ತರಿಗೆ ಗುಡ್ ನ್ಯೂಸ್: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನ ನಿಗದಿ: ಪ್ರಧಾನಿ ಮೋದಿಯಿಂದ ಉದ್ಘಾಟನೆ!

Image source Credit: ABP News

Hindu neighbor gifts plot of land

Hindu neighbour gifts land to Muslim journalist

Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಕೊನೆಯ ಘಟ್ಟಕ್ಕೆ ತಲುಪಿದ್ದು, ಅಯೋಧ್ಯಾ ರಾಮಮಂದಿರ (Ram mandir) ಉದ್ಘಾಟನೆಯ ಶುಭ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮುಂದಿನ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ರಾಮಮಂದಿರ ಉದ್ಘಾಟನೆ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಲಿದ್ದಾರೆ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರಾಣಪ್ರತಿಷ್ಠಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಮ್ಯಾರಥಾನ್ ಸಭೆಯಲ್ಲಿ ಅನೇಕ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಅಯೋಧ್ಯೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ, ರಾಮ್ ಲಲ್ಲಾ ಅವರನ್ನ ಜನವರಿ 22, 2024ರಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಲ ಬಲ್ಲ ಮೂಲಗಳು ತಿಳಿಸಿವೆ.

ಪ್ರಾಣ ಪ್ರತಿಷ್ಠಾ ಮಹೋತ್ಸವ ನಿರ್ವಹಣಾ ಸಮಿತಿಯ ಹೊಣೆಯನ್ನು ಆರ್‌ಎಸ್‌ಎಸ್ ನಾಯಕ ಭಯ್ಯಾಜಿ ಜೋಶಿ ಹೊತ್ತಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌(Yogi Adityanath) ಪ್ರಧಾನಿ ಮೋದಿಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಉತ್ತರ ಪ್ರದೇಶ ಸಿಎಂ ಮೋದಿಯನ್ನು ಭೇಟಿಯಾಗಿ ಆಹ್ವಾನ ನೀಡುತ್ತಾರೆ ಎನ್ನಲಾಗಿದೆ

ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿಯಲ್ಲಿ ದೇವಾಲಯದ ನಿರ್ಮಾಣವು ವೇಗವಾಗಿ ಜರುಗುತ್ತಿದ್ದು, ದೇವಾಲಯದ ಗರ್ಭಗುಡಿಯಲ್ಲಿ ಸಣ್ಣ ಚಿನ್ನದ ಬಾಗಿಲನ್ನು ಕೂಡ ಸ್ಥಾಪಿಸಲಾಗುತ್ತದೆ. ದೇವಾಲಯದ ಬಾಗಿಲುಗಳ ಮೇಲೆ ನವಿಲುಗಳು, ಪಾತ್ರೆಗಳು, ಚಕ್ರಗಳು ಮತ್ತು ಹೂವುಗಳನ್ನ ಕೆತ್ತಲಾಗುತ್ತದೆ. ದೇವಾಲಯದಲ್ಲಿ 42 ಬಾಗಿಲುಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ(Sri Ram) ಭವ್ಯ ಮಂದಿರ ನಿರ್ಮಾಣವಾಗುತ್ತಿದ್ದು, ರಾಮಜನ್ಮಭೂಮಿಯಲ್ಲಿ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ದೇವಾಲಯದ ಮೊದಲ ಮಹಡಿ ಬಹುತೇಕ ಸಿದ್ಧವಾಗಿದ್ದು, ದೇವಾಲಯದ ಉದ್ಘಾಟನೆಯ ಬಳಿಕ ದೇವಾಲಯವನ್ನ ಎಲ್ಲಾ ಭಕ್ತರಿಗೆ ಶಾಶ್ವತವಾಗಿ ತೆರೆಯಲಾಗುತ್ತದೆ.

2024ರ ಜನವರಿಯಲ್ಲಿ ಶ್ರೀರಾಮನ ದೇಗುಲ ಲೋಕಾರ್ಪಣೆಯಾಗಲಿದ್ದು, ಜನವರಿ 14ರಿಂದ ಅಯೋಧ್ಯೆ ಮಂದಿರದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜನವರಿ 14ರಿಂದ 24ರ ಮಧ್ಯೆ ದೇಗುಲದಲ್ಲಿ ಅಂತಿಮ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಗರ್ಭಗುಡಿಯಲ್ಲಿ ಭಗವಾನ್ ರಾಮನ ಎರಡು ಮಗುವಿನಂತಹ ವಿಗ್ರಹಗಳು ಇರಲಿದ್ದು, ಈ ವಿಗ್ರಹಗಳಲ್ಲಿ ಒಂದು ಚಲನಶೀಲವಾಗಿರಲಿದೆಯಂತೆ. ಮತ್ತೊಂದು ಸ್ಥಿರವಾಗಿರಲಿದ್ದುಲಿದ್ದು, ಗರ್ಭಗುಡಿಯ ಗೋಡೆಗಳ ಮೇಲೆ ಬಿಳಿ ಅಮೃತಶಿಲೆಯನ್ನ ಇರಿಸಲಾಗುತ್ತದೆ.