Home latest POCSO Act: ಲೈಂಗಿಕ ಸಮ್ಮತಿಗೆ ವಯಸ್ಸಿನ ಮಿತಿ ಕಡಿತ ?! ಕೇಂದ್ರಕ್ಕೆ ಕಾನೂನು ಆಯೋಗ ಹೇಳಿದ್ದೇನು...

POCSO Act: ಲೈಂಗಿಕ ಸಮ್ಮತಿಗೆ ವಯಸ್ಸಿನ ಮಿತಿ ಕಡಿತ ?! ಕೇಂದ್ರಕ್ಕೆ ಕಾನೂನು ಆಯೋಗ ಹೇಳಿದ್ದೇನು ?!

POCSO Act

Hindu neighbor gifts plot of land

Hindu neighbour gifts land to Muslim journalist

POCSO Act: ಈಗಾಗಲೇ ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಸೆಕ್ಸ್‌ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಬೇಕು ಎಂಬ ಅಭಿಪ್ರಾಯಗಳು ಹಲವು ವಲಯಗಳಿಂದ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾನೂನು ಆಯೋಗದ ಸಲಹೆ ಯಾಚಿಸಿತ್ತು. ಅಂತೆಯೇ ಇದೀಗ ಕಾನೂನು ಆಯೋಗದ ಸಲಹೆ ಪ್ರಕಾರ, ‘ಪೋಕ್ಸೋ ಕಾಯ್ದೆಯಡಿ (POCSO Act) ಸಮ್ಮತಿಯ ಸೆಕ್ಸ್‌ಗೆ ಇರುವ 18 ವರ್ಷದ ವಯೋಮಿತಿಯನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಈ ವಯೋಮಿತಿ ಇಳಿಕೆಯ ಯಾವುದೇ ಪ್ರಯತ್ನವು, ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ ವಿರುದ್ಧದ ಹೋರಾಟಕ್ಕೆ ಅಡ್ಡಿ ಉಂಟುಮಾಡಲಿದೆ’ ಎಂದು ತಿಳಿಸಿದೆ.

ಆದರೆ ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಕೇಂದ್ರ ಕಾನೂನು ಆಯೋಗವು, ‘16-18ರ ವಯೋಮಾನದ ಮಕ್ಕಳ ವಿರುದ್ಧ ದಾಖಲಾದ ಸಮ್ಮತಿಯ ಸೆಕ್ಸ್‌ ಪ್ರಕರಣಗಳನ್ನು ನಿರ್ವಹಿಸುವ ವಿಷಯದಲ್ಲಿ ನ್ಯಾಯಾಲಯಗಳಿಗೆ ವಿವೇಚನಾಧಿಕಾರ ನೀಡಬೇಕು. ಇದಕ್ಕಾಗಿ ಕೆಲವೊಂದು ಶಾಸನಾತ್ಮಕ ತಿದ್ದುಪಡಿ ತರಬೇಕು. ಅದನ್ನು ಹೊರತುಪಡಿಸಿ ಸಮ್ಮತಿಯ ಸೆಕ್ಸ್‌ ವಯೋಮಿತಿಯನ್ನೇ ಕಡಿತ ಮಾಡಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ‘16-18ರ ವಯೋಮಾನದ ಮಕ್ಕಳ ಪ್ರಕರಣದಲ್ಲಿ ನ್ಯಾಯಾಲಯಗಳು ಕೂಡಾ ಹದಿಹರೆಯದ ಮಕ್ಕಳ ಪ್ರೀತಿಯನ್ನು ನಿಯಂತ್ರಿಸಲಾಗದು ಮತ್ತು ಸೆಕ್ಸ್‌ ಹಿಂದೆ ಕ್ರಿಮಿನಲ್‌ ಉದ್ದೇಶ ಇಲ್ಲದೇ ಇದ್ದಾಗ ಅದನ್ನು ಕೂಡಾ ಪರಿಗಣಿಸಬೇಕು’ ಎಂದು ಕಾನೂನು ಆಯೋಗ, ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಆದರೆ ಹಾಲಿ ಕಾನೂನು ಪ್ರಕಾರ,
ಹಾಲಿ ಇರುವ ಪೋಕ್ಸೋ ಕಾಯ್ದೆಗಳ ಅನ್ವಯ 18 ವರ್ಷಕ್ಕಿಂತ ಕೆಳಗಿನ ಬಾಲಕ ಮತ್ತು ಬಾಲಕಿಯರ ನಡುವೆ ಸಮ್ಮತಿ ಲೈಂಗಿಕ ಸಂಪರ್ಕ ನಡೆದರೆ, ಅದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಬಾಲಕರು ಕ್ರಿಮಿನಲ್‌ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದಿದೆ.

ಇದನ್ನೂ ಓದಿ: ಇಲ್ಲಿ ಬರೀ 3 ಲಕ್ಷ ಠೇವಣಿ ಇಡಿ, ಪ್ರತಿ ತಿಂಗಳು 20,000 ಆದಾಯ ಗಳಿಸಿ !!