Home latest ಇಟ್ಕೊಂಡವನ ಜೊತೆ ಚಕ್ಕಂದವಾಡಲು ಕಟ್ಕೊಂಡವ ಅಡ್ಡಿ | ಡಿಲ್ಲಿ ರಾಣಿ ಮಾಡಿದಳು ಸೂಪರ್ ಪ್ಲ್ಯಾನಿಂಗ್!!!

ಇಟ್ಕೊಂಡವನ ಜೊತೆ ಚಕ್ಕಂದವಾಡಲು ಕಟ್ಕೊಂಡವ ಅಡ್ಡಿ | ಡಿಲ್ಲಿ ರಾಣಿ ಮಾಡಿದಳು ಸೂಪರ್ ಪ್ಲ್ಯಾನಿಂಗ್!!!

Hindu neighbor gifts plot of land

Hindu neighbour gifts land to Muslim journalist

ಆತ ವೃತ್ತಿಯಲ್ಲಿ ಅಕೌಂಟೆಂಟ್. ಹೆಂಡತಿ ಮಗು ಇದ್ದ ಪುಟ್ಟ ಸಂಸಾರ ಆತನದ್ದು. ಆದರೆ ಒಂದು ದಿನ ರಾತ್ರಿ ಊಟ ಮಾಡಿ ಮಲಗಿದ್ದ ಆತನನ್ನು ಯಾರೋ ಹತ್ಯೆಗೈದಿದ್ದರು. ಹೆಂಡತಿಯನ್ನು ಕೇಳಿದರೆ ಗೊತ್ತಿಲ್ಲ ಅಂದಿದ್ದಳು. ಕೊಲೆ ವಾಸನೆಯ ಜಾಡು ಹಿಡಿದ ಪೊಲೀಸರಿಗೆ ದೊರೆಯಿತು ಸಾಕ್ಷಿ. ಅದೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಶಂಕರ್ ರೆಡ್ಡಿ ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದರು.
ಮಲಗಿದ್ದ ಪತಿಯ ಕುತ್ತಿಗೆಗೆ ಚಾಕುವಿನಿಂದ ಆತನ ಪತ್ನಿ ದಿಲ್ಲಿ ರಾಣಿ ಇರಿದಿದ್ದಳು. ನಂತರ ಕೈಗೆ ಸ್ವಲ್ಪ ಗಾಯ ಮಾಡಿಕೊಂಡು ಗಂಡನ ಶವದ ಪಕ್ಕದಲ್ಲಿಯೇ ಮಲಗಿ ನಾಟಕ ಆಡಿದ್ದಳು. ಅಷ್ಟು ಮಾತ್ರವಲ್ಲ ಪೊಲೀಸರು ಬರುವವರೆಗೆ ಹಾಗೇನೇ ಇದ್ದಳು ಈ ಮಳ್ಳಿ.
ಆದರೆ ನಂತರ ಪೊಲೀಸರ ತನಿಖೆ ವೇಳೆ ಪತ್ನಿಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಯಾರೋ ಅಪರಿಚಿತ ವ್ಯಕ್ತಿ ಮನೆಗೆ ಬಂದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ತನ್ನ ಮಾಂಗಲ್ಯ ಸರ ಕಿತ್ತು ಹೋಗಿದ್ದಾರೆ ಎಂದು ಡೆಲ್ಲಿ ರಾಣಿ ಪೊಲೀಸರ ಮುಂದೆ ಕತೆ ಹೇಳಿದ್ದಳು. ಆದ್ರೆ ತನಿಖೆ ವೇಳೆ ಮಾಂಗಲ್ಯ ಸರ ಮಹಿಳೆ ಬಳಿಯೇ ಪತ್ತೆಯಾಗಿತ್ತು.

ಈಕೆಗೆ ತನ್ನ ಊರಿನ ವ್ಯಕ್ತಿಯೊಂದಿಗೆ ಮಹಿಳೆ ಅಕ್ರಮ ಸಂಬಂಧ ಇತ್ತು. ಆತನ ಜೊತೆ ಸಂಚು ರೂಪಿಸಿ ಗಂಡನ ಕೊಲೆಗೆ ಡೆಲ್ಲಿ ರಾಣಿ ಸಂಚು ರೂಪಿಸಿದ್ದಳು.

ಗುರುವಾರ ರಾತ್ರಿ ಮನೆಗೆ ಬಂದ ಶಂಕರ್ ರೆಡ್ಡಿ ಊಟ ಮಾಡಿ ಗಾಢ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಪತಿಯ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ತಾನು ಸಹ ರಕ್ತದ ಮಡುವಿನಲ್ಲಿ ಸತ್ತಂತೆ ಮಲಗಿದ್ದಾಳೆ.

ಅಪ್ಪ-ಅಮ್ಮ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನು ನೋಡಿದ ಏಳು ವರ್ಷದ ಮಗು ಪಕ್ಕದ್ಮನೆ ಅವರಿಗೆ ವಿಷಯ ತಿಳಿಸಿದೆ. ನಂತರ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರು ಪತ್ನಿ ಡೆಲ್ಲಿ ರಾಣಿಯನ್ನು ಬಂಧಿಸಿದ್ದಾರೆ. ಸದ್ಯ ಡೆಲ್ಲಿ ರಾಣಿಯನ್ನು ಬಂಧಿಸಿದ ಪೊಲೀಸರಿಂದ ಮತ್ತೊರ್ವನಿಗೆ ಶೋಧ ನಡೆಸಿದ್ದಾರೆ.