Home latest Mithun Rai : KPCC ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈಗೆ ಕೊಲೆ ಬೆದರಿಕೆ! ದೂರು...

Mithun Rai : KPCC ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈಗೆ ಕೊಲೆ ಬೆದರಿಕೆ! ದೂರು ದಾಖಲು

Mithun Rai

Hindu neighbor gifts plot of land

Hindu neighbour gifts land to Muslim journalist

Mithun Rai: ಕೆಪಿಸಿಸಿ (KPCC)ಪ್ರಧಾನ ಕಾರ್ಯದರ್ಶಿಯಾಗಿರುವ ಮತ್ತು ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಚುನಾವಣೆ ಉಸ್ತುವಾರಿಯ ಹೊಣೆ ಹೊತ್ತಿರುವ ಮಿಥುನ್ ರೈ(Mithun M Rai)ಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಈ ಕುರಿತಂತೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

 

ಮಿಥುನ್ ರೈ ಅವರು ಕಳೆದ 6ತಿಂಗಳಿನಿಂದ ಮುಲ್ಕಿ ತಾಲೂಕಿನ ಕಿನ್ನಿಗೋಳಿ ಸಮೀಪದ ಮೂರು ಕಾವೇರಿಯಲ್ಲಿ ನೆಲೆಸಿ, ಮೂಡಬಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಪೋಲಿಸ್ ದೂರಿನ ಅನ್ವಯ, ಜೈ ಶ್ರೀರಾಮ್( ಅಡ್ಡಿನ್ ದೂರವಾಣಿ ಸಂಖ್ಯೆ 6360288544 ಮಹೇಶ್ ಮತ್ತು ಇತರರು)ಎಂಬ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಹನಿ ಹಿಂದೂಸ್ತಾನಿ ಮುಂಬೈ ಎಂಬ ಹೆಸರಿನಡಿಯಲ್ಲಿ “ಮಿಥುನ್ ರೈಯವರಿಗೆ ಗುಂಡಿನೂಟ ಮಾಡಿಸುತ್ತೇನೆ’ ಎಂಬ ವಿಷಯಗಳನ್ನು ಒಳಗೊಂಡ ಕೊಲೆ ಬೆದರಿಕೆಯ ಪೋಸ್ಟ್ ಅನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ರೀತಿಯ ಕೊಲೆ(Murder) ಬೆದರಿಕೆ ಸಾಮಾಜಿಕ ಜಾಲತಾಣಗಳಲ್ಲಿ (Social Media)ಹರಿದಾಡುತ್ತಿರುವ ಹಿನ್ನೆಲೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಈ ರೀತಿಯ ವರ್ತನೆಗಳನ್ನು ಖಂಡಿಸಿದ್ದು ಜೊತೆಗೆ ಮಿಥುನ್ ರೈ ವಿರುದ್ದ ಜೀವ ಬೆದರಿಕೆಯ ಪೋಸ್ಟ್ ಗಳನ್ನು(Post) ಹಾಕುತ್ತಿರುವ ವ್ಯಕ್ತಿಗಳ ಜೊತೆಗೆ ಹನಿ ಹಿಂದೂಸ್ತಾನಿ ಮುಂಬೈ ಎಂಬ ಹೆಸರಿನಲ್ಲಿ ವೈಷಮ್ಯದ ಕಿಚ್ಚನ್ನ ಹಚ್ಚುತ್ತಿರುವವರನ್ನು ಪತ್ತೆಹಚ್ಚಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದ್ದು, ಇದರ ಜೊತೆಗೆ ಮಿಥುನ್ ರೈಯವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೂಡ ಮುಲ್ಕಿ ಬ್ಲಾಕ್ ದೂರಿನಲ್ಲಿ ತಿಳಿಸಿದ್ದಾರೆ.