Home latest ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಗೆ ಬಂದ ಪ್ರೇಮಿ| ಬಂದವನೇ ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ...

ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಗೆ ಬಂದ ಪ್ರೇಮಿ| ಬಂದವನೇ ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ವಿವಾಹ ಸಮಾರಂಭಗಳು ಯಾವುದೇ ಸಿನಿಮಾ ಕಥೆಗಿಂತ ಕಮ್ಮಿ ಇಲ್ಲ. ಹಲವು ಟ್ವಿಸ್ಟ್, ರೋಚಕ ಘಟನೆಗಳು ಈಗಿನ ಮದುವೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಮದುವೆಯಲ್ಲಿ ನಡೆಯುವ ವಿಲಕ್ಷಣ ಘಟನೆಗಳನ್ನು ತೆಗೆದುಕೊಂಡೇ ಸಿನಿಮಾ ಮಾಡಬಹುದು, ಅಂತಹ ಘಟನೆಗಳು ನಡೆಯುತ್ತದೆ.

ಬಿಹಾರದ ರಾಜಧಾನಿ ಪಾಟ್ನಾ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ. ಮಂಗಳವಾರ ತಡರಾತ್ರಿ ಪ್ರೇಮಿ ತನ್ನ ಪ್ರಿಯತಮೆಯ ಮದುವೆಗೆ ಬಂದಿದ್ದು, ಮದುವೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ.

ಘಟನೆ ವಿವರ : ವಧು-ವರ ಪರಸ್ಪರ ಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಪ್ರೇಮಿ ವಿವಾಹ ಮಂಟಪಕ್ಕೆ ಆಗಮಿಸಿದ್ದಾನೆ. ಅಲ್ಲಿಯವರೆಗೆ ಚೆನ್ನಾಗಿಯೇ ನಡೆಯುತ್ತಿದ್ದ ಮದುವೆ ನಂತರ, ನಾಟಕೀಯವಾಗಿ ಮಾರ್ಪಟ್ಟಿದೆ.

ಬಂದವನೇ ನೇರವಾಗಿ ಮಂಟಪಕ್ಕೆ ತೆರಳಿದ ಪ್ರೇಮಿ, ವರನ ಕೈಯಿಂದ ಹಾರವನ್ನು ಕಿತ್ತು ವಧುವಿನ ಕೊರಳಿಗೆ ಹಾಕಿದ್ದಾನೆ. ಅಷ್ಟೇ ಅಲ್ಲ ಬಲವಂತವಾಗಿ ಆಕೆಯ ಹಣೆಯ ಮೇಲೆ ಸಿಂಧೂರವಿಟ್ಟಿದ್ದಾನೆ. ವಧು ತನ್ನನ್ನು ಬಿಟ್ಟು ಬಿಡುವಂತೆ ಆತನ ಬಳಿ ವಿನಂತಿಸಿಕೊಂಡಿದ್ದಾಳೆ. ಇನ್ನು ಈ ಘಟನೆಯಿಂದ ಮದುವೆಯ ಸ್ಥಳದಲ್ಲಿ ಹಾಜರಿದ್ದ ಅತಿಥಿಗಳು ಆಘಾತಕ್ಕೊಳಗಾಗಿದ್ದಾರೆ.

ಘಟನೆಯಿಂದ ಕೋಪಗೊಂಡ ಕೆಲವು ಅತಿಥಿಗಳು ಮತ್ತು ಸಂಬಂಧಿಕರು, ವೇದಿಕೆಯ ಮೇಲೆ ಹೋಗಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ವಧು ತನ್ನ ಪ್ರಿಯಕರನನ್ನು ಬಿಡುವಂತೆ ವಿನಂತಿಸುತ್ತಲೇ ಇದ್ದಳು. ನಂತರ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಈ ಸಿನಿಮೀಯ ಶೈಲಿಯ ಘಟನೆಯಿಂದ ಬೇಸರಗೊಂಡ ವರನ ಕಡೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ತನ್ನ ಸಂಬಂಧವನ್ನು ಮರೆಮಾಚಿ ವಧುವಿನ ಕಡೆಯವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮದುವೆಯನ್ನು ರದ್ದುಗೊಳಿಸಿದ್ದಾರೆ.