Home latest Mangalore: ಮಂಗಳೂರು: ಈದ್‌ಮಿಲಾದ್‌ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ಬ್ಯಾನರ್‌- ಹಿಂದೂ ಸಂಘಟನೆ ಆಕ್ರೋಶ!!

Mangalore: ಮಂಗಳೂರು: ಈದ್‌ಮಿಲಾದ್‌ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ಬ್ಯಾನರ್‌- ಹಿಂದೂ ಸಂಘಟನೆ ಆಕ್ರೋಶ!!

Hindu neighbor gifts plot of land

Hindu neighbour gifts land to Muslim journalist

ಈದ್‌ ಮಿಲಾದ ಹಬ್ಬವು ಸೆ.28ರಂದು ನಡೆಯಲಿದೆ. ಆದರೆ ದಕ್ಕೆಯಲ್ಲಿ ಹಸಿಮೀನು ವ್ಯಾಪರಸ್ಥರ ಸಂಘದ ಹೆಸರಲಿನಲ್ಲಿ ಬ್ಯಾನರೊಂದು ಹಾಕಲಾಗಿದ್ದು, ಇದರಲ್ಲಿ ಮೀನು ವ್ಯಾಪಾರಿಗಳು ಆ ದಿನ ಕೆಲಸ ಮಾಡದೇ ಕಡ್ಡಾಯ ರಜೆ ಮಾಡಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ ಕಾಲ ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ನಿಷೇಧ ಹೇರಲಾಗುವುದು ಎಂದು ಬ್ಯಾನರಿನಲ್ಲಿ ಹಾಕಲಾಗಿದೆ. ಈ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತು ಬಜರಂಗದಳ, ವಿಶ್ವಹಿಂದು ಪರಿಷತ್‌ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಧಕ್ಕೆಯಲ್ಲಿ ಈ ರೀತಿ ದಂಡನೆ ವಿಧಿಸಲು ಷರಿಯತ್‌ ಕಾನೂನು ಇಲ್ಲಿ ಜಾರಿಯಲ್ಲಿದೆಯೇ? ಎಂದು ಬಜರಂಗದಳ ಮುಖಂಡ ಶರಣ್‌ ಪಂಪ್‌ವೆಲ್‌ ಪ್ರಶ್ನೆ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ಹಿಂದು ವ್ಯಾಪಾರಿಗಳು ಮಣಿಯರಬಾರದು. ನಿಮ್ಮ ಜೊತೆಗೆ ಹಿಂದು ಸಮಾಜ ಇದೆ. ಹಾಗಾಗಿ ಪೊಲೀಸ್‌ ಇಲಾಖೆ ತಕ್ಷಣ ಈ ಬ್ಯಾನರನ್ನು ತೆರವು ಮಾಡಬೇಕೆಂಬ ಆಗ್ರಹ ಮಾಡಿದ್ದಾರೆ.