Home latest ಸಿನಿಮಾ ಡ್ಯಾನ್ಸರ್ ಮಾತು ನಂಬಿ ಲಾಡ್ಜ್ ಗೆ ಹೋದ 14 ವರ್ಷದ ಬಾಲಕಿ| ಅಲ್ಲಿ...

ಸಿನಿಮಾ ಡ್ಯಾನ್ಸರ್ ಮಾತು ನಂಬಿ ಲಾಡ್ಜ್ ಗೆ ಹೋದ 14 ವರ್ಷದ ಬಾಲಕಿ| ಅಲ್ಲಿ ನಡೆಯಿತು ಆಕೆಯ ಮೇಲೆ ಅತ್ಯಾಚಾರ|

Hindu neighbor gifts plot of land

Hindu neighbour gifts land to Muslim journalist

ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸಿನಿಮಾ ಗ್ರೂಪ್ ಡಾನ್ಸರ್ ಸೇರಿದಂತೆ ಮೂವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

14 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಅವಳದೇ ಏರಿಯಾದಲ್ಲಿ ವಾಸವಿದ್ದ ಜಯಸೂರ್ಯ ಎಂಬಾತನ ಜೊತೆ ಪರಿಚಯವಿತ್ತು. ಈ ಜಯಸೂರ್ಯ ತಾನು ಸಿನಿಮಾದ ಗ್ರೂಪ್ ಡ್ಯಾನ್ಸರ್ ಎಂದೆಲ್ಲಾ ಹೇಳಿ ಹುಡುಗಿಯ ಪರಿಚಯ ಮಾಡಿಕೊಂಡಿದ್ದ. ಅಷ್ಟು ಮಾತ್ರವಲ್ಲದೇ ಪ್ರೀತಿಸುತ್ತಿದ್ದೇನೆ ಎಂದು ನಂಬಿಕೆ ಹುಟ್ಟಿಸಿದ್ದ.

ನಂತರ ಒಂದು ದಿನ ಆಕೆಯನ್ನು ಖಾಸಗಿ ಹೋಟೆಲ್‌ನ ಬಾಡಿಗೆ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಇದೇ ಸಂದರ್ಭದಲ್ಲಿ ಮಗಳು ಕಾಣಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯ ಪಾಲಕರು ಅರುಂಬಕ್ಕಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಶೋಧ ಕಾರ್ಯ ಆರಂಭಿಸಿದಾಗ ಯುವಕರ ಗುಂಪೊಂದು ಹುಡುಗಿಯರನ್ನು ಹೋಟೆಲ್‌ಗೆ ಕರೆತಂದು ಅವರ ಜೊತೆ ಸಮಯ ಕಳೆಯುವ ಹವ್ಯಾಸ ಇಟ್ಟುಕೊಂಡಿದ್ದಾರೆ ಎಂಬ ರಹಸ್ಯ ಮಾಹಿತಿ ಪೊಲೀಸರಿಗೆ ದೊರೆಯುತ್ತದೆ.

ಈ ಸುಳಿವನ್ನು ಆಧರಿಸಿ ಹೋಟೆಲ್ ಮೇಲೆ ದಾಳಿ ಮಾಡಿದಾಗ ಸಂತ್ರಸ್ತ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಅದೇ ಕೋಣೆಯಲ್ಲಿದ್ದ ಮೂವರನ್ನು ಸಹ ಪೊಲೀಸರ ಬಂಧಿಸಿದ್ದಾರೆ. ಮೂವರ ವಿರುದ್ಧವೂ ಫೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.