Home latest ರಜೆ ಬೇಕೇ? ಈತನ ಮುಂದೆ ಬೆತ್ತಲಾಗಿ ನಿಲ್ಲಬೇಕು | ಮಹಿಳಾ ಸಿಬ್ಬಂದಿಗಳ ಜೊತೆ ಅಸಹ್ಯ ಮಾತನಾಡೋ...

ರಜೆ ಬೇಕೇ? ಈತನ ಮುಂದೆ ಬೆತ್ತಲಾಗಿ ನಿಲ್ಲಬೇಕು | ಮಹಿಳಾ ಸಿಬ್ಬಂದಿಗಳ ಜೊತೆ ಅಸಹ್ಯ ಮಾತನಾಡೋ ಸಹಾಯಕ ಆಡಳಿತಾಧಿಕಾರಿ!!!

Hindu neighbor gifts plot of land

Hindu neighbour gifts land to Muslim journalist

ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ರೀತಿಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುವ ವ್ಯಕ್ತಿಯೊಬ್ಬ ಇದ್ದಾನೆ. ಕೊಪ್ಪಳ ಎಸ್ಸಿ ಕಚೇರಿಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ಮಹಿಳಾ ನೌಕರರಿಗೆ ಸಹಾಯಕ ಆಡಳಿತಾಧಿಕಾರಿ ಮಲ್ಲಿನಾಥ ಎಂಬಾತನ ಮೇಲೆಯೇ ಲೈಂಗಿಕ ಕಿರುಕುಳದ ಆರೋಪ ಬಂದಿದೆ. ಈತ ನಡೆಸುವ ಕಾಮದಾಟದ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವೀಡಿಯೋ ಸಹಿತ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ಸೇರಿರುವ ವಿಧವೆಯರನ್ನೂ ಮಲ್ಲಿನಾಥ ಲೈಂಗಿಕವಾಗಿ ಬಳಸಿಕೊಂಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆಯಂತೆ.

ಈತನ ಉಪಟಳ ಹೆಚ್ಚಾಗಿ ಮಹಿಳಾ ಸಿಬ್ಬಂದಿಗಳು ನ್ಯಾಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮಹಿಳಾ ಸಿಬ್ಬಂದಿ ರಜೆ ಕೇಳಿದರೆ, ಅಸಂಬದ್ಧವಾಗಿ ಮಾತನಾಡುತ್ತಾನಂತೆ. ‘ನಿನಗೆ ಗಂಡ ಇಲ್ಲ ರಜೆ ಏಕೆ ಬೇಕು? ನಾನು ಮನೆಗೆ ಬರಲೇ’ ಅಂತಾನಂತೆ! ಇಷ್ಟು ಮಾತ್ರವಲ್ಲದೇ ಆಫೀಸ್ ಕ್ಲೀನ್ ಮಾಡುವ ಹೆಂಗಸರನ್ನು ಕೂಡಾ ಈತ ಬಿಟ್ಟಿಲ್ವಂತೆ. ಅವರೊಂದಿಗೆ ಕೂಡಾ ‘ನಿನ್ನ ಬಾಡಿ ಶೇಪಿಂಗ್ ಚೆನ್ನಾಗಿದೆ, ಏನು ತಿನ್ತೀಯಾ?’ ಎಂದು ಹೇಳ್ತಾನಂತೆ. ರಜೆ ಬೇಕಿದ್ರೆ ಕೇಳು ಕೊಡ್ತೀನಿ, ಆದರೆ ಒಂದು ರಾತ್ರಿ ನನ್ನೊಂದಿಗೆ ಲಾಡ್ಜ್ ಗೆ ಬರಬೇಕು ನಿನಗೆ ಹಣದ ಜತೆಗೆ ಸುಖವನ್ನೂ ಕೊಡ್ತೀನಿ’ ಎಂದು ಆಫರ್ ಮಾಡ್ತಾನಂತೆ.

ಮಲ್ಲಿನಾಥನ ಕಾಟಕ್ಕೆ ಬೇಸತ್ತು 2019ರಲ್ಲೇ ಇಬ್ಬರು ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಈ ಸಂಬಂಧ ಮಲ್ಲಿನಾಥನಿಗೆ ಶೋಕಾಸ್ ನೋಟಿಸ್ ನೀಡಿದರೂ ಏನೂ ಪ್ರಯೋಜನ ಆಗಿಲ್ಲ. ಆದರೆ ಯಾವಾಗ ಎಸ್ಪಿ ವರ್ಗಾವಣೆ ಆದರೋ ನಂತರ ಮಲ್ಲಿನಾಥ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ

2019ರಲ್ಲಿ ಬಂದ ದೂರನ್ನ ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಡಿವೈಎಸ್‌ಪಿ ಅವರು ತನಿಖೆ ನಡೆಸಿದಾಗ ದೂರುದಾರರ ಜಾಗದಲ್ಲಿದ್ದ ಹೆಸರಿನ ಮಹಿಳಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಮಹಿಳೆ ನಾವು ದೂರೇ ಕೊಟ್ಟೇ ಇಲ್ಲ ಎಂದು ಹೇಳಿದ್ದಾರಂತೆ. ಆದರೆ ಅಧಿಕಾರಿಯನ್ನ ರಕ್ಷಿಸಲು ಒತ್ತಡ ಹಾಕಿ ಸುಳ್ಳು ಹೇಳಿಸಿರುವ ಗುಸು ಗುಸು ಮಾಹಿತಿ ಇದೆ. ಆದರೂ ಸರ್ಕಾರಿ ಕಚೇರಿಯಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದು ಎಷ್ಟು ಸರಿ? ಇದು ಇಬ್ಬರು ಒಪ್ಪಿ ಮಾಡಿದ ಕೆಲಸವಾದರೂ ಸರ್ಕಾರಿ ಕಚೇರಿಯನ್ನು ವೈಯಕ್ತಿಯ ಕೆಲಸಕ್ಕೆ ಬಳಸಿಕೊಂಡದ್ದು ದುರ್ನಡತೆ ಅಲ್ಲವೇ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.