Home latest ಇದೆಂಥಾ ಭಕ್ತಿಯ ಪರಾಕಾಷ್ಠೆ | ಇಲ್ಲಿ ನೋಡಿ ಒಬ್ಬ ಏನು ಮಾಡಿದ್ದಾನೆ ಅಂತ! ಭಕ್ತರು ಹೀಗೂ...

ಇದೆಂಥಾ ಭಕ್ತಿಯ ಪರಾಕಾಷ್ಠೆ | ಇಲ್ಲಿ ನೋಡಿ ಒಬ್ಬ ಏನು ಮಾಡಿದ್ದಾನೆ ಅಂತ! ಭಕ್ತರು ಹೀಗೂ ಮಾಡ್ತಾರಾ!

Hindu neighbor gifts plot of land

Hindu neighbour gifts land to Muslim journalist

ಭಕ್ತಿ ಎಂಬುವುದು ಅವರವರಿಗೆ ಬಿಟ್ಟದ್ದು. ಎಲ್ಲರೂ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಅವರವರ ಇಚ್ಛೆ ಪ್ರಕಾರ ಅರ್ಪಿಸುವುದು ಸಾಮಾನ್ಯ. ಆದರೆ ಕೆಲವು ಭಕ್ತರು ಮಾಡುವ ಭಕ್ತಿಯ ಪರಾಕಾಷ್ಠೆ ನಿಜಕ್ಕೂ ಹೀಗೂ ಮಾಡ್ತಾರಾ ಅನ್ನೋ ತರಹ ಇರುತ್ತೆ. ಹೌದು, ಈ ವಿಷಯ ನಾವು ಯಾಕೆ ಹೇಳ್ತಾ ಇದ್ದೀವಿ ಅಂದರೆ ಇಲ್ಲೊಬ್ಬ ಭಕ್ತ ತನ್ನ ಭಕ್ತಿಯನ್ನು ನಾಲಗೆ ಕಟ್ ಮಾಡುವ ಮೂಲಕ ತೋರಿಸಿದ್ದಾನೆ.

ಕೌಶಂಬಿಯ ಮಾ ಶೀಟ್ಲಾ ದೇವಸ್ಥಾನದಲ್ಲಿ ಭಕ್ತನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆ ನಡೆದಿರುವ ಘಟನೆಯೊಂದು ನಡೆದಿದೆ. ಈ ಬಗ್ಗೆ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅಂಧ ಶ್ರದ್ಧೆಯೋ ಭಕ್ತಿಯ ಪರಾಕಾಷ್ಠೆಯೋ ಎಂಬಂತೆ ದೇಹದ ಪ್ರಧಾನ ಅಂಗವನ್ನೇ ಕತ್ತರಿಸಿದ ಕೌಶಂಬಿ ನಿವಾಸಿ ಸಂಪತ್ (38) ಎಂಬ ಭಕ್ತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ಸಂಪತ್ ಪತ್ನಿ ಬನ್ನೋ ದೇವಿ ದೇವಸ್ಥಾನಕ್ಕೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಪ್ರದಕ್ಷಿಣೆ ಪೂರ್ಣಗೊಳಿಸಿದ ನಂತರ, ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವಾಲಯದ ಬಾಗಿಲಿನ ಚೌಕಟ್ಟಿನಲ್ಲಿ ಇಟ್ಟಿದ್ದಾನೆ ಎಂದು ಕರ್ಹಾ ಧಾಮ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಭಿಲಾಷ್ ತಿವಾರಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ಪತಿ ವ್ಯಕ್ತಪಡಿಸಿದ್ದರು ಎಂದು ಬನ್ನೋ ದೇವಿ ಹೇಳಿದ್ದಾರೆ.