Home latest ತೆಂಗಿನ ಮರ ಏರಿ ಪ್ರಜ್ಞೆ ಕಳೆದುಕೊಂಡ ಆಸಾಮಿ!! ಮುಂದೇನಾಯ್ತು?

ತೆಂಗಿನ ಮರ ಏರಿ ಪ್ರಜ್ಞೆ ಕಳೆದುಕೊಂಡ ಆಸಾಮಿ!! ಮುಂದೇನಾಯ್ತು?

Hindu neighbor gifts plot of land

Hindu neighbour gifts land to Muslim journalist

ಕೆಲವೊಮ್ಮೆ ಕೆಲ ಘಟನೆಗಳ ಬಗ್ಗೆ ಕೇಳಿದಾಗ ಅಚ್ಚರಿಯಾಗುತ್ತದೆ. ನಸೀಬು ಚೆನ್ನಾಗಿದ್ದರೆ ದೊಡ್ದ ಗಂಡಾಂತರ ಎದುರಾದರೂ ಕೂಡ ಸಲೀಸಾಗಿ ಬಗೆ ಹರಿಯಬಹುದು. ಆದರೆ, ಅದೇ ನಸೀಬು ಕೆಟ್ಟರೆ ಸಣ್ಣ ಎಡವಟ್ಟು ಕೂಡ ದೊಡ್ಡ ಅವಂತಾರಕ್ಕೆ ಎಡೆ ಮಾಡಿಕೊಡಬಹುದು. ಇದೀಗ, ಆಸಾಮಿಯೊಬ್ಬ ತೆಂಗಿನ ಮರಕ್ಕೆ ಹತ್ತಿ ಪ್ರಜ್ಞೆ ತಪ್ಪಿದ ಘಟನೆ ವರದಿಯಾಗಿದೆ.

ಮೈಲಸಂದ್ರ ಬಳಿ ಇರುವ ವಿಜಯಶ್ರೀ ಲೇಔಟ್​ನಲ್ಲಿ ವ್ಯಕ್ತಿಯೊಬ್ಬ ತೆಂಗಿನ ಮರ ಹತ್ತಿ ಅಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ತೆಂಗಿನ ಮರದಲ್ಲಿ ಸಿಲುಕಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಅದೃಷ್ಟವಶಾತ್ ಮರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದವನ್ನನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮೂವತ್ತು ನಿಮಿಷಗಳ ಕಾಲ ಕಾರ್ಯಾಚರಣೆಯ ಬಳಿಕ ತೆಂಗಿನ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆ ಬಳಿಕ ವ್ಯಕ್ತಿಯನ್ನು ಆಸ್ಪತ್ರೆಯ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.