Home latest ತನ್ನ ಜೊತೆ ಮಾತನಾಡಲು ನಿರಾಕರಿಸಿದ 20 ವರ್ಷದ ಯುವತಿಯನ್ನು ಸ್ಕ್ರೂಡ್ರೈವರ್ ನಿಂದ 51 ಬಾರಿ ಇರಿದು...

ತನ್ನ ಜೊತೆ ಮಾತನಾಡಲು ನಿರಾಕರಿಸಿದ 20 ವರ್ಷದ ಯುವತಿಯನ್ನು ಸ್ಕ್ರೂಡ್ರೈವರ್ ನಿಂದ 51 ಬಾರಿ ಇರಿದು ಕೊಂದ ಪಾಪಿ!!!

Hindu neighbor gifts plot of land

Hindu neighbour gifts land to Muslim journalist

20 ವರ್ಷದ ಯುವತಿಯೋರ್ವಳನ್ನು ವ್ಯಕ್ತಿಯೋರ್ವ ಸ್ಕ್ರೂ ಡ್ರೈವರ್ ನಿಂದ ಮನಸೋ ಇಚ್ಛೆ 51 ಬಾರಿ ಇರಿದ ಘಟನೆಯೊಂದು ನಡೆದಿದೆ‌. ಹೌದು, ತನ್ನ ಜೊತೆ ಮಾತನಾಡಲು ನಿರಾಕರಿಸಿದ್ದಾಳೆ ಎಂಬುವುದೇ ಈ ಘೋರ ಕೃತ್ಯದ ಹಿಂದಿನ ಕಾರಣ. ಈ ಘಟನೆ ಛತ್ತೀಸ್ಗಢ ದಲ್ಲಿ ನಡೆದಿದೆ.

ಕಳೆದ ಶನಿವಾರ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಎಸ್ ಇಸಿಎಲ್)ನ ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಜಶ್ರು‌ ಜಿಲ್ಲೆಯ ನಿವಾಸಿಯಾಗಿದ್ದು, ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯನ್ನು ಭೇಟಿಯಾಗಲು ಆರೋಪಿ ಬಂದಿದ್ದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಕೊನೆಗೆ ಆತ ಆಕೆಯ ಬಾಯಿಯನ್ನು ಕಟ್ಟಿ ಸ್ಕೂ ಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ಸಹೋದರ ಸೋಮವಾರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದನು. ಆತ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಅದೇ ಬಸ್ ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿ ನಂತರ ಕೆಲಸಕ್ಕಾಗಿ ಗುಜರಾತ್ನ ಅಹಮದಾಬಾದ್ ಗೆ ಹೋಗಿದ್ದಾನೆ‌

ಇಬ್ಬರೂ ಫೋನ್ನಲ್ಲಿ ಸಂಪರ್ಕದಲ್ಲಿದ್ದರು. ಆದರೆ ಕಾಲಕ್ರಮೇಣ ಮಹಿಳೆ ಆತನೊಂದಿಗೆ ಫೋನ್ ನಲ್ಲಿ ಮಾತನಾಡುವುದನ್ನು ನಿಲ್ಲಿಸಿದಾಗ, ಆರೋಪಿ ಅವಳನ್ನು ಭೇಟಿಯಾಗಲು ಕೊರ್ಬಾಗೆ ಬಂದಿದ್ದು ಈ ದೃಷ್ಕೃತ್ಯ ಎಸಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.