Home latest ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ| ರೆಡ್ ಹ್ಯಾಂಡ್ ಆಗಿ ಹಿಡಿದ ಮಾಲೀಕ|...

ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ| ರೆಡ್ ಹ್ಯಾಂಡ್ ಆಗಿ ಹಿಡಿದ ಮಾಲೀಕ| ಹಸುವಿನ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ ವ್ಯಕ್ತಿ ಪೊಲೀಸ್ ಸೆರೆಯಲ್ಲಿ

Hindu neighbor gifts plot of land

Hindu neighbour gifts land to Muslim journalist

ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ವಿಕೃತಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಾಮುಕ ಮಾಲೀಕನ ಕಣ್ಣಿಗೆ ಬಿದ್ದಿದ್ದು, ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದಾವಣಗೆರೆ ಮೂಲದ ತಿಂಡ್ಲು ನಿವಾಸಿ 22 ವೆಂಕಟೇಶ್ ಕುಮಾರ್ ನನ್ನು ಬಂಧಿತ ಆರೋಪಿ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರ ನಿವಾಸಿ ಮುನಿ ಹನುಮಂತಪ್ಪ ಎಂಬುವವರು ಐದು ಹಸು ಹಾಗೂ ಆರು ಕರುಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ.

ಮನೆ ಮುಂದಿನ ಬಿಡಾರದಲ್ಲಿ ಹಸುಗಳನ್ನು ಕಟ್ಟಿಕೊಂಡಿದ್ದರು. ಯಾರೋ ಅಪರಿಚಿತನೊಬ್ಬ ಫೆ.19 ರಂದು ಮಧ್ಯರಾತ್ರಿ ಬಂದು ಹಸುಗಳಿಗೆ ತೊಂದರೆ ಕೊಡುತ್ತಾನೆ ಎಂದು ನೆರೆಹೊರೆ ಮನೆಯವರು ದೂರಿದ್ದರು. ಹಾಗಾಗಿ ಫೆ.20 ರಂದು ರಾತ್ರಿ ಆಗಂತುಕನ ಪತ್ತೆಗಾಗಿ ಅಡಗಿಕೊಂಡಿದ್ದರು. ಅಂದುಕೊಂಡಂತೆ ಮಧ್ಯರಾತ್ರಿ ಅಪರಿಚಿತ ಹಸುವಿರುವ ಜಾಗಕ್ಕೆ ಆಗಂತುಕ ಬಂದಿದ್ದಾನೆ. ಆಚೆ ಈಚೆ ನೋಡಿ ಬಟ್ಟೆ ಬಿಚ್ಚಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಹಸುವಿನ ಮಾಲೀಕ ಬಂದು ನೋಡಿದಾಗ ಅಪರಿಚಿತ ವ್ಯಕ್ತಿಯು ಅದೇ ಏರಿಯಾದ 22 ವರ್ಷದ ವೆಂಕಟೇಶ್ ಎಂದು ಗೊತ್ತಾಗಿದೆ. ನಂತರ ದೂರು ದಾಖಲಿಸಿಲಾಗಿದೆ. ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಐಪಿಸಿ 377 ಹಾಗೂ ಅನಿಮಲ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ವ್ಯಕ್ತಿಯನ್ನು ಜೈಲಿಗಟ್ಟಿದ್ದಾರೆ.