Home latest ರೈಲ್ವೇ ಫ್ಲಾಟ್ ಫಾರ್ಮ್ ನಲ್ಲಿ ಮಲಗಿದ್ದ ಹೆಂಡತಿಯನ್ನು ರೈಲಿನ ಮುಂದೆ ತಳ್ಳಿ ಕೊಂದ ಪಾಪಿ ಗಂಡ...

ರೈಲ್ವೇ ಫ್ಲಾಟ್ ಫಾರ್ಮ್ ನಲ್ಲಿ ಮಲಗಿದ್ದ ಹೆಂಡತಿಯನ್ನು ರೈಲಿನ ಮುಂದೆ ತಳ್ಳಿ ಕೊಂದ ಪಾಪಿ ಗಂಡ | ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಪುಟ್ಟ ಮಕ್ಕಳ ತಾಯಿಯೋರ್ವಳನ್ನು ಪಾಪಿ ಗಂಡ, ಚಲಿಸುತ್ತಿದ್ದ ರೈಲಿಗೆ ತಳ್ಳಿ, ಆಕೆಯನ್ನು ಸಾವಿನ ದವಡೆಗೆ ಸಿಲುಕಿಸಿ, ಹೆತ್ತ ಮಕ್ಕಳನ್ನು ತಾಯಿ ಇಲ್ಲದ ಹಾಗೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸೋಮವಾರ ಪಾಲ್ಘಾರ್ ಜಿಲ್ಲೆಯ ವಸೈ ರೋಡ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಚಲಿಸುತ್ತಿದ್ದ ರೈಲಿನ ಎದುರು ತಳ್ಳಿ, ಕೊಲೆ ಮಾಡಿ ಆ ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ.

30 ವರ್ಷದ ಆಸುಪಾಸಿನ ವ್ಯಕ್ತಿ ಮಲಗಿದ್ದ ತನ್ನ ಹೆಂಡತಿಯನ್ನು ಎಬ್ಬಿಸಿ, ನಂತರ ಪ್ಲಾಟ್‌ಫಾರ್ಮ್‌ನ ಅಂಚಿಗೆ ಕರೆದುಕೊಂಡು ಬಂದು, ಕೂಡಲೇ ಆಕೆಯನ್ನು ಚಲಿಸುವ ಎಕ್ಸ್‌ಪ್ರೆಸ್ ರೈಲಿನ ಮುಂದೆ ತಳ್ಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಚಲಿಸುತ್ತಿದ್ದ ರೈಲಿನ ಎದುರು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೆಂಡತಿಯನ್ನು ಕೊಂದ ಬಳಿಕ ಆ ವ್ಯಕ್ತಿ ತನ್ನ ಇಬ್ಬರು ಮಕ್ಕಳೊಂದಿಗೆ ರೈಲ್ವೆ ನಿಲ್ದಾಣದಿಂದ ಪರಾರಿಯಾಗಿದ್ದಾನೆ. ಈ ಸಂಪೂರ್ಣ ಘಟನೆ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂತ್ರಸ್ತೆ ತನ್ನ ಮಕ್ಕಳೊಂದಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ 5ರಲ್ಲಿ ಮಲಗಿದ್ದಾಗ ಆಕೆಯ ಪತಿ ಅವಳನ್ನು ಎಬ್ಬಿಸಿ, ಅವರ್ ಎಕ್ಸ್‌ಪ್ರೆಸ್ ರೈಲಿನ ಮುಂದೆ ತಳ್ಳಿ ಕೊಂದಿದ್ದಾನೆ ಎಂದು ರೈಲ್ವೆ ಸಹಾಯಕ ಪೊಲೀಸ್ ಆಯುಕ್ತ ಬಾಜಿರಾವ್ ಮಹಾಜನ್ ಹೇಳಿದ್ದಾರೆ. ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆಯ ವಿಡಿಯೋದಲ್ಲಿ ಆರೋಪಿ ತನ್ನ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಪರಾರಿಯಾಗುತ್ತಿರುವುದು ಕಂಡುಬಂದಿದೆ. ಆರೋಪಿಯು ದಾದರ್‌ಗೆ ರೈಲು ಹತ್ತಿ ಅಲ್ಲಿಂದ ಕಲ್ಯಾಣ್‌ಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ದಂಪತಿಗಳು ಗಲಾಟೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕೃತ್ಯಕ್ಕೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಇದರ ನಡುವೆ ವಸೈ ರೋಡ್ ರೈಲ್ವೇ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.